ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲವನರಿಯಬಹುದೆ ಎಂದು ನಾನು ತಿಳಿಯಲು ಎಲ್ಲವನರಿಯದೆ ನಿರ್ಲೇಪಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಸಳು ಬಿಳಿದು ಆ ಎಸಳ ಕಂಪಿನ ವರ್ಣದ ಮುಂದೆ ಕಂಪಿನ ಕುಸುಮವ ನೋಡ ನೋ[ಡ] ಹೋದರೆ ಆ ಎಸಳೆಸಳಿಗೆ ಒಂದು ತುಂಬಿಗಳ ಬಳಗವ ಮೂರುತಿಗೂಡಿದರು. ಆ ಮೂರುತಿಯ ಇರವನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಎನಗಿನ್ನಾರು ಗತಿಯಿಲ್ಲವಯ್ಯ ಎನಗಿನ್ನಾರು ಪ್ರತಿಯಿಲ್ಲವಯ್ಯ. ಎನ್ನಯ್ಯನ ಪ್ರಾಣವೇ ನಾನಾದ ಕಾರಣ ಎನಗಿನ್ನಾರು ಸರಿಯ ಕಾಣೆನಯ್ಯ. ಎನಗೆ ಮುಖವನರಿಯದಿರಲು ಮುಖಸ್ವರೂಪಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಸಳ ಪಂಜರದ ಪಕ್ಷಿಯೆ ನೀನೆಲ್ಲಿ ತೋರಿ ಎಲ್ಲಿಯಡಗಿದೆ ? ಎತ್ತಳ ಭ್ರಮೆ ಎತ್ತಳನುಕೂಲತೆ, ಎನಗೆತ್ತಳ ಮಾಯದ ಸಂಗವಯ್ಯ ? ನಾನೆತ್ತಲಿ ? ಬಸವನೆತ್ತ ? ಮನವೆತ್ತ ?ತನುವೆತ್ತ ? ಸಂಗಯ್ಯನೆತ್ತ ಹೋಗತ್ತ.
--------------
ನೀಲಮ್ಮ
ಎಸಳಕ್ಷರವ ಕಂಡು ಎಸಳ ಬಗೆಯ ತಿಳಿದು ನಿಜಸುಖಿಯಾದೆನಯ್ಯ ನಾನು. ಇಷ್ಟ ಪ್ರಾಣ ಭಾವದಲ್ಲಿ ಪ್ರಸನ್ನ ಮೂರುತಿಯ ನೆಲೆಯ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಎಯ್ದದು ಎಯ್ದದು ಈ ಮನ ಬಸವನಲ್ಲಿ. ಎಯ್ದದು ಎಯ್ದದು ಈ ಪ್ರಾಣ ಬಸವನಲ್ಲಿ. ಎಯ್ದದು ಎಯ್ದದು ಈ ಸುಖ ಬಸವನಲ್ಲಿ. ಎಲ್ಲವನೆಯ್ದಿದ ಬಸವನಲ್ಲಿ ನಿರ್ಲೇಪಿ ನಾನಾದೆನು. ನಾನು ನಿರ್ಲೇಪಿಯಾಗಿ ಕುಳವ ಹರಿದೆನಯ್ಯಾ. ಕುಳವಳಿದು ಸಂಗಯ್ಯಾ, ಬಸವ ನಾನಾದೆನು.
--------------
ನೀಲಮ್ಮ
ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ; ರೂಪಿಂಗೆ ನಿರೂಪಿಲ್ಲ. ನಿರೂಪಳಿದು ನಿರಾಕುಳವಾಗಿ ನೀರಸಂಗಕ್ಕೆ ಹೋದರೆ, ಆ ನೀರು ಬಯಲಾಳವ ತೋರಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎಲೆ ಶರಣರಿರಾ, ಎಲೆ ಭಕ್ತರಿರಾ, ಭಕ್ತಿಕಾಂಡದ ಮೂಲಿಗನ ಕಾಣಿರೆ ಬಸವನ ? ಆ ಭಕ್ತಿಯಸಂಗದ ಶಿವೈಕ್ಯನ ಕಾಣಿರೆ ಬಸವನ ? ಭಕ್ತಿಯ ನಿಜಸಮಾಧಿಯಸುಖವ ಕರುಣಿಸುವ ಅಯ್ಯ ಬಸವನ, ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು ?
--------------
ನೀಲಮ್ಮ
ಎನ್ನ ಕೈಯಳ ಮಾತುವೆನ್ನಕೈಯಲಡಗಿತ್ತು. ಎನ್ನ ವಿಧಾನದ ಜ್ಯೋತಿ ವಿವೇಕದಲ್ಲಿಯಡಗಿತ್ತು. ವಿನೇಯದ ಸುಖವ ಕಂಡು ನಾನು ನಿರ್ಮಲಾಂಗಿಯಾದೆನು. ಭ್ರಮೆಯಳಿದು ಭಕ್ತಿಯಳಿದು ಭಾವ ನಿರ್ಭಾವವಾಗಿ, ತನುಸೂತಕ ಮನಸೂತಕವ ಕಳೆದು ನಾನು ಬ್ರಹ್ಮದ ನೆಮ್ಮುಗೆಯಲ್ಲಿ ಸುಮ್ಮನಿದ್ದೆನು ಸುಖ ದುಃಖಗಳಡಗಿ ನಿರಾಲಂಬಿಯಾದೆನಯ್ಯ ಸಂಗಯ್ಯ ಬಸವನೆನ್ನಲ್ಲಿಯಡಗಲು.
--------------
ನೀಲಮ್ಮ
ಎನ್ನಯ್ಯನೆನ್ನಲ್ಲಿಯಡಗಿದನೆಂದು ನಾ ನಂಬಿರಲು, ಎನ್ನಯ್ಯನೆನ್ನಲ್ಲಿಯಡಗದೆ ಬಯಲನೈದಿದನು. ಬಯಲಾಕಾರವಾದ ಪುತ್ಥಳಿಯೆಂದು ಭ್ರಮೆಗೊಳಿಸಲು ಸುಖಾಕಾರಮೂರ್ತಿಯಲ್ಲಿ ಸುಯಿದಾನ ರೂಪನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎನಗಿನ್ನೇನು ಎಮ್ಮಯ್ಯನೈಕ್ಯವನೈದಿದ ಬಳಿಕ, ಎನಗೆ ಕಾಯವಿಲ್ಲ; ಎನಗೆ ಪ್ರಾಣವಿಲ್ಲ. ಎನಗೆ ಹೃದಯದ ಹಂಗು ಹರಿದು ಪರಿಣಾಮಪ್ರಸಾದಿಯಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಎಸಳೆಸಳ ಮಾಡಿಸಲು ಎಸಳೆಸಳಿಂಗೆ ಇರವ ಕಂಡು ಬದುಕಿದೆನಯ್ಯ. ಬಯಲ ಪರಿಣಾಮವ ಕಂಡು ಬಯಲನೈದಿದೆನು. ಆ ಬಯಲಿಂಗೆ ಈ ಬಯಲ ಸುಖವ ಕೂಡಿಸಿ ಸುಖಪರಿಣಾಮಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು ಎನಗೆ ಸಂಸಾರವಿಲ್ಲವೆಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು. ಆವ ರೂಪನೂ ನಂಬುವಳಲ್ಲ ನಾನು; ಆವ ಮಾತನೂ ನಂಬುವಳಲ್ಲ ನಾನು; ಆವಲ್ಲಿ ಹೊಂದುವಳಲ್ಲ ನಾನು. ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ.
--------------
ನೀಲಮ್ಮ
ಎನಗೆ ಹುಟ್ಟುವ ಮುನ್ನವೆ ಇಲ್ಲಿ ಮುನ್ನ ಮುನ್ನ ತನುವ ನೀಗಿ, ಮೂರ್ತಿಯ ಅನುಭವವನರಿದೆ. ಅನುಭಾವವಡಗಿ ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ, ನಾಲಗೆ ನಲಿನಲಿದೋಲಾಡುವನ್ನಕ್ಕರ, ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ. ಶಿವನಾಮಾಮೃತವ ತಂದೆರೆಸು ಕಂಡಯ್ಯಾ. ಶಿವನಾಮಾಮೃತವ ತಂದೆರೆಸು ಕಂಡೆಲೆ ಹರನೆ. ಬಿರಿಮುಗುಳಂದದ ಶರೀರ ನಿಮ್ಮ ಚರಣದಮೇಲೆ ಬಿದ್ದುರುಳುಗೆ ಸಂಗಯ್ಯ.
--------------
ನೀಲಮ್ಮ
ಎನಗೆ ಎಲ್ಲಿಯೂ ಕಾಣಿಸದು ಇರಪರದ ಸಿದ್ಧಿಯು. ಎನಗೆ ಏನೂ ತೋರದು ಮೂರ್ತಿಯ ಹಂಗು. ಎನಗೇನೂ ಅರುಹಿಸದು ಇಷ್ಟದ ಪ್ರಸಾದ. ಇಹಲೋಕ ಸಂಬಂಧ ನಿರ್ಮಲಾಕಾರವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎಸಳ ಕಂಡು ಹೂವಿನ ಮೂಲವ ನೋಡಲು ಆ ಮೂಲ ಎಸಳು ಎರಡೂ ಗಮನಗೆಟ್ಟವು. ಪ್ರಾಣ ಮರುಗಿ ಬಳಲಲು ಸಂಗಯ್ಯ, ಪುಷ್ಪ ಉಂಟೆಂದ ಬಸವನಲ್ಲಿ.
--------------
ನೀಲಮ್ಮ
ಎಲೆ ಲಿಂಗವೆ, ಹೆಸರಿಲ್ಲದ ರೂಪದೋರಿ ಬಯಲಿಂಗೆ ಬಯಲನೆ ಕೂಡಿದೆಯಲ್ಲಾ. ಭಾವವಿಲ್ಲದ ವಸ್ತುವಾಗಿ ಬಯಲಿಂಗೆ ಬಯಲನೆ ಕೂಡಿದೆಯಲ್ಲಾ. ಮುನ್ನಲೊಂದು ರೂಪು ಮಾಡಿದೆ ಎನ್ನ ನೀನು. ಈಗಲೊಂದು ರೂಪು ಮಾಡಿದೆ ಎಲೆ ಲಿಂಗವೆ. ಬಸವನರಸಲು ನಾನು ಬಯಲ ನೆಮ್ಮಿ ಮನೋಹರಮೂರ್ತಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎತ್ತಿದ ಪ್ರಸಾದ ನಿತ್ಯದ ಮುಖವ ಕಂಡು ಅತ್ಯಂತ ಶುದ್ಧಿಯನನುಭವಿಸಿ ಆನು ಮುಕ್ತಿಯ ಮುಖವ ಕಂಡು ನಿರಾಲಂಬಿಯಾದೆನು. ನಿರಾಲಂಬದ ಹಂಗಹರಿದು ನಿಗೂಢ ರೂಢವಳಿದು ನಿಯಮಾಕಾರಳಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎನಗೇನೆಂಬೆನೆಂಬ ಸಂದೇಹ ಹರಿಯಿತ್ತು. ಆ ಸಂದೇಹ ಹರಿದು ಅಪ್ರಮಾಣದೊಳಗೆ ಐಕ್ಯವಾದೆನಯ್ಯ ನಾನು. ಆನು ಅನುಭವಸುಖಿಯಾಗಿ ಆ ಸುಖ ತೃಪ್ತಿಯ ಕಂಡು ಬಯಲ ಸುಖವನುಂಡೆನಯ್ಯ ಬಸವಯ್ಯ. ಸಂಗಯ್ಯ ನಾನು ಮುಕ್ತಂಗನೆಯಾದೆನು.
--------------
ನೀಲಮ್ಮ
ಎಲ್ಲರ ಸಂಗವಲ್ಲಲ್ಲಿಯೆ; ಆ ಎಲ್ಲರೂ ನಿರ್ಲೇಪ ಪ್ರಾಣಿಗಳಾದರಯ್ಯ. ಆ ಎಲ್ಲರ ಮೂರ್ತಿಯ ಅನುವ ಕಂಡು ನಿರ್ಲೇಪ ಪ್ರಸಾದಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎನಗೆ ಹಾಲೂಟವನಿಕ್ಕುವ ತಾಯೆ, ಎನಗೆ ಪರಿಣಾಮವ ತೋರುವ ತಾಯೆ, ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ, ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ !
--------------
ನೀಲಮ್ಮ
ಎಸೆವ ಅನಂಗನ ಸಂಗವ ಹರಿದು, ಏಕತ್ರಯಬ್ರಹ್ಮಮೂರ್ತಿಯಾದೆನಯ್ಯಾ ಬಸವಾ. ಆ ಮೂರ್ತಿಯ ಸಂಗವ ಮಾಡುವ ಬಸವನ ಇರವನರಿದು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಎರಡಿಲ್ಲದ ಅಂಗಕ್ಕೆ ಒಂದೆ ಕುರುಹಿಲ್ಲದ ಸ್ಥಲವಾಯಿತ್ತು. ಸಂದು ಸಂಶಯ ಭೇದವಳಿದು ಸಮಾಧಾನ ನೆಲೆಗೊಂಡಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎನಗೆ ಈ ಪ್ರಾಣದ ಕುರುಹಿಲ್ಲವಯ್ಯ. ಎನಗೆ ಪ್ರಾಣಪ್ರಸಾದದ ಕುರುಹಿಲ್ಲವಯ್ಯ. ಎನಗೆ ಅಂಗ ನಿರಂಗದ ಕುರುಹಿಲ್ಲವಯ್ಯ. ಎನಗೆ ವಿಶೇಷದಾಯತವಿಲ್ಲವಯ್ಯ. ಎನಗೆ ಪ್ರಾಣಪರಿಣಾಮದನುಕೂಲವಿಲ್ಲವಯ್ಯ ಸಂಗಯ್ಯ.
--------------
ನೀಲಮ್ಮ

ಇನ್ನಷ್ಟು ...