ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಆದಯ್ಯ
ಕಾಲ ಸು. 1165. ಸ್ಥಳ ಸೌರಾಷ್ಟ್ರ ಪ್ರಾಂತ್ಯ. ವ್ಯಾಪಾರದ ಸಲುವಾಗಿ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದ; ಜೈನ ಹುಡುಗಿ ಪದ್ಮಾವತಿಯನ್ನು ಮದುವೆಯಾದ; ಮಾವನೊಡನೆ ವಾದಮಾಡಿ, ಸೌರಾಷ್ಟ್ರದ ಸೋಮೇಶ್ವರನನ್ನು ಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದ ಅನ್ನುವ ಕಥೆಯನ್ನು ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರಗಳು ಹೇಳುತ್ತವೆ. ಹನ್ನೆರಡನೆಯ ಶತಮಾನದ ಮತೀಯ ವಾಗ್ವಾದಗಳಿಗೆ ಇವನ ಬದುಕು ಒಂದು ನಿದರ್ಶನದಂತಿದೆ. ಧರ್ಮತತ್ವಗಳ ವಿವೇಚನೆ ಇರುವ ಈತನ 403 ವಚನಗಳು ದೊರೆತಿವೆ.
ಆನಂದ ಸಿದ್ಧೇಶ್ವರ
-----
ಆನಂದಯ್ಯ
ಕಾಲ ಸು. 1650. ವಿವರಗಳು ತಿಳಿದಿಲ್ಲ. ಈತನ ಒಂದು ವಚನ ದೊರೆತಿದೆ.
ಆಯ್ದಕ್ಕಿ ಮಾರಯ್ಯ
ಕಾಲ ಸು. 1160. ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ. ನೆಲದಲ್ಲಿ ಚೆಲ್ಲಾಡಿದ ಅಕ್ಕಿಯನ್ನು ಆಯ್ದು ಬದುಕುವುವು ಇವನ ಕಾಯಕ ‘ಕಾಯಕವೇ ಕೈಲಾಸ’ ಎಂಬ ಪ್ರಸಿದ್ಧ ನುಡಿಗಟ್ಟು ಈತನ ವಚನದಲ್ಲಿ ದೊರೆಯುತ್ತದೆ. ಕಾಯಕ ಮತ್ತು ದಾಸೋಹ ಇವನ 32 ವಚನಗಳ ಮುಖ್ಯ ವಸ್ತುಗಳು, ನೋಡಿ: ಆಯ್ದಕ್ಕಿ ಲಕ್ಕಮ್ಮ.
ಆಯ್ದಕ್ಕಿ ಲಕ್ಕಮ್ಮ
ಕಾಲ ಸು. 1160. ಆಯ್ದಕ್ಕಿ ಮಾರಯ್ಯನ ಹೆಂಡತಿ. ಈಕೆಯ 25 ವಚನಗಳು ದೊರೆತಿವೆ. ಕಲ್ಯಾಣದಲ್ಲಿ ಅಕ್ಕಿಯನ್ನು ಆಯ್ದು ಜೀವಿಸುತ್ತಿದ್ದ ಈ ದಂಪತಿಗೆ ಬಸವಣ್ಣ ಒಮ್ಮೆ ಅಕ್ಕಿಯ ದಾನ ನೀಡಿ, ಮಾರಯ್ಯ ಅದನ್ನು ಮನೆಗೆ ತಂದಾಗ ಲಕ್ಕಮ್ಮನು ಇಷ್ಟೊಂದು ಅಕ್ಕಿಯ ಆಸೆ ಅರಸನಿಗೆ ಇರಬೇಕು, ಶರಣನಿಗಲ್ಲ ಎಂದು ಹೇಳಿ ದುಡಿಮೆಯನ್ನು ತಪ್ಪಿಸುವ ದಾನವನ್ನು ಹಿಂದಿರುಗಿಸುವಂತೆ ಮಾಡಿದ ಕಥೆ ‘ಶೂನ್ಯಸಂಪಾದನೆ’ಯಲ್ಲಿ ಇದೆ.