ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಏಕಾಂತ ವೀರಸೊಡ್ಡಳ
-----
ಏಕಾಂತರಾಮಿತಂದೆ
ಕಾಲ ಸು. 1160. ಸ್ಥಳ: ಕಲ್ಬುರ್ಗಿ ಜಿಲ್ಲೆಯ ಅಳಂದ. ಹರಿಹರ ಈತನ ಬಗ್ಗೆ ರಗಳೆಯೊಂದನ್ನು ಬರೆದಿದ್ದಾನೆ. ಅಬ್ಬಲೂರು ಶಾಸನದಲ್ಲಿ ಇವನ ಉಲ್ಲೇಖವಿದೆ. ತಂದೆ: ಪುರುಷೋತ್ತಮಭಟ್ಟ, ತಾಯಿ: ಸೀತಮ್ಮ. ಪುಲಿಗೆರೆಯ ಸೋಮೇಶ್ವರನು ಈತನ ಕನಸಿನಲ್ಲಿ ಬಂದು ಪರಧರ್ಮಗಳನ್ನು ಜಯಿಸುವಂತೆ ಹೇಳಿದ; ಹಾಗಾಗಿ ಇವನು ಅಬ್ಬಲೂರಿಗೆ ಬಂದು ಅಲ್ಲಿನ ಜೈನರೊಡನೆ ವಾದಮಾಡಿ ಅಲ್ಲಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ತಲೆ ಕತ್ತರಿಸಿಕೊಂಡು ಮತ್ತೆ ದೇವರು ಅವನನ್ನು ಬದುಕಿಸಿದ ಪವಾಡ ನಡೆಯಿತು. ಬಸದಿಯಲ್ಲಿ ಸೋಮೇಶ್ವರಲಿಂಗ ಸ್ಥಾಪನೆ ಮಾಡಿದ ಎಂಬ ಕಥೆ ಶಾಸನದಲ್ಲಿ ಇದೆ. ಈತನ ಪವಾಡವನ್ನು ಚಿತ್ರಿಸುವ ಶಿಲ್ಪಗಳು ಅಲ್ಲಿನ ದೇವಸ್ಥಾನದಲ್ಲಿವೆ. ಇವನ 7 ವಚನಗಳು ದೊರೆತಿವೆ, ಕಾಯ-ಜೀವ ಭೇದ, ನಿತ್ಯಮುಕ್ತನ ಸ್ಥಿತಿಗಳನ್ನು ವರ್ಣಿಸಿದ್ದಾನೆ.
ಏಕೋರಾಮೇಶ್ವರ ಲಿಂಗ
-----
ಏಲೇಶ್ವರ ಕೇತಯ್ಯ
ಕಾಲ ಸು. 1166. ಸ್ಥಳ: ಕಲ್ಬುರ್ಗಿ ಜಿಲ್ಲೆಯ ಏಲೇರಿ (ಏಲೇಶ್ವರ). ಹೆಂಡತಿ ಸಾವಿದೇವಿಯಮ್ಮ. ಬೇಸಾಯಗಾರ. ಈತನ 74 ವಚನಗಳು ದೊರೆತಿವೆ. ವ್ರತ, ಆಚಾರ, ನಿಯಮಗಳ ಪಾಲನೆ ಕುರಿತು ಪ್ರಸ್ತಾಪಿಸಿದ್ದಾನೆ.