ಅಥವಾ

ಒಟ್ಟು 29 ಕಡೆಗಳಲ್ಲಿ , 1 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಪ್ರಣವದ ಲಕ್ಷಣವದೆಂತೆಂದಡೆ : ಪ್ರಥಮ ತಾರಕ ಸ್ವರೂಪವಾಗಿಹುದು. ದ್ವಿತೀಯ ದಂಡಸ್ವರೂಪವಾಗಿಹುದು. ತೃತೀಯ ಕುಂಡಲಾಕಾರವಾಗಿಹುದು. ಚತುರ್ಥ ಅರ್ಧಚಂದ್ರಕಾಕಾರವಾಗಿಹುದು. ಪಂಚಮ ದರ್ಪಣಾಕಾರವಾಗಿಹುದು. ಷಷ* ಜ್ಯೋತಿಸ್ವರೂಪವಾಗಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ*ಂ ಜ್ಯೋತಿಸ್ವರೂಪಕಂ | ಇತಿ ಪ್ರಣವಂ ವಿಜ್ಞೇಯಂ ಯದ್ಗೋಪ್ಯಂ ವರಾರನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ : ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡುವದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿಯೇ ಧ್ಯಾನಿಸುವದು ಪ್ರಾಣಲಿಂಗದ ಪೂಜೆ. ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ. ಅಜ್ಞಾನವೆಂಬ ನಿರ್ಮಾಲ್ಯವಂ ಕಳದು ಸೋಹಂ ಭಾವದಲ್ಲಿ ಪೂಜಿಸುತಿರ್ಪುದೆ ಪ್ರಾಣಲಿಂಗಪೂಜೆ ನೋಡಾ. ಇದಕ್ಕೆ ಈಶ್ವರೋýವಾಚ : ``ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ | ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ || ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ | ತೈಜೇದ್ಯಜ್ಞಾನನಿರ್ಮಾಲ್ಯಂ ಸೋýಹಂಭಾವೇನ ಪೂಜಯೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪ್ರಾಣವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ ನೋಡಾ. ಇದಕ್ಕೆ ಈಶ್ವರೋýವಾಚ : ``ತಥಾ ಪ್ರಾಣೇ ಗುಣೇ ಲಿಂಗೇ ಲಿಂಗಪ್ರಾಣಸಮಾಹಿತಃ | ಸುಖದುಃಖೇ ಭಯಂ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಪ್ಪುವೆ ಅಂಗವಾದ ಮಹೇಶ್ವರನು ಸುಬುದ್ದಿಯೆಂಬ ಹಸ್ತದಲ್ಲಿ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋýವಾಚ : ``ಮಾಹೇಶ್ವರೋ ಜಲಾಂಗಶ್ಚ ಬುದ್ಧಿಹಸ್ತೇನ ಸದ್ಗುರುಃ | ಜಿಹ್ವಾಮುಖೇ ರಸೋ ಭೇದಂ ಅರ್ಪಿತಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಹೃದಯಾಕಾಶದಲ್ಲಿ ಮಹಾಲಿಂಗ ಸ್ವಾಯತವಾಗಿಹುದು. ವಾಗೀಂದ್ರಿಯಂಗದಲ್ಲಿ ಪ್ರಸಾದಲಿಂಗ ಸ್ವಾಯತವಾಗಿಹುದು. ಹಸ್ತೇಂದ್ರಿಯಂಗದಲ್ಲಿ ಚರಲಿಂಗ ಸ್ವಾಯತವಾಗಿಹುದು. ಪಾದೇಂದ್ರಿಯಂಗದಲ್ಲಿ ಶಿವಲಿಂಗ ಸ್ವಾಯತವಾಗಿಹುದು. ಗುಹ್ಯೇಂದ್ರಿಯಂಗದಲ್ಲಿ ಗುರುಲಿಂಗ ಸ್ವಾಯತವಾಗಿಹುದು. ಗುದೇಂದ್ರಿಯಂಗದಲ್ಲಿ ಆಚಾರಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಹೃದಯಾಂಗೇ ಮಹಾಲಿಂಗಂ ವಾಗಂಗೇತು ಪ್ರಸಾದಕಂ | ಹಸ್ತಾಂಗೇ ಚರಲಿಂಗಂ ಚ ಪಾದಾಂಗೇ ಶಿವಲಿಂಗಕಂ || ಗುಹ್ಯಾಂಗೇ ಗುರುಲಿಂಗಂತು ಗುದೇ ಆಚಾರಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾನಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಲಿಂಗಪ್ರಸಾದವ ಲಿಂಗನೆನಹಿನಿಂದ ಭೋಗಿಸುವುದು, ಅನರ್ಪಿತವ ಬಿಡುವುದೀಗ ಪ್ರಸಾದಿಸ್ಥಲ ನೋಡಾ. ಇದಕ್ಕೆ ಈಶ್ವರೋýವಾಚ : ``ಲಿಂಗಾರ್ಪಿತಪದಾರ್ಥಂ ಚ ಸುಭೋಗಿ ಲಿಂಗಸಂಯುಕ್ತ ಃ | ಅನರ್ಪಿತಂ ವಿವರ್ಜಂ ಚ ಪ್ರಸಾದಿಸ್ಥಲಮುತ್ತಮಂ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಕಾಶವೇ ಅಂಗವಾದ ಶರಣ ಸುಜ್ಞಾನವೆಂಬ ಹಸ್ತದಲ್ಲಿ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋýವಾಚ : ``ಜ್ಞಾನಹಸ್ತೇನ ಶರಣಂ ವ್ಯೋಮಾಂಗಶ್ಚ ಪ್ರಸಾದಿತೇ ಶ್ರೋತ್ರೇ ಚ ತನ್ಮುಖಿ ಚೈವ ಅರ್ಪಿತಂ ಶಬ್ದಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಗ್ನಿಯೆ ಅಂಗವಾದ ಪ್ರಸಾದಿ ನಿರಹಂಕಾರವೆಂಬ ಹಸ್ತದಲ್ಲಿ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ಸುಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋýವಾಚ : ``ನಿರಹಂಕಾರಹಸ್ತೇನಾ ಅನಲಾಂಗ ಪ್ರಸಾದಿ ಚ | ಶಿವಲಿಂಗಮುಖೇ ನೇತ್ರೇ ಅರ್ಪಿತಂ ರೂಪಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಾರ್ಪಿತದ ವಿವರವೆಂತೆಂದಡೆ : ಇಷ್ಟಲಿಂಗಕ್ಕೆ ತನ್ನ ಶರೀರವ ಸಮರ್ಪಿಸುವುದು, ಪ್ರಾಣಲಿಂಗಕ್ಕೆ ತನ್ನ ಮನವ ಸಮರ್ಪಿಸುವುದು, ಭಾವಲಿಂಗಕ್ಕೆ ತನ್ನ ಪರಿಣಾಮವ ಸಮರ್ಪಿಸುವುದು. ಇದಕ್ಕೆ ಈಶ್ವರೋýವಾಚ : ``ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಃ | ಭಾವಲಿಂಗಾರ್ಪಿತಂ ತೃಪ್ತಿಃ ಇತಿ ಭೇದಂ ವರಾನನೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನೊಂದು ಪ್ರಕಾರದ ಹಸ್ತ ಉತ್ಪತ್ಯವದೆಂತೆಂದಡೆ : ಏನೂ ಏನೂ ಎನಲಿಲ್ಲದ ಪರಬ್ರಹ್ಮದಲ್ಲಿ ಭಾವಹಸ್ತ ಹುಟ್ಟಿತ್ತು. ಆ ಭಾವಹಸ್ತದಲ್ಲಿ ಜ್ಞಾನಹಸ್ತ ಹುಟ್ಟಿತ್ತು. ಆ ಜ್ಞಾನಹಸ್ತದಲ್ಲಿ ಸುಮನಹಸ್ತ ಹುಟ್ಟಿತ್ತು. ಆ ಸುಮನಹಸ್ತದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು. ಆ ನಿರಹಂಕಾರಹಸ್ತದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು. ಆ ಸುಬುದ್ಧಿಹಸ್ತದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ. ಇದಕ್ಕೆ ಈಶ್ವರೋýವಾಚ : ``ವಸ್ತುನೋಭಾವಮುತ್ಪನ್ನಂ ಭಾವಾತ್ ಜ್ಞಾನಂ ಸಮುದ್ಭವಂ | ಜ್ಞಾನಾಚ್ಚ ಮನಉತ್ಪನ್ನಂ ಮನಸೋýಹಂಕೃತಿಸ್ತ್ರಥಾ || ಅಹಂಕಾರಾತ್ತತೊ ಬುದ್ಧಿಃ ಬುದ್ಧ್ಯಾ ಚಿತ್ತಂ ಸಮುದ್ಭವಂ | ಏಶೈಕಂತು ಸಮುತ್ಪನ್ನಂ ಸೂಕ್ಷ್ಮಂ ಸೂಕ್ಷ್ಮಂ ವರಾನನೇ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಕ್ಕೆ ಅಂಗತ್ರಯಂಗಳಾವಾವೆಂದಡೆ : ಸುಷುಪ್ತಾವಸ್ಥೆಯೇ ಯೋಗಾಂಗ ಸ್ವಪ್ನಾವಸ್ಥೆಯೇ ಭೋಗಾಂಗ ಜಾಗ್ರಾವಸ್ಥೆಯೇ ತ್ಯಾಗಾಂಗ ನೋಡಾ. ಇದಕ್ಕೆ ಈಶ್ವರೋýವಾಚ : ``ಸುಷುಪ್ಯವಸ್ಥಾ ಯೋಗಾಂಗಂ ಸ್ವಪ್ನಾವಸ್ಥೇನಾಭಿರು | ಜಾಗ್ರದಿತ್ಯುದಿತಾವಸ್ಥಾ ತ್ಯಾಗಾಂಗಮಿತಿ ಲಕ್ಷ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುಕಾರವೇ ನಿರ್ಗುಣಾತ್ಮನು, ರುಕಾರವೇ ಪರಮಾತ್ಮನು. ಗುಕಾರವೇ ಶಿವ, ರುಕಾರವೇ ಶಿವಾತ್ಮನು. ಈ ಉಭಯ ಸಂಗವೇ ಗುರುರೂಪ ನೋಡಾ. ಇದಕ್ಕೆ ಈಶ್ವರೋýವಾಚ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇದೇವ ಗುರುರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇದಕ್ಕೆ ವೀರಾಗಮೇ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋತ್ಸದದ್ಯಾತ್ಸ ಗುರುಸ್ಮೃತಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಯೋ ಗುರುಃ ಸ ಶಿವಃ ಪ್ರೋಕ್ತಃ ಯೋ ಶಿವಸ್ಸಗುರುಸ್ಮøತಃ | ಭುಕ್ತಿ ಮುಕ್ತಿ ಪ್ರದಾತಾ ಚ ಮಮ ರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇಂಥ ಮಹಾಮಹಿಮನೆ ಗುರುವಲ್ಲದೆ ಮಿಕ್ಕಿನ ನಾಮಧಾರಕ ಗುರುಗಳೆಲ್ಲ ಗುರುವಲ್ಲ ; ಆ ಗುರುವಿನ ಬೆಂಬಳಿಯವರೆಲ್ಲ ಶಿಷ್ಯರಲ್ಲ. ಆ ಗುರುಶಿಷ್ಯರಿಬ್ಬರಿಗೂ ಕುಂಭೀಪಾತಕವೆಂದುದು ನೋಡಾ. ಇದಕ್ಕೆ ಉತ್ತರವೀರಾಗಮೇ : ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಃ ಸದಾ | ಅಂಧಕಾಂಧಕರಾಯುಕ್ತಂ ದ್ವಿವಿಧಂ ಪಾತಕಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚಿತ್ಕಲಾಪ್ರಣವ ಉಪಮಿಸಬಾರದ ಉಪಮಾತೀತವು ಮನಾತೀತವು ವರ್ಣಾತೀತವು ತತ್ವಾತೀತವು ಜ್ಞಾನಾತೀತವು. ನಿರಂಜನಕಲಾಪ್ರಣವವು ಅತ್ಯಂತ ಸೂಕ್ಷ್ಮವಾಗಿಹುದು. ಇದಕ್ಕೆ ಈಶ್ವರೋýವಾಚ : ``ವಾಚಾತೀತಂ ಮನೋýತೀತಂ ವರ್ಣಾತೀತಂ ಚ ತತ್ಪದಂ | ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮ ಭಾವಯೇತ್''|| ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ -ಈ ಮೂರು ಬೀಜಾಕ್ಷರ ಆದಿ ಮಕಾರಪ್ರಣವವೆ ಆದಿಕಲೆ, ಆದಿ ಅಕಾರಪ್ರಣವವೆ ಆದಿನಾದ, ಆದಿ ಉಕಾರಪ್ರಣವವೆ ಆದಿಬಿಂದು ಆದಿ ಮಕಾರಪ್ರಣವವೇ ಸರ್ವಾತ್ಮನು. ಆದಿ ಅಕಾರಪ್ರಣವವೇ ಪರಮಾತ್ಮನು. ಆದಿ ಉಕಾರಪ್ರಣವವೇ ಶಿವಾತ್ಮನು ನೋಡಾ. ಇದಕ್ಕೆ ಈಶ್ವರೋýವಾಚ : ``ಅಕಾರಂ ಪರಾತ್ಪರಾತ್ಮಂ ಉಕಾರಂ ಶಿವಾತ್ಮೋ ಭವೇತ್ | ಮಕಾರಂ ಸರ್ವಾತ್ಮೈವ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಲಿಂಗಧಾರಣ ಮಹಾತ್ಮೆಯ ಸ್ಥಲವೆಂತೆಂದಡೆ : ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತಗಣಂಗಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಚಂದ್ರಾದಿತ್ಯ ಇಂದ್ರಾದಿ ದೇವರ್ಕಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಮನು ಮುನಿ ಯತಿ ರಾಕ್ಷಸರು ಮೊದಲಾಗಿ ಶಿವಲಿಂಗಧಾರಣವಾಗಿ ಶಿವಪೂಜೆಯಮಾಡಿ, ಶಿವಪ್ರಸಾದವ ಕೊಂಡು ತಮ್ಮ ತಮ್ಮ ಪದವಿಯ ಪಡೆದು ಬದುಕಿದರು ನೋಡಾ. ಇದಕ್ಕೆ ಶಿವಧರ್ಮಪುರಾಣೇ : ``ಇಂದ್ರ ನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ | ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತಂ ಚ ಸನಾತನಂ || ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ | ತಸ್ಯ ಸಂಪೂಜನಾತ್ತೇನ ಪ್ರಾಪ್ತಂ ಬ್ರಾಹ್ಮತ್ವಮುತ್ತಮುಂ || ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ | ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ಜಲಂ || ಶಕ್ರೋsಪಿ ದೇವರಾಜೇಂದ್ರೋ ಲಿಂಗಂ ಮಣಿಮಯಂ ಶುಭಂ | ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ತವಾನ್ || ಲಿಂಗಂ ರತ್ನಮಯಂ ಚಾರು ವರುಣೋsರ್ಚಯತೇ ಸದಾ | ತೇನ ತದ್ವರುಣತ್ವಂ ಹಿ ಪ್ರಾಪ್ತಂ ವೃದ್ಧಿಸಮನ್ವಿತಂ || ಲಿಂಗಂ ಹೇಮಮಯಂ ಕಾಂತಂ ಧನದೋsರ್ಚಯತೇ ಸದಾ | ತೇನಾsಸೌಧನದೋ ದೇವೋ ಧನದತ್ವಮವಾಪ್ತವಾನ್ || ಸಂಪೂಜ್ಯ ಕಾಂಸ್ಯಕಂ ಲಿಂಗಂ ವಸವಃ ಕಾಮಮಾಪ್ನುಯುಃ | ನಾಗಾಃ ಪ್ರವಾಲಜಂ ಲಿಂಗಂ ರಾಜ್ಯಂ ಸಂಪೂಜ್ಯ ಲೇಭಿರೇ | ಏವಂ ದೇವಾಃ ಸ ಗಂಧರ್ವಾಃ ಸ ಯಕ್ಷೋರಗರಾಕ್ಷಸಾಃ | ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ || ಸರ್ವಂ ಲಿಂಗಮಯಂ ಲೋಕೇ ಸರ್ವಂ ಲಿಂಗೇ ಪ್ರತಿಷಿ*ತಂ | ತಸ್ತಾತ್ ಸಂಪೂಜ್ಯಯೇನ್ನಿತ್ಯಂ ಯದಿಚ್ಛೇತ್ ಸಿದ್ಧಿಮಾತ್ಮನಃ ||'' ಇಂತೆಂದುದಾಗಿ, ಇದಕ್ಕೆ ವ್ಯಾಸ ಜೈಮಿನಿ ಸಂವಾದೇ:ವ್ಯಾಸ ಉವಾಚ- ``ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ | ಮಹರ್ಷಿಭಿರ್ಮಹಾದೇವೋ ಶಿವಲಿಂಗಂತು ಧಾರಯೇತ್ || ಸುರಾಸುರೇಂದ್ರದೇವಾಶ್ಚ ಲಿಂಗಧಾರಣಯಾ ಸದಾ | ತಥಾಗಸ್ತ್ಯಾದಿ ಮುನಯೋ ದೂರ್ವಾಸು ನಂದಿಕೇಶ್ವರಃ | ಮಹಾಕಾಲೋ ದಧೀಚಿಶ್ಚ ಪಾಣಿನಿಶ್ಚ ಕಣಾದಕಃ | ಸ್ಕಂದೋ ಭೃಂಗಿರೀಟರ್ವೀರಭದ್ರಾಶ್ಚ ಪ್ರಮಥಾದಯಃ || ಅಜೋ ಹರಿಃ ಸಹಸ್ರಾಕ್ಷೋ ಬಾಣಾಸುರದಶಾನನೌ | ವಶಿಷ*ರುರುವಾಲ್ಮೀಕಿಭಾರದ್ವಾಜಾತ್ರಿಗೌತಮಾಃ || ಏತೇ ಪರಮಶೈವಾಶ್ಚ ಭಜಂತಿ ಪರಯಾ ಮುದಾ | ಪ್ರಸಾದ ಸೇವನಾತ್‍ಧ್ಯಾನಾದರ್ಚನಾದ್ಧಾರಣಾದಪಿ ||'' ಇಂತೆಂದುದಾಗಿ, ಇದಕ್ಕೆ ವಾತುಲತಂತ್ರೇ : ``ಬ್ರಹ್ಮವಿಷ್ಣುಸುರೇಶಾದಿ ದೇವತಾಃ ಪರಯಾ ಮುದಾ | ಶಿರೋಭಿರ್ಧಾರಯಂತ್ಯೇತಾ ಃ ಶಿವಲಿಂಗಮಹರ್ನಿಶಂ || ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ | ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ || ಕಂಠೇಷು ಹರಕಂಠಾದಿ ಮುನಯೋ ಮಾನವಾಸ್ತಥಾ | ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿ ಚ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಉತ್ತಮಾಂಗೇ ಗಲೇ ಕಕ್ಷೇ ಸರ್ವದಾ ಧಾರಯೇತ್ ಶಿವಂ | ಮಂತ್ರಾದ್ಯುತ್ಪಾರ್ಜನೇಯುವೇ ಭೋಜನೇýಪಿ ಸದಾ ಶುಚಿಃ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಗಚ್ಚನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ | ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ : ``ಉದರೇ ಧಾರಯೇಲ್ಲಿಂಗಂ ಗ್ರಾಮಸ್ಯಾಧಿಪತಿರ್ಭವೇತ್ | ವಕ್ಷಸಾ ಧಾರಯೇಲ್ಲಿಂಗಂ ಇಂದ್ರಸ್ಯಾಧಿಪತಿರ್ಭವೇತ್ || ಕಂಠೇತು ಧಾರಯೇಲ್ಲಿಂಗಂ ಬ್ರಾಹ್ಮಣಾಧಿಪತಿರ್ಭವೇತ್ | ಅಪರೇ ಧಾರಯೇಲ್ಲಿಂಗಂ ರಾಕ್ಷಸ್ಯಾಧಿಪತಿರ್ಭವೇತ್ || ಸ್ಕಂದೇ ತು ಧಾರಯೇಲ್ಲಿಂಗಮೀಪ್ಸಿತಂ ಲಭತೇ ಧೃವಂ | ಶಿರಸಾ ಧಾರಯೇಲ್ಲಿಂಗಂ ಗಣತ್ವೇನ ಸಯುಜ್ಯತೇ | ತೇ ಸ್ಥಾನೇಷು ಧಾರಯೇಲ್ಲಿಂಗ ಸರ್ವಸಿದ್ಧಿ ಫಲಪ್ರದಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಲಿಂಗಪ್ರಣಿತಥಾ ಲಿಂಗಂ ಶಿಖಾಯಾಂ ಧಾರಯೇತ್ಸುದೀಃ | ತದಸ್ಥಾನಾಧಿಕಂ ದಿವ್ಯಂ ಬ್ರಹ್ಮರಂಧ್ರಂ ವಿಶೇಷತಃ || ಮೂಧ್ರ್ನಿವಾ ಧಾರಯೇಲ್ಲಿಂಗಂ ನ ತಥಾ ಚ ದ್ವಿಜಯೋ ಜಯೇತ್ | ಈಶಾವಾ ನಿತ್ಯಸಂಯೋಗೋ ಪರಯೋನಿರನಿಷ್ಟಯಃ | ನಾಭೇರಧೋ ಲಿಂಗಧಾರಿ ಪಾಪೇನ ಚ ಸ ಯುಜ್ಯತೇ | ನಾಭ್ಯೋಧ್ರ್ವೇ ಲಿಂಗಧಾರೀ ಚ ಸೌಭಾಗ್ಯಜ್ಞಾನವರ್ಧನಂ ||'' ಇಂತೆಂದುದಾಗಿ, ಇದಕ್ಕೆ ಉಮಾಮಹೇಶ್ವರ ಸಂವಾದೇ : ``ಜಾತಾ ದರ್ಶನಕರ್ತಾರಃ ಶ್ರಾವಯಂತಿ ಜಗತ್ರಯಂ | ಕಕ್ಷೇ ಬ್ರಹ್ಮಾ ಕರೇ ವಿಷ್ಣುಃ ಕಂಠೇ ಮಾಹೇಶ್ವರಸ್ಸದಾ || ವ್ಯೋಮಾತೀತಸ್ತು ಶಿರಸಿ ಮುಖೇ ರುದ್ರಸ್ತು ಧಾರಯೇತ್ | ಈಶ್ವರಸ್ತ್ವಮಲೈಕ್ಯೇ ತು ಉತ್ತಮಾಂಗೇ ಸದಾಶಿವಃ | ಇತಿ ದೇವಗಣೋ ಧೃತ್ವಾ ಲಿಂಗಂತು ಯಜತೇ ಸದಾ || ನಾಭಿಂ ಚ ಹೃದಯೇ ಮೂಧ್ರ್ನಿ ಸರ್ವಾವಸ್ಥಾಸು ಸರ್ವದಾ | ತ್ರೀಲಿಂಗಧಾರಣಂ ಕುರ್ಯಾದೇವೀ ನಿತ್ಯಂ ಮಮಪ್ರಿಯಃ || ಕಾಯಸಂಬಂಧ ಲಿಂಗೇನರಹಿತಶ್ಚಾಪಿಯೋ ಭವೇತ್ | ನಿಮುಷಾರ್ಧಂ ವಿಯೋಗೇನ ವಿಶೇಷೋತ್ವಾತ್ ಕೋಭವೇತ್ || ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಓಂ ತ್ರಯೋ ದೇವಾ ಲಿಂಗಂ ಧಾರಯಂತಿ | ಋಷಯಃ ಶಿವಲಿಂಗಧಾರಯಂತಿ | ತಸ್ಮಾದ್ದೇವಲಿಂಗ ಧಾರಯಂತಿ | ಅಜಹರಿ ಲಿಂಗಂ ಧಾರಯಂತಿ | ಸುರೇಂದ್ರದೈತ್ಯಾ ಧಾರಯಂತಿ ||'' ಇಂತೆಂದುದಾಗಿ, ಇದಕ್ಕೆ ಋಗ್ವೇದೇ : ``ಸೋಮೇ ರುದ್ರಾಯುವಮೇತಾವ್ಯಸ್ಮಿ ವಿಶ್ವಾತಮಾಷುಭೇಷಾವಿದತ್ತಂ | ಅವಸ್ಯತಂ ಮುಲಚತಯಿಂ ನೋ ಅಸ್ತಿತನುಕ್ಷುಬಂಧಂ ಕ್ರುಷಮೇನೋ ಅಸ್ತಿತ್||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಚತುರ್ವೇದಾ ಲಿಂಗ ಧಾರಯಂತಿ | ಅನಂತಾ ವೈ ವೇದಾಃ ಲಿಂಗಂ ಧಾರಯಂತಿ ||'' ಇಂತೆಂದುದು ಶ್ರುತಿ. ಇದನರಿದು ಶ್ರೀವಿಭೂತಿ ರುದ್ರಾಕ್ಷಿ ಶಿವಲಿಂಗಧಾರಣವಿಲ್ಲದ ಕರ್ಮಿಯನೆನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->