ಅಥವಾ

ಒಟ್ಟು 9 ಕಡೆಗಳಲ್ಲಿ , 4 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿ ಹುಟ್ಟಿದಳು. ಆ ಚಿತ್‍ಶಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಹುಟ್ಟಿದಳು. ಆ ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಹುಟ್ಟಿದಳು. ಆ ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಹುಟ್ಟಿದಳು. ಆ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಹುಟ್ಟಿದಳು. ಆ ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಹುಟ್ಟಿದಳು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಚಿಂತಾಶಕ್ತಿಸಹಸ್ರಾಂಶೇ ಚಿಚ್ಛಕ್ತಿಶ್ಚ ಸಮುದ್ಭವಃ | ಚಿಚ್ಛಕ್ತಿಶ್ಚ ಸಹಸ್ರಾಂಶೇ ಪರಶಕ್ತಿಶ್ಚ ಸಮುದ್ಭವಃ || ಪರಶಕ್ತಿ ಸಹಸ್ರಾಂಶೇ ಆದಿಶಕ್ತಿ ಸಮುದ್ಭವಾಃ | ಆದಿಶಕ್ತಿಶ್ಚ ಸಹಸ್ರಾಂಶೇ ಇಚ್ಛಾಶಕ್ತಿ ಸಮುದ್ಭವಃ | ಇಚ್ಛಾಶಕ್ತಿ ಸಹಸ್ರಾಂಶೇ ಜ್ಞಾನಶಕ್ತಿಶ್ಚ ಸಮುದ್ಭವಃ | ಏಕೈಕಂ ಪ್ರಣವಾಖ್ಯಾತಂ ಏಕೈಕಂ ಕುಸುಮಾಹಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಲಂಬಿತವೆನ್ನದೆ, ಆಲಂಬದೊಳಡಗದೆ, ಆಲಂಬವ ಬಯಸದೆ, ಸೂಕ್ಷ್ಮ ಶಿವಪಥ ಏಕೈಕ ಪ್ರಸಾದಿ. ಸೂಕ್ಷ್ಮವೆನ್ನದೆ, ಸೂಕ್ಷ್ಮವ ಬಯಸದೆ, ಸೂಕ್ಷ್ಮ ನಿರಾಕರಣೆ ಪರಿಕರಣೆಯೆನ್ನದೆ, ನಿತ್ಯ ನಿಜವಾದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಸಯದಾನಕ್ಕೆಡೆಗುಡದ ಪ್ರಸಾದಿ.
--------------
ಚನ್ನಬಸವಣ್ಣ
ಷಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು ಮಾತೆ ಹೆತ್ತು ಹೆಸರಿಟ್ಟುದೈ ಅಕ್ಷರಾಂಕ. ಆರುವನು ಐದುವನು ಮೇಲಿಪ್ಪ ಮೂರುವನು ಕೂಡಿ ಹದಿನಾಲ್ಕರೊಳು ಲೋಕವಾಗಿ, ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ನೀನಾದಿಮುಖ ಶೂನ್ಯನಾಗಿಪ್ಪ್ಲ ನಿನ್ನುವನು ಖ್ಯ್ಕಾಮಾಡಿದ ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಲೋಕ ಲೌಕಿಕಂಗಳೆಲ್ಲಾ ನೀವು ಕೇಳಿರೆ. ಏಕೈಕ ರುದ್ರನ ಅವತಾರವನರಿದೆವೆಂಬಿರಿ. ನೋಡಿ ನಚ್ಚಿರೆ ಶಿವನ. ಶಿವನು ಬಸವಣ್ಣನಾದ ನೋಡಿರೆ; ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ, ಬಸವಣ್ಣ ಜಂಗಮವಾದ; ಬಸವಣ್ಣ ಪರಿಣಾಮ ಪ್ರಸನ್ನ ಪರವಾದ; ಬಸವಣ್ಣ ಮೂಲತ್ರಯವಾದ; ಬಸವಣ್ಣ ಭಕ್ತಿ ಎರಡು ತ್ರಯವಾದ; ಬಸವಣ್ಣ ಆರಾರರಿಂ ಮೇಲೆ ತೋರಿದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಅಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು, ಮಾತೆ ಹೆತ್ತು ಹೆಸರಿಟ್ಟಿತೈ, ಅಕ್ಷರಾಂಕ ಆರುವನು ಐದುವನು ಮೇಲಪ್ಪ ಮೂರುವನು ಕೂಡೆ ಹದಿನಾಲ್ಕರೊಳು ಲೋಕವಾಗೆ; ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ಅನಾದಿ ಮುಖಶೂನ್ಯವಾಗಿಪ್ಪ ಲಿಂಗವನು ಖ್ಯ್ಕಾ ಮಾಡಿದ ಬಸವ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಲೋಕ ಹದಿನಾಲ್ಕರ ಏಕೈಕ ಸಮತೆಯನು ಠಾವರಿದು ಗ್ರಾಮವನು ನೋಡಿ ರಚಿಸಿ, ಸೀಮೆ ಸಾಯುಜ್ಯದ ತರಳ ನದಿ ಹರಿವುತ್ತಿರೆ, ತರುಣಿಯ ಮಸ್ತಕದ ನದಿಯು ಅರತು, ಅತಿಶಯದ ಆನಂದಗಾಳಿ ಬೀಸಲು ತಂದ ಪರಿಮಳವು ನೇತ್ರ ಊಧ್ರ್ವವಾಗಿ ಅತಿಶಯದ ರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಅವಗ್ರಹಿಸಿದ ರೂಪು ಸಮತೆ ತಾನೆ.
--------------
ಸಿದ್ಧರಾಮೇಶ್ವರ
ಗುರುಶಿಷ್ಯಸಂಬಂಧದನುಭಾವವ ಕೇಳಿರಯ್ಯ: ಗುರುವೆಂಬ ಪರಾಪರ, ಶಿಷ್ಯನೆಂಬ ಇಹಪರ, ಗುರುವೆಂಬ ಪರಮಾರ್ಥ, ಶಿಷ್ಯನೆಂಬ ಏಕಾರ್ಥ, ಗುರುವೆಂಬನಲ್ಲ, ಶಿಷ್ಯನೆಂಬನಲ್ಲ ಏಕೈಕ ಸಿದ್ಧಸೋಮನಾಥನಲ್ಲಿ ಶಬ್ದಕಿಂಬಿಲ್ಲ.
--------------
ಅಮುಗಿದೇವಯ್ಯ
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು ಅನುನಯದ ಮಲತ್ರಯದ ದುರ್ವಾಕ್ಯವನು ಘನತರದ ಸುದ್ದಿಯನು ಐದೈದುವೊಂದಾಗಿ ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತತ್ತ ಮತ್ತೆ ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ ಏಕೈಕ ಸಂಬಂಧಿ ಆಕಾರ ನಿರ್ವಿಘ್ನ ಆನಂದದವ್ಯಯದ ಅಂತ್ಯದಲ್ಲಿ ಅವ್ವೆಯ ಮುಖಕಮಳ ಐಯನಜಾತಸ್ಯ ಸಂಯೋಗಕದು ಶುದ್ಧ ಮುಗ್ಧನಾಗಿ ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->