ಬಳಿಕ್ಕಮಗ್ನಿಮಂಡಲದ ವರುಣದಿಕ್ಕಿನೇಕದಳದಲ್ಲಿ ಲಕಾರಮ
ನದರಾಚೆಯ ಚಂದ್ರಮಂಡಲದ ದಳದ್ವಯದಲ್ಲಿ
ವರುಣದಳದೊಳಗೆ ಞಕಾರಮಂ
ವರುಣ ವಾಯುಗಳಪದಿಕ್ಕಿನ ದಳದಲ್ಲಿ ಙಕಾರಮಂ
ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ವರುಣ[ದಳ]ದೊಳಗೆ ಡಕಾರಮಂ
ವರುಣ ವಾಯುಗಳಪದಿಕ್ಕಿನ ದಳದ್ವಯದಲ್ಲಿ ಢಕಾರ ಣಕಾರಂಗಳ-
ನನುಗೊಳಿಸಿ ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗ ಫಣೀಶ್ವರ ಭೂಷಿತಾಂಗ.