ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದ ಛಂದವ ಬಿಟ್ಟು, ಮಂಡೆ ಬೋಳಾದ ಮತ್ತೆ ಅಂಗಕ್ಕೆ ಛಂದ ಅಲಂಕಾರವುಂಟೆ ? ತಮ್ಮಂಗದ ಸಂಗವನರಿಯದೆ ಲಿಂಗಸಂಗಿ ಎಂಬ ಭಂಡರನೇನೆಂಬೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಖಂಡಿತವಿಲ್ಲದ ಅಖಂಡಿತ ನೀನೆ. ನಿಮ್ಮ ಕಂಡವರುಂಟೆ? ಹೇಳಯ್ಯ. ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು ನೀ ನಿಂದ ಹಜ್ಜೆಯ ಕೆಳಗೆ ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು ಕಣ್ದೆರೆದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ದೇಹ ಎರಡರಲ್ಲಿ ಭಾವ ಒಂದಾಗದವ ಪ್ರಾಣಂಗಿಯಲ್ಲ. ದೇಹ ಮೂರರಲ್ಲಿ ಸಾಕ್ಷಿ ತಾನಾಗದವ ಪ್ರಾಣಂಗಿಯಲ್ಲ. ದೇಹ ನಾಲ್ಕರಲ್ಲಿ ನಿದ್ರ್ವಂದ್ವ ಅಸಾಕ್ಷಿಕ ತಾನಾಗದವ ಪ್ರಾಣಲಿಂಗಿಯಲ್ಲ. ಈ ಛಂದವ [ನುಅ]ನಿಂದೆಯೆಂದೆನಾಗಿ. ಚೆನ್ನಬಸವನ ಗುರುಮೂರ್ತಿಯಿಂದ, ಆತನ ಒಕ್ಕುದ ಮಿಕ್ಕುದ ಕಾಯ್ದುಕೊಂಡಿಪ್ಪಾತನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
-->