ಅಥವಾ

ಒಟ್ಟು 79 ಕಡೆಗಳಲ್ಲಿ , 2 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿವೈತ್ತಿ ಕಲೆ ಪ್ರತಿಷ್ಠಾಕಲೆ ತಾನಿರ್ದಲ್ಲಿ, ವಿದ್ಯಾಕಲೆ ಶಾಂತಿಕಲೆ ತಾನಿರ್ದಲ್ಲಿ, ಶಾಂತ್ಯತೀತಕಲೆ ಶಾಂತ್ಯತೀತೋತ್ತರಕಲೆ ತಾನಿರ್ದಲ್ಲಿ, ಕರ್ಮಸಾದಾಖ್ಯ ಕರ್ತೃಸಾದಾಖ್ಯ ತಾನಿರ್ದಲ್ಲಿ, ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯ ತಾನಿರ್ದಲ್ಲಿ , ಶಿವಸಾದಾಖ್ಯ ತಾನಿರ್ದಲ್ಲಿ, ಮಹಾಸಾದಾಖ್ಯ ತಾನಿರ್ದಲ್ಲಿ . ಇವೆಲ್ಲಾ ತನ್ನ ಮೂರ್ತಿಯಿಂದಾದುದಲ್ಲದೆ ಮತ್ತೊಂದು ಮೂರ್ತಿಯಿಂದಾದುದಿಲ್ಲ. ತಾನೆ ಶಿವತತ್ವ ತಾನೆ ಪರತತ್ವ ತಾನೆ ಪರಾತ್ಪರತತ್ವ ತನ್ನಿಂದದ್ಥಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಲಂಬ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅತಳಲೋಕ ಸುತಳಲೋಕ ತಾನಿರ್ದಲ್ಲಿ, ವಿತಳಲೋಕ ತಳಾತಳಲೋಕ ತಾನಿರ್ದಲ್ಲಿ, ರಸಾತಳಲೋಕ ಸ್ವಸ್ಥಲಲೋಕ ತಾನಿರ್ದಲ್ಲಿ, ಪಾತಾಳಲೋಕ ತಾನಿರ್ದಲ್ಲಿ, ಭೂಲೋಕ ಭುವರ್ಲೋಕ ತಾನಿರ್ದಲ್ಲಿ, ಮಹರ್ಲೋಕ ಸ್ವರ್ಲೋಕ ತಾನಿರ್ದಲ್ಲಿ, ಜನರ್ಲೋಕ ತಪರ್ಲೋಕ ತಾನಿರ್ದಲ್ಲಿ, ಸತ್ಯರ್ಲೋಕ ತಾನಿರ್ದಲ್ಲಿ, ಇಹಲೋಕ ಪರಲೋಕ ಕಾಳಾಂಧರಲೋಕ ತಾನಿರ್ದಲ್ಲಿ. ಇಂತೀ ಲೋಕಾದಿಲೋಕಂಗಳೆಲ್ಲಾ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾದಕಾರಣ ತಾನೇ ಪರಂಜ್ಯೋತಿಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ರ್ಯಲೋಕದ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ನಾಗಲೋಕದ ನಾಗಗಣಂಗಳೆಲ್ಲ ತಾನಿರ್ದಲ್ಲಿ, ದೇವಲೋಕದ ದೇವಗಣಂಗಳೆಲ್ಲ ತಾನಿರ್ದಲ್ಲಿ, ರುದ್ರಲೋಕದ ರುದ್ರಗಣಂಗಳೆಲ್ಲ ತಾನಿರ್ದಲ್ಲಿ, ಭೃಂಗಿ ವೀರೇಶ್ವರ ನಂದಿ ಮಹಾಕಾಳರೆಂಬ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ತನ್ನಿಂದದ್ಥಿಕವಪ್ಪ ಪರತತ್ವವಿಲ್ಲವಾಗಿ ತಾನೆ ಸ್ವಯಂಭು ನಿರಾಳ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಗಾಲಕಣ್ಣವರು ಮೈಯಲ್ಲಾ ಕಣ್ಣವರು ತಾನಿರ್ದಲ್ಲಿ, ಗಂಗಾಧರ ಗೌರೀಶ್ವರರು ತಾನಿರ್ದಲ್ಲಿ, ಶಂಕರ ಶಶಿಧರ ನಂದಿವಾಹನರು ತಾನಿರ್ದಲ್ಲಿ, ತ್ರಿಶೂಲ ಖಟ್ವಾಂಗಧರರು ತಾನಿರ್ದಲ್ಲಿ, ತನ್ನಿಂದದ್ಥಿಕರೊಬ್ಬರಿಲ್ಲವಾಗಿ ತಾನೆ ಸ್ವಯಂಭು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮದೇವ ಅಥರ್ವಣವೇದ ತಾನಿರ್ದಲ್ಲಿ, ಉದಾತ್ತ ಅನುದಾತ್ತ ಸ್ವರಿತ ಪ್ರಚರವೆಂಬ ಸ್ವರಂಗಳು ಮೊದಲಾಗಿ, ಅನಂತ ವೇದಸ್ವರಂಗಳೆಲ್ಲ ತಾನಿರ್ದಲ್ಲಿ, ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ, ಅಷ್ಟಾದಶಪುರಾಣಂಗಳು ತಾನಿರ್ದಲ್ಲಿ, ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ, ಅನಂತಕೋಟಿ ವೇದಂಗಳು ತಾನಿರ್ದಲ್ಲಿ, ಇವೆಲ್ಲ ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ? ತನ್ನಿಂದದ್ಥಿಕವಪ್ಪ ಪರಬ್ರಹ್ಮವಿಲ್ಲವಾಗಿ ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ ಅನಂತ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
`ಏಕೋ ರುದ್ರಮಹೇಶ್ವರಾ' ಎಂಬ ಮಹೇಶ್ವರತತ್ವ ತಾನಿರ್ದಲ್ಲಿ, ವಿಶ್ವರೂಪರುದ್ರ ವಿಶ್ವಾದ್ಥಿಕಮಹಾರುದ್ರರು ತಾನಿರ್ದಲ್ಲಿ, ಕೋಟಿ ಶತಕೋಟಿ ಸಾವಿರಜಡೆಮುಡಿ ಗಂಗೆ ಗೌರಿಯರು ತಾನಿರ್ದಲ್ಲಿ, ಕೋಟ್ಯಾನುಕೋಟಿ ಕಾಲರುದ್ರರು ತಾನಿರ್ದಲ್ಲಿ, ಅಸಂಖ್ಯಾತ ಪ್ರಳಯಕಾಲರುದ್ರರು ತಾನಿರ್ದಲ್ಲಿ, ಶತಕೋಟಿ ಸಾವಿರ ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಧರಿಸಿದ ಕಾಲಭೈರವರು ತಾನಿರ್ದಲ್ಲಿ, ತನ್ನಿಂದದ್ಥಿಕವಾದ ವಸ್ತುವೊಂದಿಲ್ಲವಾಗಿ ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣವಾಗಿಹ ಪರಶಿವತತ್ವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೈಥ್ವಿ ಅಪ್ಪು ತೇಜ ವಾಯುವಾಕಾಶ ಚಂದ್ರ ಸೂರ್ಯ ಆತ್ಮರೆಂಬೀ ಅಷ್ಟತನುಮೂರ್ತಿಗಳು ತಾನಿರ್ದಲ್ಲಿ. ಹಿಮ, ಮಲಯ, ಶಕ್ತಿ, ವಿಂಧ್ಯ, ಮಹೇಂದ್ರ, ರುಕ್ಷವಂತ, ಸಹ್ಯವೆಂಬ ಸಪ್ತಕುಲಪರ್ವತಂಗಳು ತಾನಿರ್ದಲ್ಲಿ, ಲವಣ ಇಕ್ಷು ಸುರೆ ಅಮೈತ ದಧಿ ಕ್ಷೀರ ಶುದ್ಧಜಲವೆಂಬ ಸಪ್ತಸಮುದ್ರಂಗಳು ತಾನಿರ್ದಲ್ಲಿ, ಜಂಬುದ್ವೀಪ ಪ್ಲಕ್ಷದೀಪ ಕುಶದ್ವೀಪ ಶಾಕದ್ವೀಪ ಶಾಲ್ಮಲೀದ್ವೀಪ ಪುಷ್ಕರದ್ವೀಪ ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳು ತಾನಿರ್ದಲ್ಲಿ, ಸವಸ್ತಗ್ರಹರಾಶಿ ತಾರಾಪಥಂಗಳೆಲ್ಲ ತಾನಿರ್ದಲ್ಲಿ, ಪಿಂಡ ಬ್ರಹ್ಮಾಂಡಂಗಳು ತನ್ನಲ್ಲಿಯೆ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ ?
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮವಿಷ್ಣ್ವಾದಿಗಳು ತಾನಿರ್ದಲ್ಲಿ, ರುದ್ರ ಈಶ್ವರರು ತಾನಿರ್ದಲ್ಲಿ, ಪಂಚಮುಖ ದಶಭುಜವನುಳ್ಳ ಸದಾಶಿವ ತಾನಿರ್ದಲ್ಲಿ, ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ತಾನಿರ್ದಲ್ಲಿ, ಸಹಸ್ರಪಾದವನುಳ್ಳ ಪರಮಪುರುಷರು ತಾನಿರ್ದಲ್ಲಿ, ವಿಶ್ವತೋಮುಖ ವಿಶ್ವತೋಚಕ್ಷು ವಿಶ್ವತೋಬಾಹು ವಿಶ್ವತೋ ಪಾದವನುಳ್ಳ ಮಹಾಪುರುಷರು ತಾನಿರ್ದಲ್ಲಿ, ನಾಲ್ವತ್ತೆಂಟುಸಾವಿರ ಮುನಿಗಳು ತಾನಿರ್ದಲ್ಲಿ, ಮೂವತ್ತುಮೂರು ಕೋಟಿ ದೇವರ್ಕಳು ತಾನಿರ್ದಲ್ಲಿ, ತಾನೆ ಅಖಂಡ ಪರಿಪೂರ್ಣವಾಗಿಹ ಘನವಲ್ಲದೆ ತನ್ನಿಂದಧಿಕವಪ್ಪವರಾರು ಇಲ್ಲ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಿರ್ದಲ್ಲಿ. ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇದ್ರಿಯಂಗಳು ತಾನಿರ್ದಲ್ಲಿ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚೇಂದ್ರಿಯವಿಷಯಂಗಳು ತಾನಿರ್ದಲ್ಲಿ. ವಚನ ಗಮನ ಆದಾನ ವಿಸರ್ಜನ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರಯಂಗಳು ತಾನಿರ್ದಲ್ಲಿ. ಮನ ಬುದ್ಧಿ ಚಿತ್ತ ಅಹಂಕಾರ ಜೀವನೆಂಬ ಜೀವಪಂಚಕಂಗಳು ತಾನಿರ್ದಲ್ಲಿ. ಇವೆಲ್ಲ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾಗಿ ಮತ್ತಂ ತನ್ನಾಧೀನದಲ್ಲಿ ಆಡುತ್ತಿಹುದಲ್ಲದೆ ಸ್ವತಂತ್ರ ಪರಬ್ರಹ್ಮವೆ ತಾನೆಂದರಿದ ಮಹಾಶರಣನು ಅದರಾಧೀನದಲ್ಲಿ ತಾನಾಡನು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಕೋಟಿ ಮಹಾಮಂತ್ರಂಗಳು ತಾನಿರ್ದಲ್ಲಿ, ತೊಂಬತ್ತುನಾಲ್ಕು ವ್ಯೋಮವ್ಯಾಪಿಪದಂಗಳು ತಾನಿರ್ದಲ್ಲಿ, ಅಕಾರಾದಿ ಕ್ಷಕಾರಾಂತವಾದ ಐವತ್ತೆರಡು ಅಕ್ಷರಂಗಳು ತಾನಿರ್ದಲ್ಲಿ, ಇನ್ನೂರ ಇಪ್ಪತ್ತುನಾಲ್ಕು ಭುವನಂಗಳು ತಾನಿರ್ದಲ್ಲಿ, ಮೂವತ್ತಾರು ತತ್ವಂಗಳು ತಾನಿರ್ದಲ್ಲಿ, ಷಟ್ಕಲೆ ದ್ವಾದಶಕಲೆ ಷೋಡಶಕಲೆಗಳು ತಾನಿರ್ದಲ್ಲಿ, ಅರುವತ್ತುನಾಲ್ಕು ಕಲೆಯ ಜ್ಞಾನಂಗಳು ತಾನಿರ್ದಲ್ಲಿ, ಇವೆಲ್ಲವು ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಾದ ಕಾರಣ ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ, ತಾನೆ ಪರಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮಲೋಕ ತಾನಿರ್ದಲ್ಲಿ, ವಿಷ್ಣುಲೋಕ ತಾನಿರ್ದಲ್ಲಿ, ಜ್ಯೋತಿರ್ಮಯಲೋಕ ತಾನಿರ್ದಲ್ಲಿ, ರುದ್ರಲೋಕ ತಾನಿರ್ದಲ್ಲಿ, ಕೈಲಾಸ ತಾನಿರ್ದಲ್ಲಿ, ಸಚರಾಚರಂಗಳೆಲ್ಲಾ ತಾನಿರ್ದಲ್ಲಿ, ತನ್ನಿಂದಧಿಕಮಪ್ಪ ದೈವವಿಲ್ಲವಾಗಿ, ಇವೆಲ್ಲಾ ತನ್ನಾಧೀನವಲ್ಲದೆ ಅವರಾಧೀನ ತಾನಲ್ಲ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಡಾ ಪಿಂಗಳ ಸುಷುಮ್ನ ಗಾಂಧಾರಿ ಹಸ್ತಿ ಜಿಂಹ್ವೆ ಪೂಷ ಪಯಶ್ಚಿನಿ ಅಲಂಬು ಶಂಕಿನಿಯೆಂಬ ದಶನಾಳಂಗಳು ತಾನಿರ್ದಲ್ಲಿ. ಇಡಾ ಪಿಂಗಳ ಸುಷುಮ್ನನಾಳ ಮೊದಲಾದ ದಶನಾಳಂಗಳೊಳಾಡುವ ವಾಯು ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯನೆಂಬ ದಶವಾಯುಗಳು ತಾನಿರ್ದಲ್ಲಿ. ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಿರ್ದಲ್ಲಿ. ತಾನೆ ಯಂತ್ರವಾಹಕನಾಗಿ ಇವೆಲ್ಲವ ತನ್ನ ಲೀಲಾವಿಲಾಸ ಸೂತ್ರಮಾತ್ರದಲ್ಲಿಯೇ ಆಡಿಸುತ್ತಿಹನಲ್ಲದೆ ತಾನಾಡನು ತಾ ನೋಡನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಹಲೋಕ ಪರಲೋಕ ತಾನಿರ್ದಲ್ಲಿ, ಗಗನ ಮೇರುಮಂದಿರ ತಾನಿರ್ದಲ್ಲಿ, ಸಕಲಭುವನ ತಾನಿರ್ದಲ್ಲಿ, ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ, ಅಂತರ ಮಹದಂತರ ತಾನಿರ್ದಲ್ಲಿ, ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
--------------
ಅಲ್ಲಮಪ್ರಭುದೇವರು
-->