ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಜ್ಯೆಪೂಜೆಯೆಂತಿದ್ದರೇನು, ಮನದ ಓಜೆ ನೆಲೆಗೊಳ್ಳದನ್ನಕ್ಕ? ಜಲ ಚಾಂಡಾಲವಾದರೆ ತಾವರೆ ನೆಲೆಗೊಂಬುದೇ? ಮನ ಚಾಂಡಾಲವಾದರೆ ಲಿಂಗ ನೆಲೆಗೊಂಬುದೇ? ಭಾವವಿಟ್ಟ ಕರುವಿನಂತೆ, ಅಲ್ಲಿಪ್ಪನೆ ಶಿವನು? ಥಳಥಳಿಸದು, ಹೊಳೆಹೊಳೆಯದು, ಕೆರಕು ಕಲ್ಲಿನಂತೆ ಇಪ್ಪುದಯ್ಯಾ ಪರುಷವು. ಆ ಪರುಷದಂತುವನಾರು ಬಲ್ಲರು? ಹೆಮ್ಮೆಗೆರಗುವರಲ್ಲದೆ ಆ ಘನವನೆತ್ತಬಲ್ಲರು? ಕೂಡಲಚೆನ್ನಸಂಗನ ಶರಣರ ಅಂತಕ ಬೊಂತಕರೆನಬೇಡ, ಅವರಂತುವನಾ ಶಿವನೇ ಬಲ್ಲ.
--------------
ಚನ್ನಬಸವಣ್ಣ
-->