ಗುರುಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಧರಿಸಿದಾತಂಗೆ ಅಷ್ಟಾಷಷ್ಟಿತೀಥಿರ್Àಂಗಳು
ತನ್ನೊಳಡಗಿಹವಯ್ಯಾ.
ಅದೆಂತೆಂದಡೆ :
ಅಂಗುಷಾ*ಗ್ರೇ ಅಷ್ಟಾಷಷ್ಟಿತೀರ್ಥಂ ನಿತ್ಯಂ ವಸಂತಿ ವೈ'
ಎಂದುದಾಗಿ, ಶ್ರೀಗುರುವಿನ ಅಂಗುಷಾ*ಗ್ರದಲ್ಲಿ
ಸಕಲತೀರ್ಥಂಗಳಿರ್ಪವು.
ಶ್ರೀಗುರುವಿನ ಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಇದು ಕಾರಣ ಗುರುಪಾದೋದಕದಿಂದವೆ
ಪರಮಪದವಪ್ಪುದು, ಅಮರಗುಂಡದ ಮಲ್ಲಿಕಾರ್ಜುನಾ.