ನ ಪದದಿಂದ ಪ್ರಾರಂಭವಾಗುವ ವಚನಗಳು:
ನಾ ಬಂದುದಕ್ಕೆ ಮಾಡಿದೆ.ನೀ ಕಳುಹಿದವರ ಕೊಂದೆ.ಬಂದೆ ನೀವಿರಿಸಿದಂತಿದ್ದುಎನ್ನಗಿನ್ನು ಬಂಧ ಮೋಕ್ಷವೇಕೆ,ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮನ ಲೇಪವಾದವಂಗೆ.
ನಾ ಹಡೆದೆ ಮೂವರು ಸೂಳೆಯರ.ಒಬ್ಬಳಿಗೋಹೆಯನಿಕ್ಕುವೆ;ಒಬ್ಬಳಿಗೆ ವೇಳೆಗೊತ್ತೆಯ ಕೊಡುವೆ;ಒಬ್ಬಳ ಮನೆಯೊಳಗೆ ಹಾಕಿಕೊಂಡೆ.ಎನ್ನ ವಂಚಿಸಿ ಮೂವರೂ ಓಡಿಹೋದರು; ಲೇಸಾಯಿತ್ತೆಂದೆ,ಗೊಹೇಶ್ವರನ ಶರಣ ಅಲ್ಲಮನ ದೆಸೆಯಿಂದ.
ನಾ ಬಂದ ಹಾದಿಯಲ್ಲಿಎಂಬತ್ತು ನಾಲ್ಕು ಲಕ್ಷ ಕಳ್ಳರು ಕಟ್ಟಲಂಜಿದರು.ಮೂರು ಠಾವಿನ ಅನುವ ಮೀರಿದೆ.ಬಂದು ನಿಂದಿರಲಾಗಿ, ಈ ದೇಶದ ಅಂದವೇನೊಎಂದು ಕೇಳಿದ, ಗೊಹೇಶ್ವರನ ಶರಣ ಅಲ್ಲಮನು.