ಅಥವಾ
(3) (3) (0) (0) (0) (0) (0) (0) (0) (0) (1) (1) (0) (0) ಅಂ (1) ಅಃ (1) (3) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (3) (0) (3) (2) (3) (0) (0) (0) (0) (0) (0) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ, ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ, ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ.
--------------
ಆಯ್ದಕ್ಕಿ ಲಕ್ಕಮ್ಮ
ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ? ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ ? ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಹೊದ್ದುವ ಭಾವ.
--------------
ಆಯ್ದಕ್ಕಿ ಲಕ್ಕಮ್ಮ
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ? ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ.
--------------
ಆಯ್ದಕ್ಕಿ ಲಕ್ಕಮ್ಮ