ಅಥವಾ
(1) (0) (1) (0) (0) (0) (0) (0) (0) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (1) (0) (0) (0) (1) (0) (0) (0) (1) (0) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೇತ್ರಮಧ್ಯದಲ್ಲಿ ಸೂಸುವ ತ್ರಿಣೇತ್ರನ ರೂಪವೆ ಸಿದ್ಧರಾಮಯ್ಯನಾದ. ಜಿಹ್ವೆಯಮಧ್ಯದಲ್ಲಿ ಸೂಸುವ ರುಚಿಯೆ ಸಿದ್ಧರಾಮಯ್ಯನಾದ. ಶ್ರೋತ್ರದಲ್ಲಿ ತುಂಬಿ ಪೂರೈಸುವ ಶಬ್ದವೆ ಸಿದ್ಧರಾಮಯ್ಯನಾದ. ಘ್ರಾಣದಲ್ಲಿ ತುಂಬಿತುಳುಕುವ ಮೂರ್ತಿಯೆ ಸಿದ್ಧರಾಮಯ್ಯನಾದ. ತ್ವಕ್ಕಿನಲ್ಲಿ ಅರಿವ ಮೂರ್ತಿಯೆ ಅಚ್ಚೊತ್ತಿದ ಸಿದ್ಧರಾಮಯ್ಯನಾದ. ಇಂತಪ್ಪ ಪರಶಿವಮೂರ್ತಿ ಸಿದ್ಧರಾಮಯ್ಯನ ಪಾದೋದಕವ ಕೊಂಡು ಪರವಸ್ತು ನಾನಾದೆ, ಗಂಗಾಪ್ರಿಯ ಕೂಡಲಸಂಗಮದೇವಾ.
--------------
ಗಂಗಾಂಬಿಕೆ
ನಮ್ಮಯ್ಯನ ಮನದಲ್ಲಿ, ಮಾತಿನಲ್ಲಿ ಸೂಸುವ ಮೂರ್ತಿ ನೋಡನೋಡುತ್ತ ಬಯಲಾಯಿತ್ತಲ್ಲಾ ! ಇದು ಅಲ್ಲಮಯ್ಯ ಮಾಡಿದ ಬೇಟ. ಹೋದುದು ನಿಶ್ಚಯವಾದಡೆ, ಕರುಳು ಕಳವಳಿಸುತ್ತಿದ್ದವು. ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ. ಗಂಗಾಪ್ರಿಯ ಕೂಡಲಸಂಗನ ಶರಣರ ಮೊಲೆಯನುಂಬುದಕ್ಕೆ ಬಾರ, ಕೇಳಾ ಚೆನ್ನಬಸವಣ್ಣಾ.
--------------
ಗಂಗಾಂಬಿಕೆ