ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (1) (1) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕರ್ಮದಿಂದ ಕರ್ಮವ ಕಂಡಲ್ಲದೆ, ಮುಂದಣವರ್ಮವನರಿಯಬಾರದು. ವರ್ಮದಿಂದ ಸರ್ವವ ತಿಳಿದಲ್ಲದೆ, ಸತ್ಕರ್ಮ ನಾಸ್ತಿ ವಿರಕ್ತನಾಗಬಾರದು. ಮುಕುರದೊಳಗಣ ನೆಳಲ ತಾ ನೋಡಿ ಕಾಬಂತೆ, ಇದು ಕ್ರಿಯಾಪಥ, ವಿರಕ್ತನ ಶ್ರದ್ಧೆ. ಅದು ಸನ್ಮು ಕ್ತವಾದಲ್ಲಿ ಮಾಡೆನೆಂಬ ಶಂಕೆ. ಮಾಡಿದೆನೆಂಬ ಕೃತ್ಯ ಉಭಯದ ಕಲೆಯಿಲ್ಲ , ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.
--------------
ಹಡಪದ ರೇಚಣ್ಣ
ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ , ಸಂಸಾರ ವಿಷಯಕ್ಕೆ ಮತ್ತನಪ್ಪುದೆ ? ಮತ್ತೆ ಭಕ್ತರ ಗೃಹ ರಾಜದ್ವಾರದ ತಪ್ಪಲ ಕಾಯ್ವದೆ ? ಆ ಚಿತ್ತ ತೊಟ್ಟುಬಿಟ್ಟ ಹಣ್ಣು, ಕಟ್ಟಿಸತ್ತ ಬಿದಿರು, ದೃಷ್ಟ ನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ ಪುನರಪ್ಪಿಯಾಗಿ ? ಇದು ನಿಶ್ಚಯ, ನಿಜಲಿಂಗಾಂಗ ನಿರ್ಲೇಪನ ಹೊಲಬು. ಮತ್ತೆ ಜಗದ ಮೊತ್ತದವನಲ್ಲ , ನಿಃಕಳಂಕ ಕೊಡಲಚೆನ್ನ ಸಂಗಮದೇವ ತಾನಾದ ಶರಣ.
--------------
ಹಡಪದ ರೇಚಣ್ಣ