ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ಏನನಹುದೆಂಬೆ, ಏನನಲ್ಲಾ ಎಂಬೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು, ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು. ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು. ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ ಜೀವಭ್ರಮೆ ನಿಂದಲ್ಲಿ ನಿಂದಿತ್ತು. ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ ಬಂದಿತ್ತು ದಿನ, ಅಂಗವ ಹರಿವುದಕ್ಕೆ. ಈ ಸಂದೇಹದ ಸಂದಿಯಲ್ಲಿ ಕೆಡಹದೆ ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ.
--------------
ತುರುಗಾಹಿ ರಾಮಣ್ಣ
ಅರಿದೆಹೆನೆಂಬನ್ನಕ್ಕ ಆ ತುರಿಯ ಕಂಡೆಹೆನೆಂಬನ್ನಕ್ಕ ಆ ತುರಿಯ ಕಂಡೆನು ಎಂಬಲ್ಲಿ ಸಂದೇಹದ ಸಂದು ಆತುರವೆಂಬ ಅರಿಕೆ ತುರಿಯವೆಂಬ ಮೋಹ ಕಂಡೆನು ಎಂಬ ಸಂದೇಹದ ಸಂದು ನಿಂದಲ್ಲಿ ಅದು ನಿಜದುಳುಮೆ; ಗೋಪತಿನಾಥ ವಿಶ್ವೇಶ್ವರಲಿಂಗವೆ ಪ್ರಮಾಣು.
--------------
ತುರುಗಾಹಿ ರಾಮಣ್ಣ
ಅಂಗಕ್ಕೆ ಲಿಂಗ ಆಚಾರ, ಲಿಂಗಕ್ಕೆ ಸರ್ವಕ್ರಿಯಾಸಂಬಂಧ ಆಚಾರ. ಆ ಆಚಾರಕ್ಕೆಸರ್ವಗುಣ ವಿಚಾರದಿಂದ ಬೀಜ ನಿರ್ವೀಜನರಿದು ಕಾಬುದು ಕಾಣಿಸಿಕೊಂಬ ಉಭಯವ ವೇದಿಸಿ ಪರುಷ ಲೋಹವ ಗ್ರಹಿಸಿದಂತೆ ವಿಭೇದಕ್ಕೆ ಒಡಲಲ್ಲದೆ ನಿಂದನೆಲೆ, ಲಿಂಗ ಪ್ರಾಣದ ಕೂಟ; ಇದು ವಿಶುದ್ಧಿ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ನಿಷ್ಟತ್ತಿಯಾದ ನಿರ್ವೇದ.
--------------
ತುರುಗಾಹಿ ರಾಮಣ್ಣ