ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಸ್ಥಲವಿವರಂಗಳ ವಿಚಾರಿಸುವಲ್ಲಿ ಘಟಕ್ಕೆ ಕರ ಚರಣ ನಾಸಿಕ ನಯನ ಕರ್ಣ ಮುಂತಾದ ಅವಯವಂಗಳೊಳಗಾದ ಭೇದವ ಘಟ ಗಬ್ರ್ಥೀಕರಿಸಿಕೊಂಬತೆ ಆ ಘನವ ಚೇತನ ವಸ್ತು ಹೊತ್ತಾಡುವಂತೆ, ಇದು ಸ್ಥಲವಿವರ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಸದ್ಗುರುವಪ್ಪ ಅಂಡದಲ್ಲಿ ಸದಾತ್ಮವಪ್ಪ ಶಿಷ್ಯ ಪಿಂಡಿತವಾಗಿ, ಆ ಪಿಂಡಕ್ಕೆ ದಿವ್ಯತೇಜೋಪ್ರಕಾಶವಪ್ಪ ಆತ್ಮ ಪುಟ್ಟಲಿಕ್ಕಾಗಿ, ಗುರುವಿನ ಕರಂಡವಳಿದು ಆ ಶಿಷ್ಯನ ಪಿಂಡವಳಿದು, ಮರದಲ್ಲಿ ಉರಿಹುಟ್ಟಿ ಮರನೆಂಬುದು ಕೆಟ್ಟು ಕೆಂಡವಾದಂತೆ, ಕೆಂಡದ ಬೆಂಬಳಿಯಲ್ಲಿ ನಂದದ ದೀಪವ ಕಂಡು . ಕುಂದದ ಬೆಳಗಿನಲ್ಲಿ ಕೂಡಬೇಕು ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಸಕಲಕರ್ಮಂಗಳಲ್ಲಿ ಕೂಡಿದ್ದಡೂ ನಾನಾ ಕರ್ಮ ಧರ್ಮವನರಿದಿರಬೇಕು. ನಾನಾ ಕರ್ಮಂಗಳನರಿದಡೂ ಅಳಿವು ಉಳಿವು ಉಭಯದ ವರ್ಮವನರಿಯಬೇಕು. ವರ್ಮವನರಿದಡೂ ಅಂತಿಂತೆನ್ನದೆ ಸುಮ್ಮನಿರಬೇಕು. ಸುಳುಹು ಸೂಕ್ಷ್ಮನಾಶನವಾಗಿ ಸದ್ಯೋಜಾತಲಿಂಗದಲ್ಲಿ ವಿನಾಶನವಾಗಬೇಕು.
--------------
ಅವಸರದ ರೇಕಣ್ಣ
ಸತ್ತು ಜೀವನೆಂದು ಆತ್ಮ ಕುರುಹಾಗಿ ಅರಿವು ತಲೆದೋರಿ ಅಂಗದ ಕುರುಹ ನುಂಗಿತ್ತು. ನುಂಗಿದ ಅರಿವ ನುಂಗಿಸಿಕೊಂಡು ಕುರುಹ ಆನಂದ ನುಂಗಿತ್ತು. ಆನಂದದ ಬೆಂಬಳಿಯಲ್ಲಿ ನಂದಿ ಸದ್ಯೋಜಾತಲಿಂಗವ ಕೂಡಿಕೊಂಡಿತ್ತು.
--------------
ಅವಸರದ ರೇಕಣ್ಣ
ಸ್ಥೂಲತನುವಿನಲ್ಲಿ ಸೂಕ್ಷ್ಮತನು ಆಧೀನವಾಗಿಪ್ಪುದನರಿದು ಸೂಕ್ಷ್ಮತನುವಿನಲ್ಲಿ ಕಾರಣತನು ಆಧೀನವಾಗಿಪ್ಪುದನರಿದು ಇರಬೇಕು ಎಂಬಲ್ಲಿ ಜಾಗ್ರದಲ್ಲಿ ಸ್ಥೂಲತನು ಕಂಡು, ಸೂಕ್ಷ್ಮತನುವಿಗೆ ಹೇಳಿತೆ ಸ್ವಪ್ನವ ? ಆ ಸ್ವಪ್ನ ಕಾರಣತನುವಿನಲ್ಲಿ ಅಳಿಯಿತ್ತೆ ಕೂಡಿಕೊಂಡು ? ಕಟ್ಟಿಗೆಯ ಹಿಡಿಯಬಹುದಲ್ಲದೆ ಕೆಂಡವ ಹಿಡಿಯಬಹುದೆ ? ಕೆಂಡವ ಒಂದರಲ್ಲಿ ಬಂಧಿಸಿ ಹಿಡಿಯಬಹುದಲ್ಲದೆ ಉರಿಯ ಬಂಧಿಸಿ ಹಿಡಿಯಬಹುದೆ ? ಆ ಉರಿ ಕೆಂಡದಲ್ಲಿ ಅಡಗಿ, ಕೆಂಡ ಕಾಷ*ದಲ್ಲಿ ಅಡಗಿ, ಆ ಕಾಷ* ಆ ಕೆಂಡ ಉರಿಯ ದೆಸೆ, ಆ ಉರಿ ಕಾಷ*ದ ದೆಸೆ. ಆ ಕಾಷ*ದಿಂದ ಕೆಂಡವಾಗಿ, ಆ ಕೆಂಡಕ್ಕೆ ಪ್ರತಿರೂಪಿನಿಂದ ಉರಿ ಪಲ್ಲಯಿಸುವಂತೆ ಇಂತೀ ಸ್ಥೂಲ ಸೂಕ್ಷ್ಮ ಕಾರಣ ತನುತ್ರಯದ ಭೇದ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ, ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ. ಬೀಜ ಒಳಗು, ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು, ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು ಹಿಪ್ಪೆ ಬೀಜ ಹೊರಗಾದುದನರಿತು ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ ಜ್ಞಾನ. ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ ಮಾತು ಸಾಕಂತಿರಲಿ. ಕ್ರೀಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ, ದಿವ್ಯಜ್ಞಾನದಲ್ಲಿ ಕೂಟ. ಇದು ಸದ್ಯೋಜಾತಲಿಂಗದ ಷಟ್‍ಸ್ಥಲ ಲೇಪದಾಟ.
--------------
ಅವಸರದ ರೇಕಣ್ಣ
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ, ಶಿಷ್ಯನಿಂದ ಗುರು, ಗುರುವಿನಿಂದ ಗುರುತ್ವ, ಗುರುತ್ವದಿಂದ ಸಕಲವೈಭವಂಗಳ ಸುಖ. ಈ ಗುಣ ಅವರೋಹಾರೋಹಾಗಿ ಬಂದು, ಆ ವಸ್ತು ವಸ್ತುಕವಾಗಿ ಬಂದುದನರಿದು ಪಿಂಡಜ್ಞಾನಸ್ಥಲವ ಕಂಡು ರತ್ನ ರತ್ನ ಕೂಡಿದಂತೆ, ರತಿ ರತಿ ಬೆರಸಿದಂತೆ, ಸುಖ ಸುಖವನಾಧರಿಸಿದಂತೆ, ಬೆಳಗು ಬೆಳಗಿಂಗೆ ಇದಿರಿಟ್ಟಂತೆ, ಅಂಡ ಪಿಂಡ ಜ್ಞಾನ ತ್ರಿವಿಧ ನೀನಲಾ, ಸದ್ಯೋಜಾತಲಿಂಗದ ಲೀಲಾಭಾವ.
--------------
ಅವಸರದ ರೇಕಣ್ಣ
ಸ್ಥಲವನಂಗೀಕರಿಸಿದಲ್ಲಿ ಸ್ಥಲಂಗಳ ಮೆಟ್ಟಿ ನಡೆವಲ್ಲಿ ಮೆಟ್ಟಿದ ಹೆಜ್ಜೆಯ ಮೆಟ್ಟಿ ನಡೆವ ಗಾಣದ ಎತ್ತಿನಂತಾಗದೆ, ಪುರೆ ಎಂದಲ್ಲಿ ಕಳಾಸ ನಿಂದಿತ್ತು, ಸ್ಥಲಂಗಳನಾರೋಪಿಸಿ ಅಭಿಮುಖವಾದಲ್ಲಿ ಸದ್ಯೋಜಾತಲಿಂಗವ ಕೂಡಿಕೊಂಡಿತ್ತು.
--------------
ಅವಸರದ ರೇಕಣ್ಣ