ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೆಂಟು ಠಾವಿನ ಮಠವ ಶುದ್ಧವ ಮಾಡಿ ಧಾರುಣಿಯ ಸುದ್ದಿಯನು ಹದುಳಮಾಡಿ ಆರೈದು ಸಕಲ ನಿಷ್ಕಲದೊಳಗೆ ವೇದ್ಯ ಗೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕತ್ತಲೆಯ ಮನೆಯೊಳಗೊಂದು ಪಶುವಿಪ್ಪುದು ನೋಡಾ. ಆ ಪಶುವಿಂಗೆ ಏಳೆಂಟು ಕೋಣಗಳು ಸ್ನೇಹವಾಗಿರ್ಪವು ನೋಡಾ. ಆದಿಯಲ್ಲಿ ಮಹಾಜ್ಞಾನವುದೋರಲು ಕತ್ತಲೆಮನೆ ಹರಿದು, ಪಶು ಬಯಲಾಯಿತ್ತು ನೋಡಾ. ಏಳೆಂಟು ಕೋಣಗಳು ಅಡಗಿದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಳರಾತ್ರೆಯ ಮನೆಯ ಮಂಟಪದ ಕೋಣೆ ಕೋಣೆಗಳೊಳಗೆ ಏಳೆಂಟು ಕೋಣಗಳು ಹೂಣಿ ಹೊಡೆದಾಡುತ್ತಿವೆ ನೋಡಾ. ಭಾನುವಿನ ಉದಯಕ್ಕೆ ಕೋಣ ಸತ್ತುದ ಕಂಡು ಪ್ರಾಣವೇ ಲಿಂಗವಾಯಿತ್ತೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ. ಆ ಮರಕ್ಕೆ ಏಳೆಂಟು ಎಲೆಗಳು ಇಪ್ಪವು ನೋಡಾ. ಹತ್ತು ವರ್ಣದ ಹಣ್ಣ ಸವಿದು, ಮೇರುವೆಯ ಪಟಕ ತೆಗೆದು, ಮಹಾಲಿಂಗದೊಳು ಬೆರೆದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಣಿಯೊಳಗೆ ಒಬ್ಬ ಬಾಣತಿ ಕುಳಿತು ಏಳೆಂಟನೆಣಿಸುತಿರ್ಪಳು ನೋಡಾ! ಆದಿಯಲ್ಲಿ ಒಬ್ಬ ಮೂರ್ತಿ ಬಂದು, ಏಳೆಂಟು ಕೆಡಿಸಿ ಆ ಬಾಣತಿಯ ಒಡಲ ಸೀಳಿ, ಶಿಶುವ ತಕ್ಕೊಂಡು ಸಾಸಿರಕಂಬದ ಮನೆಯೊಳಗಿಟ್ಟು ತಾನುತಾನಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಣ್ಣಿಲ್ಲದಂಧಕಂಗೆ ಮೂವರು ಮಕ್ಕಳು ಹುಟ್ಟಿ, ಏಳೆಂಟು ಕೋಣೆಗಳಲ್ಲಿ ಬಡಿದಾಡುತಿಪ್ಪರು ನೋಡಾ. ಇದು ಕಾರಣ, ಅಂಧಕಂಗೆ ಕಣ್ಣು ಬರಲೊಡನೆ ಮೂವರು ಮಕ್ಕಳು ಸತ್ತು, ಏಳೆಂಟು ಕೋಣೆಗಳು ಬಯಲಾದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->