ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ.
ತಲೆದೂಗಿ ಝಂಪಿಸಿ ಅಂತಃಕರಣ ಕದಡಿ ಆನಂದಿಸುವುದು ಭಾವಭಕ್ತಿ.
ಬಿಂಬಿಸುವುದಕ್ಕೆ ಪ್ರತಿರೂಪಿಲ್ಲದೆ ಆನಂದ ಅಶ್ರುಗಳು ನಿಂದು,
ಮುತ್ತಿನೊಳಗಣ ಅಪ್ಪುವಿನಂತೆ ಹೆಪ್ಪಳಿಯದೆ ನಿಂದುದು ಜ್ಞಾನಭಕ್ತಿ.
ಇಂತೀ ತುರೀಯಾತುರೀಯವು ಏಕಚಿತ್ತವೆಂಬುದು ನಿಹಿತವಾದಲ್ಲಿ, ಸ್ಥಲಲೇಪ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ.