ಅಥವಾ
(1) (1) (0) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (1) (2) (0) (0) (1) (1) (0) (0) (0) (0) (2) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವರುಣನ ಕಿರಣದಿಂದ ಅಪ್ಪುವಿನ ಸಾರ ಪೃಥ್ವಿಯೊಳಡಗಿದ್ದು ಪೃಥ್ವಿಯ ತಪ್ಪಿಸಿ ತಾನೊಪ್ಪದಲ್ಲಿ ತೆಗವಂತೆ ಅರಿವು-ಮರವೆ, ಪೃಥ್ವಿ-ಅಪ್ಪುವಿನಂತೆ ಇಪ್ಪ ಭೇದವ ತಾನರಿದು ಜಡ-ಅಜಡವೆಂಬ ಉಭಯವರಿವುದು ಸಕಲವೊ? ನಿಃಕಲವೊ? ಬೇರೊಂದು ಹೊಲಬೊ? ನಿನ್ನೊಲವರವ ನೀನೆ ಬಲ್ಲೆ. ಕಾಮಭೀಮ ಜೀವಧನದೊಡೆಯ ನಾನೆಂದೂ ಅರಿಯೆ.
--------------
ಒಕ್ಕಲಿಗ ಮುದ್ದಣ್ಣ
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ, ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ. ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ