ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮ ಕಾಲದೆ ಕಾಡುವ ಮಾಯೆ ನೆಳಲುಗತ್ತಲೆ ನೀನು ಮಾಯೆ. ಸಂಗ ಸುಖದಿಂದ ಹಿಂಗುವರಾರುಯಿಲ್ಲ. ಬಿಗಿದ ಕುಚ, ಉರಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ ಮೋಹಪ್ರಿಯವಾದ ಮೋಹಿನಿಯರ ಅಗಲುವುದೆಂತೊ ಕರಸ್ಥಳದ ಇಷ್ಟಲಿಂಗೇಶ್ವರಾ ?
--------------
ಮೆಡ್ಲೇರಿ ಶಿವಲಿಂಗ
ಕಂಡುದ ಸ್ಥಿರವೆಂಬೋರಲ್ಲದೆ ಕಾಣದ ಸಾಧ್ಯವಾಗಲಾಗದೆಂಬೋರು. ಮುಗ್ಧ ಶರಣೆಯು ಎಲೆಯಡಗಿದ ವೃಕ್ಷದಂತೆ ನೆಲೆಯರಿಯದ ಜಲದ ತನುವಿನಂತೆ ನೆಲದೊಳಗಣ ನಿಧಾನವಿದ್ದು ಕಾಣದೆ ಹಂಬಲಿಪಂತೆ. ತಾನು ಶುಕ್ರನ ಕೊಟ್ಟು ಜನದೊಳು ನಿಂದು ಮುಳುಗಿ ಗಡ ಮುರಿದು ವರುಷವಾಯವಾಗಿ (?) ಹಂಬಲ ಮರದು ಶಿವನ ಧ್ಯಾನಾರೂಢಳಾಗಿ ಲೋಲುಪ್ತಿಯಿಂದ ಇರುವ ಶರಣೆಗೆ ಪೂರ್ವ ನಿಜವ ಸಂತಾನವ ತೋರಿ ನಿಧಿನಿಧಾನದಲ್ಲಿರಿಸಿದೆ ನೀನೆ ಕಾಣಾ ಕರಸ್ಥಳದಿಷ್ಟಲಿಂಗೇಶ್ವರಾ.
--------------
ಮೆಡ್ಲೇರಿ ಶಿವಲಿಂಗ