ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಯೆ ಘನವಾದರೆ ಪುರುಷಂಗೆ ಅಳುಕುವಳೆ ? ಇಳೆಯ ಜನ ಉತ್ಪತ್ತಿಗಳೆಲ್ಲ ಮಾಯೆ ಘನವೆಂಬರು. ಮರುಳು ಭ್ರಮೆವಿಡಿದು, ಅದು ಹುಸಿಯು. ಅರಿಯಿರೆ-ಮಾಯಾಂಗನೆಯ ರೂಪಾಗಿ ಮರ್ತ್ಯಕ್ಕೆ ಬಂದು, ಶರಣ ಮಹಿಮರ ಸೋಲಿಸೇನೆಂದು ನಿಂದಿಹುದಕ್ಕೆ, ಸಾಕ್ಷಾತ್ ಶಂಭು ಅಲ್ಲಮನೆಂಬ ನಾಮಗಳಿಂದ ಸೋಲಿಸಿ, ಮಾಯಾಕೋಳಾ[ಹಳ]ನೆಂಬ ಬಿರಿದು ಶಿವಂಗಲ್ಲದೆ ಮರ್ತ್ಯಲೋಕದ ಮಾನವರಿಗೆ ಸಾಧ್ಯವೆ ? ತನ್ನ ತಾನೆ ಇತರ ದಾಡಿಯಮಾಡಿ ಕೊಂಡಳು ಕಾಣಾ ಕರಸ್ಥಳ[ದ] ಇಷ್ಟಲಿಂಗೇಶ್ವರಾ.
--------------
ಮೆಡ್ಲೇರಿ ಶಿವಲಿಂಗ