ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (5) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0) (1) (0) (1) (0) (0) (1) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ, ತಗರ ತಡದು, ಹಿಂಡನೊಬ್ಬುಳಿತೆಮಾಡಿ, ಹುಲಿ ತೋಳ ಚೋರ ಭಯಮಂ ಕಳೆದು, ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
--------------
ವೀರ ಗೊಲ್ಲಾಳ/ಕಾಟಕೋಟ
ಹೋತನ ಕೊಯ್ದು, ಕುರಿಯ ಸುಲಿದು, ಮರಿಯ ಕೊರಳನೊತ್ತಿ , ಕಾವಲ ಕುನ್ನಿಯ ಕೆಡಹಿ, ತೋಳನ ಕುಲವ ಗೆದ್ದು, ಕುರುಬನ ಕುರುಹಿನ ಕುಲವಡಗಿ, ನೆರೆ ಅರಿವಿನ ಕುಲದಲ್ಲಿ ಅಡಗಬೇಕು, ವೀರಬೀರೇಶ್ವರಲಿಂಗವನರಿದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಹೋತು ಹುಸಿ, ಆಡು ಬಹುಮಾತಿನ ನೀತಿ, ಕುರಿ ಸಕಲೇಂದ್ರಿಯದ ನೆಲ ಹೊಲ, ತಗರು ತಥ್ಯಮಿಥ್ಯದ ಹೋರಟೆ, ಹುಲಿ ದ್ವೇಷದಾಗರ, ತೋಳ ಕೊಂದು ತಿಂಬ ಕಾಟ. ಚೋರ ಮೃತ್ಯು ಇಂತಿವು ಮೊದಲಾದ ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ, ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ ? ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ, ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು, ನೆರೆ ವೀರಬೀರೇಶ್ವರಾ.
--------------
ವೀರ ಗೊಲ್ಲಾಳ/ಕಾಟಕೋಟ