ಓ ಪದದಿಂದ ಪ್ರಾರಂಭವಾಗುವ ವಚನಗಳು:
ಓಂ ನಮಃ ಶಿವಾಯ ಎಂಬ ಮೂಲಮಂತ್ರದಿಂದಗಿರಿಜೆ ಬಂದು ಪಾದಾಮೃತವ ಪಡೆದಳು.ಆ ಪಾದಾಮೃತದಿಂದ ಕ್ಷೀರಸಮುದ್ರ, ಶಿಲಾನದಿ, ಅಮೃತನದಿಇಂತೀ ಮೂರು ನದಿ ಹುಟ್ಟಿದವು ನೋಡಾ, ಜಂಗಮಲಿಂಗಪ್ರಭುವೆ.
ಓಂ ನಮಃ ಶಿವಾಯವೆಂಬ ಮೂಲಮಂತ್ರದಿಂದಗಿರಿಜೆ ಪಾದೋದಕವ ಮಾಡಿಕೊಂಡು ಬಂದು ನಿಂದುಗೊಡ್ಡಿನ ಮೇಲೆ ತಳಿದಳು.ತಳಿಯಲು ಗೊಡ್ಡುಗಳು ಕಾಮಧೇನುಗಳಾಗಿ ಕರೆಯಲು,ಆ ಕಾಮಧೇನುಗಳು ಕರೆದ ಕಾರಣದಿಂದಅಲ್ಲಿ ಕ್ಷೀರಸಮುದ್ರ ಹುಟ್ಟಿತು ನೋಡಾ, ಜಂಗಮಲಿಂಗಪ್ರಭುವೆ.