ಅಥವಾ
(1) (0) (0) (0) (2) (2) (0) (0) (0) (0) (0) (0) (1) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (0) (1) (0) (0) (2) (0) (0) (0) (1) (0) (0) (1) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನಲ್ಲಿ ಒಂದು ಗುಣ ತೋರಲಿಕೆ, ಆ ಗುಣವ ಇದಿರ ಕಂಡು ನುಡಿದರೆಂದು ನೋಯಲೇಕೆ ? ಆ ನುಡಿ ತನಗೆ ನಿರುತ್ತರವೆಂಬುದನರಿತು, ಘಾಯ ಬಾವುಗಳಲ್ಲಿ, ಶೋಣಿತ ಹೊರೆಯಲ್ಲಿ ನಿಂದಿರಲಿಕ್ಕಾಗಿ, ಪಾಳಿಸಿ ಹೊರವಡಿಸಿದಾತನೇನು ಹಗೆಯೇ? ತನಗೆಂಬುದನರಿತು ತನ್ನಲ್ಲಿ ಉಂಟಾದ ಅವಗುಣ, ತನಗೆ ತೋರಿದಡೆ, ದೃಷ್ಟವ ಕಂಡು ಹೇಳಿದ ಮತ್ತೆ ಮಿಥ್ಯಗುಣವಿಲ್ಲದೆ ಆ ಕಪಟಗುಣವ ಬಿಡಬೇಕು. ಈ ಗುಣ ಅಂಗವಿರ್ದಲ್ಲಿ, ನಿಂದೆ ದುರ್ಗುಣ ಸೋಂಕದಿಹುದೆ ? ಅರಿಯದೆ ಸೋಂಕಿದಲ್ಲಿ, ಅರಿದ ಮತ್ತೆ ತೊರೆಯಬೇಕು. ತೊರೆದಡೆ ಕೂಗಿನ ದನಿಗೆ ಹೊರಗು, ಮಹಾಮಹಿಮ ಮಾರೇಶ್ವರಾ.
--------------
ಮಾರೇಶ್ವರೊಡೆಯರು