ಅಥವಾ
(0) (0) (0) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಿಪೂರ್ಣ ನಿತ್ಯನಿರಂಜನ ನಿರವಯಲಿಂಗದೊಳು ಸಮರಸೈಕ್ಯವನೆಯ್ದಿಸಿ, ಘನಕ್ಕೆ ಘನವೇದ್ಯವಾದ ಬಳಿಕ ಅರಿವೆಂಬುದಿಲ್ಲ , ಮರಹೆಂಬುದಿಲ್ಲ. ಕೂಡಿದೆನೆಂಬುದಿಲ್ಲ , ಅಗಲಿದೆನೆಂಬುದಿಲ್ಲ. ಕಂಡೆನೆಂಬುದಿಲ್ಲ , ಕಾಣೆನೆಂಬುದಿಲ್ಲ. ಸಂಗನಿಸ್ಸಂಗವೆಂಬುದಿಲ್ಲ. ಶೂನ್ಯ ನಿಶ್ಶೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನೂಯೇನೂ ಇಲ್ಲದೆ ಶಬ್ದಮುಗ್ಧವಾಗಿ ಭ್ರಮರ ಚಂಪಕದೊಡಗೂಡಿದಂತೆ, ಉರಿಯೊಳಡಗಿದ ಕರ್ಪುರದಂತೆ, ಕ್ಷೀರದೊಳು ಬೆರೆದ ಸಲಿಲದಂತೆ, ಅಂಬುಧಿಯೊಳಡಗಿದ ಆಲಿಕಲ್ಲಿನಂತೆ, ನಾನೀನೆಂಬೆರಡಳಿದ ಘನಸುಖವನೇನೆಂದುಪಮಿಸುವೆನಯ್ಯ ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ !
--------------
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)