ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (0) (0) (0) (3) (0) (0) (0) (0) (1) (0) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ.
--------------
ಗೋಣಿ ಮಾರಯ್ಯ
ಮಾಟ ಕೂಟವೆಂಬ ತೆಪ್ಪವ ಮಾಡಿ, ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು, ಒತ್ತುತ್ತಿರಲಾಗಿ ಹಾಯಿ ಮಾರುತನೆಂಬ ಮತ್ಸ ್ಯ. ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ ತ್ರಿವಿಧದ ಸತ್ತೆಯ, ಸರ್ವೇಂದ್ರಿಯ ಬೆಳೆದ ಪಾಸೆಯ ಮರೆಯಲ್ಲಿ ತಪ್ಪಿಹೋಯಿತ್ತು ಮತ್ಸ ್ಯ. ಇಂತೀ ಬರಿ ಕುಕ್ಕೆಯ ಹೊತ್ತು ಮತ್ಸ ್ಯವ ಕಾಣದೆ ವೆಚ್ಚ ಕಡಹಿಲ್ಲ. ಇದರಚ್ಚಿಗವ ಬಿಡಿಸಾ, ಕದಕತನ ಬೇಡ ಕದಂಬಲಿಂಗಾ.
--------------
ಗೋಣಿ ಮಾರಯ್ಯ
ಮಹಾ ಅಂಬುಧಿಯಲ್ಲಿ ಹರಿವ ಮತ್ಸ ್ಯಕ್ಕೆ ನಾನೊಂದು ಬಗೆಯ ಕಂಡೆ. ಅದು ಅಡಗುವ ಮಡುವ ನೋಡಿ ತ್ರಿವಿಧದ ಸೊಕ್ಕು ತಂದು ಆ ಮಡುವಿನುದಕದಲ್ಲಿ ಒಡಗೂಡಿ ಕದಡೆ ಆ ಸೊಕ್ಕು ಮತ್ಸ ್ಯವ ಮುಟ್ಟಿದುದಿಲ್ಲ. ಅದೆಂತೆಂದಡೆ: ಅದರ ನಾಸಿಕದ ಉಸುರು ಸೂಸಲಿಲ್ಲ ಕಂಗಳ ದೃಷ್ಟಿ ಅನಿರಸಂಗೊಳಲಿಲ್ಲ. ಆ ಮತ್ಸ ್ಯದಂಗದ ಕವಚ ದುಸ್ಸಂಗದ ನೀರ ಮುಟ್ಟದಾಗಿ ಅದು ನಿರಂಗದ ಮತ್ಸ ್ಯ ಸುಸಂಗದ ಹೊಳೆಯಲ್ಲಿ ನಿರತಿಶಯದಿಂದ ತಿರುಗುತ್ತದೇಕೊ? ಕದಂಬಲಿಂಗನ ಬಲೆಯ ಹೊಲಬ ಕಂಡು.
--------------
ಗೋಣಿ ಮಾರಯ್ಯ