ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (0) (0) (0) (1) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದ ಕಂಥೆಯ ಹಿಡಿದು ಅಕಾಯಚರಿತ್ರ ಪರಮನೆಂಬ ಜಂಗಮ ಬಂದು, ಕರ ಖರ್ಪರವನಳವಡಿಸಿಕೊಂಡು ಬ್ಥಿಕ್ಷೆಕ್ಕೆ ನಡೆಯಲು ಕೇಳಿದ. ಇಂದ್ರಿಯಂಗಳು ನಿಲಲಮ್ಮದೆ ಕಡೆಯ ಬಾಗಿಲಲ್ಲಿ ನಿಲಕಿ ನೋಡುತಿರ್ದಯ್ಯಾ ! ದಶೇಂದ್ರಿಯಂಗಳು ಪ್ರದಕ್ಷಿಣ ಬಂದು ತಮಗೆ ತಾವೇ ಅಂಜಿ ಓಡಿ[ದವು] ಕೇಟೇಶ್ವರಲಿಂಗನ ಶರಣನಿರವ ಕೇಳಿದಾಕ್ಷಣ.
--------------
ಬೊಕ್ಕಸದ ಚಿಕ್ಕಣ್ಣ
ಕ್ಷಮೆ ದಮೆ ಶಾಂತಿ ಸೈರಣೆ ಭಕ್ತಿ ಜ್ಞಾನ ವೈರಾಗ್ಯಸಂಪನ್ನರಾದ ವೀರಮಾಹೇಶ್ವರರು, ಜಗದ್ಧಿತಾಥಾವಾಗಿ ಮತ್ರ್ಯಲೋಕದೊಳು ಬಂದು, ನಡೆನಡೆಗೆ ನುಡಿನುಡಿಗೆ ಅಡಿಗಡಿಗೆ ಹೆಜ್ಜೆಹೆಜ್ಜೆಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ- ಎಂಬ ಮಂತ್ರಮೂರ್ತಿಗಳಾಗಿ, ಲಿಂಗದ ನೆನಹಿಂದ ಲಿಂಗಾರ್ಪಿತಕ್ಕೆ ಹೋಗಿ, ನಿಂದು ಲಿಂಗಾರ್ಪಿತ ಭಿಕ್ಷಾ ಎಂದಲ್ಲಿ, ಗುರುವಾಜ್ಞೆಯಿಂದ ಬಂದ ಭಿಕ್ಷ ಅಮೃತಾನ್ನವೆಂದು ಕೈಕೊಂಡು ಭೋಜ್ಯ ಭೋಜ್ಯಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಎಂಬ ನುಡಿಯಿಂದ ಸೇವಿಸಿ, ನಿತ್ಯತೃಪ್ತರಾಗಿ, ಸುಳುಹು ಪಾವನರಾಗಿ ಚರಿಸುವ ಮಹಾಮಹಿಮ ಶರಣರ ನಡೆ ಪುರುಷ, ನುಡಿ ಪುರುಷ, ಮುಟ್ಟಿದ್ದು, ನೋಡಿ ಸೋಂಕಿದ್ದೆಲ್ಲಾ ಪಾವನ, ಹಾದ ಜಲವೆಲ್ಲ ಪುಣ್ಯತೀರ್ಥ, ಏರಿದ ಬೆಟ್ಟವೆಲ್ಲ ಶ್ರೀಪರ್ವತಂಗಳಾದವು. ಇಂತಪ್ಪ ನಿರಾಳ ನಿಜೈಕ್ಯ ನಿರಾಮಯ ನಿರ್ದೇಹಿಗಳಾದ ಶರಣರ ಅರೆಪಾದ ಧೂಮ್ರ ಮಲಿನವಾಗಿರುವಂತೆ ಮಾಡಯ್ಯ. [ಕೇಟಶ್ವರಲಿಂಗದಲ್ಲಿ] ಧನ್ಯ ನಾನಯ್ಯ.
--------------
ಬೊಕ್ಕಸದ ಚಿಕ್ಕಣ್ಣ
ಕುರುಹಿನ ಸಾಕಾರವಿಡಿದಾಡುವರೆಲ್ಲರೂ ಕಾಲಕಂಧರನ ಹಂಗಿನಲ್ಲಿಪ್ಪರು. ಅರಿವಿನ ಆಕಾರದಲ್ಲಿ ಅರಿವೆನೆಂಬವರೆಲ್ಲರೂ ನೀಲಮೇಘನ ಹಂಗಿನ ಕೋಲದಲ್ಲಿಪ್ಪರು. ಇವೆಲ್ಲವನರದು ಕಂಡಿಹೆನೆಂಬವರೆಲ್ಲರೂ ಇಲ್ಲವೆಂದು ಆಜ್ಞೆಗೊಳಗಾಗಿಪ್ಪರು. ಕಾಲಕಂಧರನ ಕಾಲಮುರಿದು, ನೀಲಮೇಘನೆಂಬವನ ಕೈಯ ಕೊಯ್ದು, ಎಲ್ಲರಿಗೆ ಮಾರಾಂತೆನು ಇನ್ನು ನಿಲ್ಲಿ ಸಾಕು. ಎನ್ನ ಗೋಣಿಯಮರೆಯಲ್ಲಿ ಇಪ್ಪರೆಲ್ಲರೂ ಎನ್ನ ಗೋವರಾದುದ ನೀ ಮರೆದೆಯಾ ಕೇಟೇಶ್ವರಲಿಂಗವೆ !
--------------
ಬೊಕ್ಕಸದ ಚಿಕ್ಕಣ್ಣ