ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಲ್ಪಿತಾಂತರವನುಂಬುದು ಕಾಯವೋ? ಜೀವವೋ ಜೀವವೆಂದಡೆ ನಿರ್ನಾಮ ಭೇದ, ಕಾಯವೆಂದಡೆ ಮೃತ ಅಚೇತನ ಘಟ. ಉಭಯಸಂಗ ಸಂಬಂಧವಾದಲ್ಲಿ ಎನ್ನಯ್ಯ ಚೆನ್ನರಾಮ ಭೇದ.
--------------
ಏಕಾಂತರಾಮಿತಂದೆ
ಕಾಯ ಹಲವು ಭೇದಗಳಾಗಿ ಆತ್ಮನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
--------------
ಏಕಾಂತರಾಮಿತಂದೆ