ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮುನ್ನವೆ ಮುನ್ನವೆ ಮೂರರ ಹಂಬಲ ಹರಿದು, ಚರ ಪರ ವಿರಕ್ತನಾದ ಬಳಿಕ, ಇನ್ನು ಮೂರರ ಚಿಂತೆಯ ಹಂಬಲೇಕೆ? ಆವಾವ ಜೀವಂಗಳು ತಮ್ಮ ತಮ್ಮ ಮಲವ ಮುಟ್ಟವು. ತೊಂಡು ಮುಚ್ಚಿದ ಜೀವಧನದಂತೆ, ಊರೂರ ತಪ್ಪಲು ಹರಿದು, ಜೋಗಿಯ ಕಯ್ಯ ಕೋಡಗದಂತೆ ಅನ್ಯರಿಗೆ ಹಲ್ಲಕಿರಿದು, ವಿರಕ್ತನೆನಿಸಿಕೊಂಬ ಯುಕ್ತಿಹೀನರ ಕಂಡಡೆ, ಎನ್ನ ಮನ ನಾಚಿತ್ತು ಚೆನ್ನರಾಮ.
--------------
ಏಕಾಂತರಾಮಿತಂದೆ
ಮನ ಲಿಂಗದಲ್ಲಿ ನಿಂದಿತ್ತೆಂಬಲ್ಲಿ ಆ ಮನ ಲಿಂಗಕ್ಕೆ ನೆಲೆಯೊ? ಲಿಂಗ ಮನದ ಸಂಗಿಯೊ? ಎಂಬುದ ತಿಳಿದೆನೆಂಬುದು ಸಂಗವೊ? ನಿಸ್ಸಂಗವೊ? ಬೀಜದೊಳಗಣ ತಿರುಳು ಭೇದಿಸಿ ಪುಟ್ಟುವಲ್ಲಿ ಅದು ತನ್ನಯ ಸುನಾದದಿಂದವೊ? ಅಪ್ಪುವಿನ ಬಿಂದುವಿನ ಭೇದದಿಂದವೊ? ಈ ಉಭಯ ನೆಲೆ ಘಟಿಸಿದಲ್ಲಿ ಯೋಗಕೂಟ. ಆತ್ಮಲಿಂಗದ ಭೇದ, ಮುಕ್ತಿಭೇದ ನಿಂದಲ್ಲಿ ಎನ್ನಯ್ಯ ಚೆನ್ನರಾಮನ ಕೂಟದ ಬೆಳಗು.
--------------
ಏಕಾಂತರಾಮಿತಂದೆ