ಲ ಪದದಿಂದ ಪ್ರಾರಂಭವಾಗುವ ವಚನಗಳು:
ಲಿಂಗಕ್ಕೆ ಹೊರೆಯಲ್ಲದೆನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆ ಹೊರೆಯುಂಟೆ?ಸಂಸಾರಿಗೆ ಪ್ರಕೃತಿ ರಾಗದ್ವೇಷಂಗಳಲ್ಲದೆಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆಈ ಉಭಯದ ಸಂದುಂಟೆ?ಈ ಗುಣದಂಗಲಿಂಗಾಂಗಿಯ ಸಂಗಮಹಾಮಹಿಮ ಮಾರೇಶ್ವರಾ.