ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (4) (0) (0) (0) (0) (0) (0) (0) (0) (0) (0) (0) (0) (0) (0) (1) (0) (1) (1) (0) (0) (0) (1) (0) (1) (0) (0) (0) (0) (0) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ? ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ? ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ? ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು, ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ, ಒಂದ ಬಿಟ್ಟೊಂದು ಇರದು. ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ, ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ. ಇಂತೀ ಉಭಯಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಕಾಯದಿಂದ ತೋರುವದು ಪ್ರಪಂಚವಲ್ಲ, ಜೀವದಿಂದ ತೋರುವದು ಪ್ರಪಂಚವಲ್ಲ, ಅದಂ ತದ್ಭಾವದಿಂದ ತೋರುವದೆ ಪ್ರಪಂಚುಯೆಂಬುದನರಿದು ಸದ್ಭಾವಕ್ಕೊಡಲೆಂಬುದ ಕಂಡು, ಅರಿದು ಮರೆದಲ್ಲಿ ನಿಃಪ್ರಪಂಚು, ಅರಿದಲ್ಲಿ ಪ್ರಪಂಚು. ಉಭಯದ ತೆರದರಿಸಿನ ಕುರುಹುದೋರದೆ ಅಡಗಿ ನಿಷ್ಪತ್ತಿಯಾದುದು, ಗಾರುಡೇಶ್ವರಲಿಂಗವನರಿದುದು.
--------------
ಉಪ್ಪರಗುಡಿಯ ಸೋಮಿದೇವಯ್ಯ
ಕಾಯ ವಸ್ತುವೆಂದಡೆ ನಾನಾ ಮಲಗುಣಂಗಳ ಹೊರೆಯದು. ಜೀವ ವಸ್ತುವೆಂದಡೆ ತ್ರಿವಿಧಮಲದ ಹೊರೆ. ಅರಿವು ವಸ್ತುವೆಂದಡೆ ಒಂದು ಕುರುಹಿನ ಹೊರೆಯಲ್ಲಿ ಹೊರೆಯದು. ಇಂತೀ ಹೊರೆಯ ಹೊರೆಯದೆ, ಪರೀಕ್ಷೆ ವಿದ್ಯನಾಗಿ ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಕಾಯಕ್ಕೆ ಕರಣಂಗಳಿಲ್ಲ, ಜೀವಕ್ಕೆ ಇಂದ್ರಿಯಗಳಿಲ್ಲ. ಅದೆಂತೆಂದಡೆ: ಕಾಯಕ್ಕೂ ಜೀವಕ್ಕೂ ಇಂದ್ರಿಯಂಗಳ ಬೆಂಬಳಿಯಲ್ಲಿ, ಸಂಗಗುಣದಲ್ಲಿ ಘಟಜೀವದ ಬೆಂಬಳಿಯನರಿದು, ಸಂಚಿನ ಸಂಬಂಧದಿಂದ ಘಟಕರಚರಣಾದಿಗಳೆಲ್ಲ ಅವಯವಂಗಳ ಸಂಚಿನ ಭೇದದಿಂದ ಮಿಂಚುವುದನರಿದು ಅವಗತ ಸಂಚವನರಿದವಂಗೆ ಗಾರುಡೇಶ್ವರಲಿಂಗವು ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ