ಅಥವಾ
(0) (0) (0) (0) (0) (0) (0) (0) (0) (1) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (1) (0) (2) (0) (0) (0) (0) (0) (0) (1) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊನೆ ಮೂರು, ಹಿನ್ನೆ ಒಂದು. ಆ ಸೂಜಿಯಲ್ಲಿ ಹೊಲಿದಹೆನೆಂದಡೆ ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ. ಮೊನೆಯೊಂದು, ಹಿನ್ನೆ ಮೂರಾಗಿ ಹೊಲಿದಡೆ, ಹಿನ್ನೆಯ ಮೂರುದಾರ ಮೊನೆಯ ನಾಳದಲ್ಲಿ ಅಡಗಿದವು ನೋಡಾ. ಆ ಮೂರ ಹಿಂಚಿ ಹಾಕಿ, ಮೊನೆಯೊಂದರಲ್ಲಿ ಬೇರೆ ಬೇರೆ ಹೊಲಿಯಬಲ್ಲಡೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಸೂಜಿಕಾಯಕದ ಕಾಮಿತಂದೆ
ಮೂರು ಗಳಿಗೆಯನೊಂದುಗೂಡಿ, ಹೊರೆಯಲ್ಲಿ ಐದು ಕತ್ತರಿಸಲಾಗಿ, ಆರು ಹೋಳಾಯಿತ್ತು. ಆರಕ್ಕೆ ಮೂರ ಪ್ರತಿಯನಿಕ್ಕಲಾಗಿ, ಸೂಜಿಯ ಮೊನೆಯ ಕೊನೆಯಲ್ಲಿ ಆರಡಗಿ ಮೂರೊಡಗೂಡಿದವು. ಮೀರಿ ಹೊಲಿವುದಕ್ಕೆ ಒಡಗೂಡುವ ಹೋಳ ಕಾಣೆ. ಇಂತೀ ಗುಣವಡಗಿದ ಮತ್ತೆ , ಷಡುಸ್ಥಲ ತ್ರಿವಿಧಕೂಟ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನದೇವರಲ್ಲಿಯೆ ಒಡಗೂಟ.
--------------
ಸೂಜಿಕಾಯಕದ ಕಾಮಿತಂದೆ