ಅಥವಾ
(0) (0) (0) (0) (0) (0) (0) (0) (1) (0) (0) (1) (0) (0) ಅಂ (0) ಅಃ (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (1) (0) (0) (2) (1) (0) (0) (0) (0) (0) (1) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊತ್ತಾಡಿದ ಚೋಹವ ಮತ್ತೆ ತೊಟ್ಟು ಬಂದಡೆ ಮೆಚ್ಚರಯ್ಯಾ ಜಗದವರು. ಬಿಟ್ಟ ಹೊನ್ನು ಹೆಣ್ಣು ಮಣ್ಣು ಮತ್ತೆ ಕಚ್ಚಿದಡೆ ಅದು ಸತ್ಯಕ್ಕೆ ದೂರ. ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಸತ್ಯವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಹುಲ್ಲಾದಡೂ ತಳ್ಳಿ ಹೋಹ ಜಲವೆ ತಡೆವುದು. ಹುಳ್ಳಿಯಾದಡೂ ಪ್ರಸ್ತಾವಕ್ಕೊದಗುವದು. ಎನ್ನಲ್ಲಿದ್ದ ಮಾತು ಭಕ್ತಿಯುಳ್ಳವರಿಗೆಲ್ಲಕ್ಕೂ ಬೇಕು. ಎನ್ನೊಡೆಯ ಸಂಗನ ಬಸವಣ್ಣ ಪಣ್ಣೆಯದಂದವನಿಕ್ಕಿ ಕೊಟ್ಟ ಆ ದಂದುಗದಲ್ಲಿದ್ದೇನೆ, ಆ ಮಾತಿಂಗೆ ದಂದಾಣಾ ದತ್ತಣಾ ಎನ್ನದೆ. ಇದರಂದವ ತಪ್ಪದಾಡಿ ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಪಣ್ಣೆಯದ ಚಿಣ್ಣ ಹೇಳಿದ ಮಾತ ಕೇಳಿರಣ್ಣಾ.
--------------
ಗಾವುದಿ ಮಾಚಯ್ಯ