ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (1) (0) (0) (1) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಾಜಿನ ಕುಪ್ಪಿಗೆಯಲ್ಲಿ ನೀರೆಣ್ಣೆಯ ಹೊಯ್ಯಲಿಕ್ಕಾಗಿ, ನೀರೂ ಎಣ್ಣೆಯೂ ಬೇರಾಗಿ ತೋರೂದು. ಆಧಾರ ಗುಣವೆಂದು ನಿಧಾನಿಸಿಕೊಂಡು ನೋಡಲು, ಕುಪ್ಪಿಗೆಯ ಒಪ್ಪವೊ ? ನೀರು ಎಣ್ಣೆ ಅದರೊಳಗೊಪ್ಪಿಹ ಭೇದವೊ ? ಕುಪ್ಪಿಗೆಯ ಗುಣವೆಂದಡೆ ನೀರೆಣ್ಣೆ ಸೇರಿದ ಮತ್ತೆ , ಕುಪ್ಪಿಗೆಯಲ್ಲಿ ಕೃತ್ರಿಮ ಒಂದೂ ಇಲ್ಲಾ ಎಂದಡೆ ದೃಷ್ಟವಿರೋಧ. ಅದೆಂತೆಂದಡೆ : ಆ ಅಂಗ ತಾಳ್ದುದರಿಂದ ಪೃಥಕ್ಕಿಟ್ಟು ಅಂಗ ಬೇರಾಯಿತ್ತು. ಮತ್ತೆ ಮೃತ್ತಿಕೆಯ ಅಂಗದಲ್ಲಿ ಎಣ್ಣೆ ನೀರ ತುಂಬಿ ನೋಡಲಿಕ್ಕಾಗಿ ಬಾಹ್ಯವಿದಿರಲ್ಲಿ ಒಂದೂ ಕಾಣಬಂದುದಿಲ್ಲ. ಈ ಗುಣ ಘಟಹೊರೆಯ ಭೇದ, ಆತ್ಮದಿರವಿನ ಘಟ, ಸಂಸರ್ಗಿಯ ಭಾವ. ಇದ ತಿಳಿವುದು ಕುಟಿಲರಿಗೆ ಅಸಾಧ್ಯ. ಅಕುಟಿಲರಿಗೆ ಸಾಧ್ಯವೇದ್ಯ, ಗೋಳಕಾಕಾರ ವಿಶ್ವವಿರಹಿತ ಲಿಂಗವು.
--------------
ಸಿದ್ಧಾಂತಿ ವೀರಸಂಗಯ್ಯ