ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (1) (0) (0) (1) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರತ್ನಭಂಡಾರ ಮುತ್ತು ವಸ್ತ್ರದ ಪೆಟ್ಟಿಗೆಯಲ್ಲಿ ಬಾಹ್ಯವಸ್ತು ತಾವಪ್ಪವೆ ? ಬೈಕೆಯ ದೃಷ್ಟವಲ್ಲದೆ ಗುಣವಸ್ತು ಗುಣವೊಳಗಿಲ್ಲದಿರೆ, ಬಿದಿರು ಮರ ಲೋಹ ಮುಂತಾದ ಇದಿರಿಟ್ಟ ಕರಂಡಕೆಲ್ಲಕ್ಕೂ ಒಳಗಣ ಗುಣವಸ್ತು ಇಲ್ಲದಿರೆ, ಆತ್ಮನೆಯ್ದಿದ ಘಟದಂತಿಪ್ಪವು. ಆ ಗುಣವಸ್ತು ವಸ್ತುಕದ ಲಕ್ಷದ ನಿರ್ಲಕ್ಷವ ತಿಳಿದು, ತಾನೇನ ಹಿಡಿದು ಧರಿಸಿದಲ್ಲಿಯೂ ಅವು ತಾನಲ್ಲ, ಅವರೊಳು ತಾನಿಲ್ಲ. ಆ ಗುಣ ಮನಭ್ರಾಂತಿಯಲ್ಲದೆ ಲೀಲೋಲ್ಲಾಸತೆ, ಆ ವಿವರ ಗುಣಭಾವವಳಿದು, ಆ ವಸ್ತು ನಿನಗನ್ಯಭಿನ್ನವಲ್ಲ. ತಿಳಿದಡೆ ಕರಂಡದೊಳಗಡಗಿದ, ಅಡಗಿಸಿಕೊಂಡ ಬಾಹ್ಯಗುಣ ವಸ್ತುವಿನಂತಹೆ, ಗೋಳಕಾಕಾರ ವಿಶ್ವವಿರಹಿತಲಿಂಗವನರಿದ ಉಭಯಸಂಗದ ಗುಣ.
--------------
ಸಿದ್ಧಾಂತಿ ವೀರಸಂಗಯ್ಯ