ನಿಷೆ*ಯಿಂದ ಕೊಂಬುದು ದ್ರವ್ಯಪ್ರಸಾದ.
ತೃಪ್ತಿಯಿಂದ ಭೋಗಿಸುವದು ಕರುಣಪ್ರಸಾದ.
ಅರಿವಿನ ಮುಖದಿಂದ ಕುರುಹಳಿದು ಕೊಂಬುದು
ಎರಡಳಿದ ಪ್ರಸಾದ.
ಆ ಪ್ರಸಾದ ಮಹಾಪ್ರಸಾದವಾಗಲಾಗಿ
ವರುಷ ವರುಷಕ್ಕೆ ಇದಿರೆಡೆಗೆಟ್ಟಂತೆ
ಉರಿ ಉರಿಯೆಡೆ ಸುಡಲಿಲ್ಲದ ತೆರನಂತೆ
ಮುಕುರ ಮುಕುರಕ್ಕೆ ಕಳೆಬೆಳಗೊಡಗೂಡಿದಂತೆ.
ಇಂತೀ ಪ್ರಸಾದ ಅಂಗವಾದ ನಿರಂಗಿಯ ತೆರ.
ದಹನ ಚಂಡಿಕೇಶ್ವರಲಿಂಗವೆ ಅಂಗವಾದವನ ಸಂಗ.