ಅಥವಾ
(2) (3) (0) (0) (0) (0) (0) (0) (8) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (1) (0) (0) (0) (0) (0) (0) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತ ಮಾಹೇಶ್ವರ ಆಚಾರಲಿಂಗ ಗುರುಲಿಂಗ ಈ ಇಪ್ಪತ್ತುನಾಲ್ಕುನೊಳಕೊಂಡು ಎನ್ನ ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವಾದನಯ್ಯ ಬಸವಣ್ಣ. ಪ್ರಸಾದಿ ಪ್ರಾಣಲಿಂಗಿ ಶಿವಲಿಂಗ ಜಂಗಮಲಿಂಗ ಈ ಇಪ್ಪತ್ತುನಾಲ್ಕುನೊಳಕೊಂಡು ಎನ್ನ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವಾದನಯ್ಯ ಚೆನ್ನಬಸವಣ್ಣ. ಶರಣ ಐಕ್ಯ ಪ್ರಸಾದಲಿಂಗ ಮಹಾಲಿಂಗ ಈ ಇಪ್ಪತ್ತನಾಲ್ಕುನೊಳಕೊಂಡು ಎನ್ನ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವಾದನಯ್ಯ ಪ್ರಭುದೇವರು. ಉಳಿದ ಶೇಷವೆರಡೆರಡು ಈ ಇಪ್ಪತ್ತುನಾಲ್ಕುನೊಳಕೊಂಡು ಎನ್ನ ಇಷ್ಟಲಿಂಗದ ನಾಳದಲ್ಲಿ ಸಂಬಂಧವಾದನಯ್ಯ ಮರುಳಶಂಕರದೇವರು. ಇಂತೀ ನಾದ ಬಿಂದು ಕಲೆ ಪ್ರಕೃತಿ ಒಂದಾದ ನಿಃಕಲಬ್ರಹ್ಮವೆ ತಾನಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಜ್ಯೋತಿಯೊಳಗೆ ಬೆರದ ಕರ್ಪೂರದಂತೆ ಅಂಗಸಕೀಲ ಲಿಂಗಸಕೀಲವನೊಳಕೊಂಡು ಸಿದ್ಧೇಶ್ವರನ ಬಯಲ ಬೆರಸಿ ನಿರ್ವಯಲಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ