ಅಥವಾ
(1) (1) (1) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (2) (2) (1) (0) (0) (1) (2) (0) (0) (0) (0) (0) (0) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧೃತಿಗೆಟ್ಟು ದೈವವೆಂಬಿರಲ್ಲಯ್ಯಾ. ಧೃತಿಗೆಟ್ಟು ದೈವವ ಪೂಜಿಸುವಿರಲ್ಲಯ್ಯಾ. ಧೃತಿಗೆಟ್ಟು ದೈವಂಗಳ ಬೇಡುವಿರಲ್ಲಯ್ಯಾ. ಗತಿಯಲ್ಲ, ದುರ್ಗತಿಯ ಮಾನವರಿರಾ ದಿಟದಿಟ, ಅಲ್ಲಿ ಬೇಡದಿರಿರೆ. ಶ್ರುತಿ ಸ್ಮøತಿಗಳ ಕೇಳಿ, ಅವೂ ಕೊಡಲರಿಯವೆಂಬುದ ನೆರೆನಂಬಿರೆ, ನಮ್ಮ ಶ್ರೀಮಲ್ಲಿಕಾರ್ಜುನ ಕೊಡುವನು.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಧನ ಜವ್ವನವುಳ್ಳಲ್ಲಿ ಶಿವಶರಣೆಂಬೆ. ಮಾನವಾ, ನೆನೆ ನೆನೆಯೋ, ನೀ ಕೆಡದ ಮುನ್ನ. ಧನ ನಿಲ್ಲದು, ಜವ್ವನ ನಿಲ್ಲದು, ನಿನ್ನ ಪ್ರಾಣ ನಿಲ್ಲದು. ಇದನರಿದು, ಶ್ರೀಮಲ್ಲಿಕಾರ್ಜುನನ ನೆನೆಯೋ, ನೀ ಕೆಡದ ಮುನ್ನ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ