ಅಥವಾ
(1) (1) (0) (0) (0) (0) (0) (0) (4) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (1) (0) (0) (1) (0) (0) (0) (0) (0) (0) (1) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ ಬಾ[ತೆ]ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ? ಹುರುಳಿಲ್ಲದಿಹ ಸಂಸಾರ ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ? ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ? ಎಡಹಿ ಕೊಡ ನೀರೊಳಗೆ ಒಡೆದಂತೆ ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ