ಅಥವಾ
(1) (1) (0) (0) (0) (0) (0) (0) (4) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (1) (0) (0) (1) (0) (0) (0) (0) (0) (0) (1) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ, ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ, ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ, ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ ಬೆರೆಸಿದೆನಯ್ಯಾ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ
ಎಲುವೊಡೆದು, ತನು ಕರಗಿ, ಮನವು ಝಜ್ಜರಂಬೋಗಿ, ಲಿಂಗದಲ್ಲಿ ನೀರು ನೀರಾಗಿ ಬೆರೆಸಲಿಬೇಕು, ಜಂಗಮದಲ್ಲಿ ವಾರಿಕಲ್ಲಾಗಿ ಕರಗಲಿಬೇಕು. ಸರ್ವಾಂಗ ಪುಳಕಂಗಳೊಡೆದು ಕಡಲುಗಳಾಗಿ, ನಿರ್ವಾಣ ನಿಜಪದವೆಂದಪ್ಪುದೋ ಉಳಿಯುಮೇಶ್ವರಾ?
--------------
ಉಳಿಯುಮೇಶ್ವರ ಚಿಕ್ಕಣ್ಣ
ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯಾ! ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ! ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ! ಎನ್ನ ಶಿವಲಿಂಗದೇವನೆ ಬಾರಯ್ಯ! ಎನ್ನ ಭಕ್ತವತ್ಸಲನೆ ಬಾರಯ್ಯ! `ಓಂ ನಮಃ ಶಿವಾಯ' ಎಂದು ಕರೆವೆನು ಉಳಿಯುಮೇಶ್ವರಲಿಂಗವೆ ಬಾರಯ್ಯ!
--------------
ಉಳಿಯುಮೇಶ್ವರ ಚಿಕ್ಕಣ್ಣ
ಎಲುದೊರೆ ಸರಸವಾಡಲೇನು? ಭೃಂಗೀಶನೇ, ಸೀಳಿ ಹೊದೆಯಲೇನು? ಗಜಾಸುರನೆ, ಹೆಣ್ಣು ಲೀಲೆಯಲಾಡಲೇನು? ಅಂಧಕಾಸುರನೆ, ಮನವನಲ್ಲಾಡಲೇನು? ಸಿರಿಯಾಳನೆ. [ನೆ]ಣತೃಣದೋಪಾದಿ ನಾನು, ಎನ್ನನಿನಿತು ಬಳಲಿಸುವರೆ? ಕರುಣಿಸು ಕರುಣಾಕರ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ