ಅಥವಾ
(0) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (3) (0) (0) (0) (0) (2) (0) (0) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (1) (1) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ. ಮಣ್ಣ ಮಡಕೆ ಒಕ್ಕಲಿಗನಲ್ಲಿ, ಚಿನ್ನದ ಮಡಕೆ ಅರಮನೆಯಲ್ಲಿ. ಅರಮನೆ ಗುರುಮನೆ ಹಿರಿದಾದ ಕಾರಣ- ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!
--------------
ಕಿನ್ನರಿ ಬ್ರಹ್ಮಯ್ಯ
ಆಕಾರವೆಂಬೆನೆ ನಿರಾಕಾರವಾಗಿದೆ ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ. ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಕಿನ್ನರಿ ಬ್ರಹ್ಮಯ್ಯ
ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ? ಆಶ್ರಯಿಸಬಹುದು ಪ್ರಭುವಿನ ನುಡಿಯ; ಆಶ್ರಯಿಸಬಹುದು ಹರಗಣಂಗಳ ನುಡಿಯ. ಅದೇನು ಕಾರಣವೆಂದಡೆ: ಕಾರಣವಿಲ್ಲದೆ ಕಂಡಂತಾದರು ತ್ರಿಪುರಾಂತಕಲಿಂಗ ಶರಣರು ಚೆನ್ನಬಸವಯ್ಯಾ.
--------------
ಕಿನ್ನರಿ ಬ್ರಹ್ಮಯ್ಯ