ಅಥವಾ
(0) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (3) (0) (0) (0) (0) (2) (0) (0) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (1) (1) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದಲ್ಲಿ ಕಳವಳವಿರಲು, ಪ್ರಾಣದಲ್ಲಿ ಮಾಯೆಯಿರಲು, ಏತರ ಗಮನ ಏತರ ನಿರ್ವಾಣ. ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ ಸಜ್ಜನೆಯೆಂದು ಕೈವಿಡಿವನಲ್ಲ.
--------------
ಕಿನ್ನರಿ ಬ್ರಹ್ಮಯ್ಯ
ಕಲ್ಲಿಲಿಟ್ಟವಂಗೊಲಿದೆ, ಕಾಲಲೊದ್ದವಂಗೊಲಿದೆ, ಬಾಯಲ್ಲಿ ಉಗಿದವಂಗೊಲಿದೆ. ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ! ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ, ಉಮೆಯ ವರ ತ್ರಿಪುರಾಂತಕಲಿಂಗವೆ.
--------------
ಕಿನ್ನರಿ ಬ್ರಹ್ಮಯ್ಯ
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ? ಕಲ್ಲನೆ ಹಿಡಿದು ಬಿಡದೆ ಹಾರುವಿರಿ. ಕಲ್ಲು ಹಲ್ಲನೆ ಕಳೆಯಿತ್ತು, ಬಲ್ಲವರಿದ ಹೇಳಿ. ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ.
--------------
ಕಿನ್ನರಿ ಬ್ರಹ್ಮಯ್ಯ