ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ. ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು. ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬವರೆಲ್ಲ ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿಕೊಂಬ ಬಡಿಹೋರಿಗಳು. ಇಂತೀ ವಿಶ್ವಗೋಧರೆಲ್ಲರೂ ಕರ್ತಾರನ ಕರ್ಮಟದ ನಕ್ಕುಬಚ್ಚನೆಯ ಚಿಕ್ಕಮಕ್ಕಳು. ಇಂತಿವನರಿದು ಕಾಮದಲ್ಲಿ ಕರಗದೆ, ಕ್ರೋಧದ ದಳ್ಳುರಿಯಲ್ಲಿ ಬೇಯದೆ, ನಾನಾ ವ್ಯಾಮೋಹ ಋತುಕಾಲಂಗಳ ಕಾಹಿನ ಬಲೆಗೊಳಗಾಗುತ್ತ ಮತ್ತೆ ಸಾವಧಾನವೆ, ಮತ್ತೆಯೂ ಜ್ಞಾನಾತೀತವೆ ? ಮತ್ತೆ ಧ್ಯಾನಮೂರ್ತಿಯೆ, ಮತ್ತೆ ನಾನಾ ಕ್ರೀಯಲ್ಲಿ ಭಾವ ವ್ಯವಧಾನವೆ ? ಮತ್ತೆ ಗುರು ಚರ ಪರವೆ, ಒಕ್ಕುಡಿತೆ ನೀರಿನಲ್ಲಿ ತಾ ಸತ್ತ ಮತ್ತೆ ಸಮುದ್ರವೆಷ್ಟಾಳವಾದಡೇನು ? ಕಿಂಚಿತ್ತು ಸುಖದಲ್ಲಿ ಲಿಂಗವ ಬಿಟ್ಟು, ಅಂಗನೆಯರುರಸ್ಥಲದಲ್ಲಿ ಅಂಗೀಕರಿಸಿ ಅವರಧರ ಪಾನಂಗಳ ಮಾಡಿ, ನಾ ಲಿಂಗಾಂಗಿಯೆಂದಡೆ ಸರ್ವಸಂಗಪರಿತ್ಯಾಗವ ಮಾಡಿದ ಲಿಂಗಾಂಗಿಗಳೊಪ್ಪರು. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಸ್ವಪ್ನದಲ್ಲಿ ಕುರುಹುಗಾಣಿಸಿಕೊಳ್ಳಾ.
--------------
ಬಾಚಿಕಾಯಕದ ಬಸವಣ್ಣ
ಆಶೆಯರತ ಬಾಚಿಯಲ್ಲಿ ಭವಪಾಶವಿಲ್ಲದ ಜಂಗಮಕೆ ತೆತ್ತ. ರೋಷವಿಲ್ಲದ ಉಳಿಯಲ್ಲಿ ನಿಜವಾಸವ ನೋಡಿ ಹುಗಿಲುದೆಗೆವುತ್ತ ಭಾಷೆಗೆ ಊಣಯವಿಲ್ಲದ ಸದ್ಭಕ್ತರ ಆಶ್ರಯಕ್ಕೆ ನಿಜವಾಸವ ಮಾಡುವ ಕಾಯಕ. ಈ ಗುಣ ಬಾಚಿಯ ಬಸವಣ್ಣನ ನೇಮ. ಇದು ಸಂಗನಬಸವಣ್ಣ ಕೊಟ್ಟ ಕಾಯಕದಂಗ, ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವನರಿವುದಕ್ಕೆ.
--------------
ಬಾಚಿಕಾಯಕದ ಬಸವಣ್ಣ
ಆಸೆಯ ಬಿಟ್ಟಡೆ ಭಕ್ತರೆಂಬೆ. ವೇಷವ ಬಿಟ್ಟಡೆ ಮಾಹೇಶ್ವರರೆಂಬೆ. ಭವಪಾಶವ ಬಿಟ್ಟಡೆ ಪ್ರಸಾದಿಯೆಂಬೆ. ಭಾವ ಘಟಿಸಿದಡೆ ಪ್ರಾಣಲಿಂಗಿಯೆಂಬೆ. ಬಯಕೆ ನಿಂದಡೆ ಶರಣನೆಂಬೆ. ಅರಿವು ಶೂನ್ಯವಾದಡೆ ಐಕ್ಯನೆಂಬೆ. ಈ ಷಡುಸ್ಥಲದ ಮಹಾಸ್ಥಲದಲ್ಲಿ ಒಡಗೂಡಿ ನಿಂದುದ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗಕ್ಕಲ್ಲದೆ ಇಲ್ಲವೆಂಬೆ.
--------------
ಬಾಚಿಕಾಯಕದ ಬಸವಣ್ಣ
ಆರಾರಿಗೂ ಅಗೋಚರ ಅಸಾಧ್ಯವೆಂಬ ಅಷ್ಟಪುರಿಯೆಂಬ ಬಟ್ಟಬಯಲ ಪಟ್ಟಣದೊಳಗೆ ಪಚ್ಚೆರತ್ನ ಮುತ್ತು ಮಾಣಿಕ್ಯ ತೆತ್ತಿಸಿದ ಶಿವಾಲಯವೆಂಬುದೊಂದು ಗುಡಿಯುಂಟು. ಆ ಗುಡಿಯೊಳಗೊಂದು ಒಂಬತ್ತು ನೆಲೆಯ ಪಾಣಿವಟ್ಟ, ಒಂದೆ ಮುಖ. ಅದರ ಮೇಲೊಂದು ಅನಂತ ಪ್ರಕಾಶವ ಗರ್ಭೀಕರಿಸಿಕೊಂಡಿರ್ಪುದೊಂದು ಲಿಂಗವುಂಟು. ಆ ಲಿಂಗಕ್ಕೆ ನೋಡಬಾರದ ಪೂಜೆಯ ಮಾಡಬೇಕು. ನುಡಿಯಬಾರದ ಮಂತ್ರವ ತುಂಬಬೇಕು. ಹಿಡಿಯಬಾರದ ಜಪವ ನುಡಿಗೆಡೆಯಿಲ್ಲದೆ ಮಾಡಬೇಕು. ಕೊಡಬಾರದ ಅರ್ಪಿತವ ಕೊಡಬೇಕು. ನೆನೆಯಬಾರದ ನೆನಹು ನೆಲೆಗೊಂಡಾತನೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣಂಗಲ್ಲದೆ ಉಳಿದವರಿಗಸಾಧ್ಯವಯ್ಯ.
--------------
ಬಾಚಿಕಾಯಕದ ಬಸವಣ್ಣ