ಅಥವಾ
(1) (0) (0) (0) (1) (1) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (2) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಂಕಿಗೆ ಉರಿ ಮೊದಲೊ, ಹೊಗೆ ಮೊದಲೊ ಎಂಬುದನರಿದಲ್ಲಿ ಇಷ್ಟಲಿಂಗಸಂಬಂಧಿ. ಉಭಯವನಳಿದಲ್ಲಿ ಪ್ರಾಣಲಿಂಗಸಂಬಂಧಿ. ಆ ಉಭಯ ನಷ್ಟವಾದಲ್ಲಿ, ಏನೂ ಎನಲಿಲ್ಲ, ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ
ಬರೆದು ಮತ್ತೆ ತೊಡೆದಡೆ ಅಲೇಖ ಶುದ್ಧವಲ್ಲ ಎಂದೆ. ಹಿರಿದು ಮತ್ತೆ ಮರೆದಡೆ ಆ ಅರಿವಿಂಗೆ ಭಂಗವೆಂದೆ. ಸತ್ತ ಮತ್ತೆ ಸಮುದ್ರವೂ ಸರಿ, ಒಕ್ಕುಡುತೆಯುದಕವೂ ಸರಿ, ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ