ಅಥವಾ
(1) (0) (0) (0) (1) (1) (0) (0) (0) (0) (0) (0) (0) (0) ಅಂ (0) ಅಃ (0) (2) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (2) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರಾಳಂಗೆ ಹಾಲು ನೀರನೆರೆದಲ್ಲಿ ನೀರನುಳುಹಿ ಹಾಲ ಕೊಂಬ ಭೇದವ ನೋಡಾ ! ಎಣ್ಣೆ ನೀರ ಕೂಡಿದಲ್ಲಿ ಅದು ತನ್ನಿಂದಲೆ ಬೆಳೆದು, ಚೆನ್ನಾಗಿ ಉರಿಯದ ಭೇದವ ನೋಡಾ! ಮಣ್ಣು ಹೊನ್ನಿನಲ್ಲಿ ಬೆಳೆದು, ತನ್ನ ತಪ್ಪಿಸಿಕೊಂಡು, ಹೊನ್ನು ಬೆಲೆಯಾದ ಭೇದವ ನೋಡಾ ! ತನ್ನೊಳಗೆ ತಾನಿದು ತನ್ನನರಿಯದೆ, ತೊಳಲುವ ಬಿನ್ನಾಣವ ನೋಡಾ ! ಚೆನ್ನಾಗಿ ನುಡಿವ ಅಣ್ಣಗಳ ಬಾಗಿಲಲ್ಲಿ ನಿಂದು, ನಿಜವುಳ್ಳ ಅಣ್ಣಗಳ ಬಾಗಿಲಲ್ಲಿ ನಿಂದು, ಬಣ್ಣ ಗೆಟ್ಟವರ ಕಂಡು ಚುನ್ನವಾಡುತಿರ್ದ, ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ