ಅಥವಾ

ಒಟ್ಟು 24 ಕಡೆಗಳಲ್ಲಿ , 8 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕಾರಪ್ರಣವದಿಂದ ಸ್ಥೂಲದೇಹ ದಗ್ಧವಾಯಿತ್ತು; ಉಕಾರಪ್ರಣವದಿಂದ ಸೂಕ್ಷ್ಮದೇಹ ನಿರ್ಮಲವಾಯಿತ್ತು; ಮಕಾರಪ್ರಣವದಿಂದ ಕಾರಣದೇಹ ಕರ್ಮ [ಬೀಜ]ವಳಿಯಿತ್ತು. ಅಕಾರದಲ್ಲಿ ಜಾಗೃತಿ, ಉಕಾರದಲ್ಲಿ ಸ್ವಪ್ನದಲ್ಲಿ ಮಕಾರದಲ್ಲಿ ಸುಷಪ್ತ್ವಿ.] [ಜಾಗ್ರ] ಸ್ವಪ್ನದಲ್ಲಿದ್ದ ರೂಹು ಸುಷುಪ್ತಿಯಲ್ಲಿಲ್ಲ. ತ್ರಿವಿಧಾವಸ್ಥೆಯಲ್ಲೊಂದಾಗದ ಮಾತ್ರ ಪ್ರಾಣಲಿಂಗಿ ಆತನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಘನಕ್ಕೆ ಘನವೆಂಬವರ ಮನಕ್ಕೆ ತಂದು ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ. `ಸರ್ವಂ ಖಲ್ವಿದಂ ಬ್ರಹ್ಮ' ಎಂದು ವಾಸಿದಲ್ಲಿ, ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ. ಮಾಡಿ ನೀಡುವೆನೆಂಬವರ ರೂಹು ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ. ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು, ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ ಕದಳಿಯ ಹೋಗಿ ಬಟ್ಟಬಯಲಾಗಿ, ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದೆಯಲ್ಲಾ ಅಲ್ಲಮದೇವಾ
--------------
ಸಿದ್ಧರಾಮೇಶ್ವರ
ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು. ಮನಮಚ್ಚಿ ಕೊಟ್ಟ ಲಿಂಗ, ಹೃತ್ಕಮಲದಲ್ಲಿ ಮುಟ್ಟಿದುದಿಲ್ಲ. ತಾ ದೃಷ್ಟಿತನಾದಲ್ಲದೆ ಇದಿರಿಂಗಿಷ್ಟವ ಕಟ್ಟಬಾರದು. ಕಟ್ಟಿಕೊಂಡು ಮತ್ತೆ ಗುರಿಯನೆಚ್ಚ ಕೈಯ [ಲಾ]ಹರಿಯಂತಿಬೇಕು. ರಣವ ಗೆಲಿದ ದ್ಥೀರನ ಉದಾರದಂತಿರಬೇಕು. ಹೀಂಗಲ್ಲದೆ ಗುರುಸಂಬಂಧವೆಲ್ಲ ಮಡಕೆಯ ಮರೆಯ ಕ್ಷೀರದಂತೆ ಕೈಗುಡಿತೆಗೆ ಬಂದುದಿಲ್ಲ, ಈ ಗುರುಸ್ಥಲವೆಂದಡಕವೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ನೋಡುವ ನರರಿಗೆ ನಿನ್ನ ರೂಹು ತೋರದಯ್ಯಾ. ನುಡಿಸುವ ನರರಿಗೆ ನೀ ನುಡಿದುದು ಮಾಡುವುದಲ್ಲಯ್ಯಾ. ಹಾಡುವ ನರರಿಗೆ ನೀ ಮನವನೀಡುಮಾಡುವನಲ್ಲಯ್ಯಾ. ತೋರುವ ತೋರ್ಪ, ನುಡಿವ ನುಡಿಸುವ ಪ್ರಮಥರ ಏಕೆ ಒಳಕೊಂಡೆ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಆ ಶರಣನ ರೂಹು ಈ ಶರಣನ ಹಸ್ತಕಮಲದಲ್ಲಿ ತೋರುತ್ತಿದೆ ಈ ಶರಣನ ರೂಹು ಆ ಶರಣನ ಪಾದದಲ್ಲಿ ತೋರುತ್ತದ್ಞೆ. ಆ ಶರಣನ ಪಾದ ಈ ಶರಣನ ಮಹಾಹೃದಯದಲ್ಲಿ ಮಹಾಂಗ, ನೇತ್ರದಲ್ಲಿ ಶಿವಲಿಂಗವಾಗಿ, ತೋರಿದ ಜಗತ್ತಿಗೆ ವಿಶ್ವೋದರಿಯಾಗಿ ತೋರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು. ಲಿಂಗಭಕ್ತನ ಇಂಬಾವುದೆಂದರಿಯರು. ಲಿಂಗಭಕ್ತ ಹಮ್ಮುಬಿಮ್ಮಿನವನೆ ? ಲಿಂಗಭಕ್ತ ಸೀಮೆಯಾದವನೆ ? ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ, ಉಳಿದುವೆಲ್ಲಾ `ಸಟೆ' ಎಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು, ಒಬ್ಬನ ರೂಹು ಹೋಗುತ್ತ ಬರುತ್ತದೆ. ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ. ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ, ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ, ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ. ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ, ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ. ಗುಹೇಶ್ವರಲಿಂಗದಲ್ಲಿಹಿಂದಣ ಹುಟ್ಟರತು ಹೋದುದ ಕಂಡೆನಯ್ಯಾ.
--------------
ಅಲ್ಲಮಪ್ರಭುದೇವರು
ತ್ರಿವಿಧವನಿತ್ತು, ರೂಹು ಮಾತು ಬಳಿಕುಂಟೆ ಅಯ್ಯಾ ತನುವ ಕೊಡೆನಾಗಿ ಇದಿರುತ್ತರವಿದೆ, ಮನವ ಕೊಡೆನಾಗಿ ಆನೆಂಬಹಂಕಾರವಿದೆ, ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ. ಕೂಡಲಸಂಗಮದೇವಯ್ಯಾ, ಎಂತು ಭಕ್ತನಪ್ಪೆನು !
--------------
ಬಸವಣ್ಣ
`ವಿಕಾರಿಣ್ಯಾಂ ತಸ್ಯಾಂ' ಎಂಬ ಶ್ರುತಿ ಪ್ರಸಿದ್ಧವು. ವಿಕಾರ ಪ್ರಕೃತಿಯಲ್ಲಲ್ಲದೆ ಪುರುಷನ್ಲಲ್ಲವಯ್ಯಾ. ಪುರುಷನಿಲ್ಲರೆ ಪ್ರಕೃತಿಯ ಕರ್ಮ ನಡೆಯದಯ್ಯಾ. ಸೂರ್ಯಕಿರಣಂದಾದ ಜಲದಲ್ಲಿ ಸೂರ್ಯಬಿಂಬವಿರೆ, ನಿಜ ಸೂರ್ಯನ ರೂಹು ಕೆಡದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕರುವಿನ ರೂಹು ಅರಗಿಳಿಯನೋದಿಸುವಂತೆ, ಓದಿಸುವುದಕ್ಕೆ ಜೀವವಿಲ್ಲ ಕೇಳುವುದಕ್ಕೆ ಜ್ಞಾನವಿಲ್ಲ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮನರಿಯದವನ ಭಕ್ತಿ ಕರುವಿನ ರೂಹು ಆ ಅರಗಿಳಿಯನೋದಿಸುವಂತೆ.
--------------
ಅಕ್ಕಮಹಾದೇವಿ
ಮೂರಕ್ಷರದಲ್ಲಿ ಏಳು ಭುವನ ಓಲಾಡುತ್ತಿದೆ. ಮೂರಕ್ಷರದಲ್ಲೀರಾರು ಪ್ರಣವಂಗಳಾಡುತ್ತಿವೆ. ಮೂರಕ್ಷರ ಮೂರು ಮೂರ್ತಿಯ ಕ್ರಿಯೆಯಾಚರಿಸುತ್ತಿದೆ. ಮೂರಕ್ಷರದಲ್ಲಿ ಮಾರಹರ ಕಪಿಲಸಿದ್ಧಮಲ್ಲಿಕಾರ್ಜುನನ ರೂಹು ತೋರುತ್ತದ್ಞೆ.
--------------
ಸಿದ್ಧರಾಮೇಶ್ವರ
ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದಡೇನು, ಶಿವಭಕ್ತಿುಲ್ಲದನ್ನಕ್ಕ ಫಲವಾದಡೇನು ಹೇಳಾ, ಹಾವುಮೆಕ್ಕೆಯ ಕಾು ಕುಲವಿಲ್ಲದ ರೂಹು ಎಲ್ಲದ್ದಡೇನು ಬಚ್ಚಲ ನೀರು ತಿಳಿದಲ್ಲಿ ಫಲವೇನು ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ. 121
--------------
ಬಸವಣ್ಣ
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲವಿಸ್ತಾರದ ರೂಹು ನೀನೇ ದೇವಾ, `ವಿಶ್ವತಶ್ಚಕ್ಷು' ನೀನೆ ದೇವಾ, `ವಿಶ್ವತೋಮುಖ' ನೀನೆ ದೇವಾ, `ವಿಶ್ವತೋಬಾಹು' ನೀನೇ ದೇವಾ, `ವಿಶ್ವತಃಪಾದ' ನೀನೆ ದೇವಾ, ಕೂಡಲಸಂಗಮದೇವಾ.
--------------
ಬಸವಣ್ಣ
ಎಲ್ಲರ ಬಣ್ಣಿಸಬಹುದು, ಎನ್ನ ಗುರುದೇವನ ಬಣ್ಣಿಸಬಾರದು. ಅಲ್ಲನ ನುಡಿಸಬಹುದು, ಎನ್ನ ನಲ್ಲ ಕಪಿಲಸಿದ್ಧಮಲ್ಲೇಂದ್ರನ ರೂಹು ಚೆನ್ನಬಸವನ ನುಡಿಸಿ ಗೆಲಬಾರದು, ಖುಲ್ಲತನಂದದಾದಡೂ ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->