ಈ ವಚನ ಸಂಗ್ರಹದಲ್ಲಿ 218 ಪುರುಷ ವಚನಕಾರರು, 31 ಸ್ತ್ರೀ ವಚನಕಾರ್ತಿಯರೂ ಒಳಗೊಂಡಂತೆ ಒಟ್ಟು 249 ವಚನಕಾರರ, 20929ಕ್ಕೂ ಹೆಚ್ಚು ವಚನಗಳಿವೆ.
ವಚನಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 209876 ಕೂ ಹೆಚ್ಚು.
ಈ ತಂತ್ರಾಂಶ ವಚನದಲ್ಲಿನ ಪದಗಳನ್ನು ಆಯಾ ವಚನ ಮತ್ತು ವಚನಕಾರರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.
ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವು ಹೇಳಿರಯ್ಯಾ.
ಸರ್ವ ಫಲರಸ ಘೃತ ತೈಲ ಮಧುರ ವಿದಳಧಾನ್ಯ ಮುಂತಾದವಕ್ಕೆ
ಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ.
ಇದ ನೀವೆ ಬಲ್ಲಿರಿ.
ಸಪ್ಪೆ ಯಾವುದೆಂದಡೆ ಸುಖದುಃಖಂಗಳೆಂಬುದನರಿಯದೆ,
ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ,
ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ,
ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ,
ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ.
ಇದು ಅಂತರಂಗದ ವ್ರತ ಲವಣವ ಬಿಟ್ಟುದು ಬಹಿರಂಗ ಶೀಲ.
ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಪ್ಪೆಯ ವ್ರತ ಅರ್ಪಿತವಾಯಿತ್ತು.
ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. ೧೧ನೇ ಶತಮಾನದಲ್ಲಿ ಉದಯಿಸಿ ೧೨ನೇ ಶತಮಾನದವರೆಗೂ ಲಿಂಗಾಯತರ ಆಂದೋಲನ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ 'ಪ್ರಮಾಣ' ಎಂದರ್ಥ.
ಮಾದರ ಚೆನ್ನಯ್ಯ ಎಂಬ ೧೧ನೇ ಶತಮಾನದಲ್ಲಿ ದಕ್ಷಿಣದ ಚಾಲುಕ್ಯರ ಕಾಲದ ಸಂತ, ಈ ಸಾಹಿತ್ಯ ಸಂಸ್ಕೃತಿಯ ಮೊದಲ ಕವಿಯಾಗಿದ್ದು, ನಂತರ ಉತ್ತರದ ಕಲಾಚುರಿಯ ರಾಜ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ (೧೧೬೦) ಇದರ ಪಿತಾಮಹನೆಂದು ಕರೆಸಿಕೊಳ್ಳುತ್ತಾರೆ.
Vachana sahitya (Kannada: ವಚನ ಸಾಹಿತ್ಯ) is a form of rhythmic writing in Kannada (see also Kannada poetry) that evolved in the 11th Century C.E. and flourished in the 12th century, as a part of the Lingayatha 'movement'. Vachanas literally means "(that which is) said". These are readily intelligible prose texts.
Madara Chennaiah, an 11th-century cobbler-saint who lived in the reign of Western Chalukyas, is first poet of this tradition and was considered by later poets, such as Basavanna (1160), who was also the prime minister of southern Kalachuri King Bijjala II, as his literary father.