ಸಂಚಯದ ಯೋಜನೆಗಳಿಗೆ ತಂತ್ರಜ್ಞಾನದ ಅಭಿವೃದ್ಧಿ, ಮೂಲ ಸೌಕರ್ಯಗಳು, ಹೊಸ ಯೋಜನೆಗಳ ಅನುಷ್ಠಾನಕ್ಕೆ ನೀವೂ ಕೈ ಜೋಡಿಸಬಹುದು. ೨೦೧೧ ರಿಂದ ೨೦೧೮ರ ಸ್ವಯಂ ಸೇವಕರ ಸ್ವಸಹಾಯದಿಂದಲೇ ನೆಡೆದು ಬಂದಿದ್ದು, ನಮ್ಮ ಮುಂದಿನ ಯೋಜನೆಗಳಿಗೆ ಕನ್ನಡ ಸಮುದಾಯವೂ ತನ್ನ ಸಹಾಯ ಹಸ್ತವನ್ನು ಚಾಚುತ್ತದೆ ಎಂದು ನಂಬುತ್ತೇವೆ. ಸಂಚಿ ಫೌಂಡೇಷನ್ – ಸಹಯೋಗದೊಂದಿಗೆ ಸಂಚಯದ ಕಾರ್ಯಗಳಿಗೆ ದೇಣಿಗೆ ನೀಡಬಹುದಾಗಿದೆ. "ಸಂಚಿ" ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ.
ಸಂಚಿ ಫೌಂಡೇಶನ್ (ಆರ್) ಗೆ ನೀಡುದ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.

ಅ[ರೆ]ಪು : ಅರೆಯುವಿಕೆ, ಸಣ್ಣಮಾಡುವಿಕೆ
ಅಂಕ : ಸೈನಿಕ, ಯೋಧ
ಅಂಕ : ಸೈನಿಕ, ಯೋಧ
ಅಂಕ : ಯುದ್ಧ, ಯುದ್ಧಭೂಮಿ, ಕುರಹು
ಅಂಕಕಾರ : ಹೆಸರಾಂತ ವೀರ
ಅಂಕಣಿ : ಚಕಾಪು
ಅಕಲ್ಪಿತ : ಅಕಸ್ಮಾತ್ತಾದ, ಸಹಜವಾದ, ಕಲ್ಪಿತವಲ್ಲದ
ಅಕಳಂಕ : ದೋಷರಹಿತ, ಶುಭ್ರ, ಶಿವ
ಅಂಕುರ : ಚಿಗುರು
ಅಂಕುರ : ಮೊಳಕೆ
ಅಂಕುಶ : ಈಟಿ
ಅಕುಳ : ಚಿಂತೆ
ಅಂಕೆಯಾಗು : ಅಂಕಿತದಲಿಅಸು, ತಾಳು
ಅಂಕೋಲೆ : ಒಂದು ಜಾತಿಯ ಮರ
ಅಕ್ಕಜ : ಆಶ್ಚರ್ಯ
ಅಕ್ಕರು ಅಳ್ಕರು : ಪ್ರೀತಿ
ಅಕ್ಕವೆ : ಜೀರ್ಣ, ಪ್ರಯೋಜನ
ಅಕ್ಕಾಡು : ಆಳ್ಕಾಡು, ಕಂಪನಗೊಳ್ಳು
ಅಕ್ಕಾಡು : ಚೆಲ್ಲು&ಔಇಟig;, ಹೊರಸೂಸು
ಅಕ್ಕಿತ್ತೆ : ಕಂಪನಗೊಂಡಿತ್ತೆ
ಅಕ್ಕು : ಒಗ್ಗು, ಆಗು ಜೀರ್ಣವಾಗು
ಅಕ್ಕುಲಜ : ಕುಲಹೀನ, ಕುಲಜರಲ್ಲದವರು
ಅಕ್ಕೆ : ದುಃಖ, ಸ್ಥಿತಿ
ಅಕ್ಕೊತ್ತು : ಬಲವಾಗಿ ತಳ್ಳು
ಅಕ್ಷಮಣಿ : ಜಪಮಣಿ
ಅಕ್ಷರತ್ರಯ : ತತ್ ತ್ವಂ ಅಸಿ, ತತ್ವಮಸಿ
ಅಕ್ಷಿ : ಕಣ್ಣು
ಅಖಂಡಿತವಾಗು : ಹೆಚ್ಚಾಗು, ಬೆಳೆ
ಅಂಗ : ಶರೀರ, ದೇಹ
ಅಂಗಗೊಳಿಸು : ಅಳವಡಿಸಿಕೊಳ್ಳು
ಅಂಗಜ : ಮನ್ಮಥ, ಕಾಮ
ಅಂಗಜನ ಪಡೆ (ಬೆ) : ನಾನಾವಿಧ ಕರಣಂಗಳು
ಅಂಗಜಾಹವ : ಕಾಮಕೇಳಿ !
ಅಗಡ : ಒರಟು, ಎಟ್ಟಿ, ಹಂಗು (?), ನಿಂದೆ
ಅಗಡಿ : ಅಗಡ, ಕೆಟ್ಟ ಕೆಲಸ
ಅಗಡುತನ : ತುಂಟತನ, ಕ್ರೂರತನ
ಅಗಡೆತ್ತು : ಮೊಂಡ ಎತ್ತು
ಅಗಣಿತ : ಎಣಿಕೆಗೆಬಾರದ, ಅಸಂಖ್ಯ
ಅಂಗತ : ಅಂಗಸ್ಥ, ಅಳವಟ್ಟ
ಅಂಗತ್ರಯ : ಇಷ್ಟಂಗ, ಪ್ರಾಣಂಗ, ಭಾವಲಿಂಗ
ಅಂಗದ ಧರೆ (ಬೆ) : ತನುವೆಂಬ ಭೂಮಿ
ಅಂಗನೆ : ಹೆಣ್ಣು
ಅಂಗನೆ (ಬೆ) : ಶಾಂತಿಯೆಂಬ ಪರಾಶಕ್ತಿ
ಅಗಮ್ಯ : ತಿಳಿಯಲು ಬಾರದ, ನಿಲುಕದ, ಅರಿತಕ್ಕೆಬಾರದ, ಶಿವ, ಸುಲಭವಾಗಿ ಸಿಗದ,ದೊಡ್ಡಸ್ತನದ ಸೊಬಗು
ಅಗಲು : ನೈವೇದ್ಯ, ಎಡೆ, ಹರಡು, ಊಟದ ತಾಟು
ಅಂಗವಣಿ : ಧೈರ್ಯ
ಅಂಗವಿಲ್ಲದ ಅಂಗನೆ (ಬೆ) : ಅಕಾಯ ರೂಪಿಣಿಯಾದ ಪರಾಶಕ್ತಿ
ಅಂಗವಿಸು : ಕೈಕೊಳ್ಳು, ಅಳವಡಿಸು, ಹೊಂದಿಸು, ಬಯಸು, ಇಚ್ಛಿಸು, ಕೂಡು, ಬೆರೆ, ಸಂಧಿಸು, ಇಷ್ಟಪಡು, ಸಮ್ಮತಿಸು
ಅಂಗವಿಸು (ಅಂಗೈಸು) : ಹಿಡಿ, ಸ್ವಾಧೀನ ಪಡಿಸಿಕೊ
ಅಂಗಸೋಂಕು : ಶರೀರದ ಮೇಲೆ ಲಿಂಗ ಧರಿಸುವುದು, ಇಷ್ಟಲಿಂಗಧಾರಣೆ
ಅಂಗಳ : ಅಂಗುಳ, ಗಂಟಲು
ಅಗಳ : ಕೋಟೆಯ ಸುತ್ತಲಿನ ಕಂದಕ
ಅಗಳು : ಕೋಟೆಯ ಸುತ್ತಲಿನ ಕಂದಕ
ಅಗಳುವ : ಕೆರೆಯ ಮಣ್ಣನ್ನು ಎತ್ತುವ, ಅಗೆಯುವ
ಅಂಗಾಚಾರ : ಅಶುದ್ಧ ಬದುಕು
ಅಗಿ : ತಿನ್ನು
ಅಗಿನ : ಅಗ್ನಿ, ಬೆಂಕಿ
ಅಂಗುಲಿ : ಬೆರಳು
ಅಂಗುಷ್ಠ : ಹೆಬ್ಬೆರಳು
ಅಗುಸೆ : ಊರ ಮಹಾದ್ವಾರ/ಹೆಬ್ಬಾಗಿಲು
ಅಗುಳಿಸು : ತಗ್ಗು ತೋಡಿಸು
ಅಗೆ : ಸಸಿ
ಅಂಗೈಯಮಾಲೆ (ಬೆ) : ಕರಸ್ಥಲದ ಇಷ್ಟಲಿಂಗ
ಅಂಗೈಸು : ಸ್ವೀಕರಿಸು, ಆಶ್ರಯಿಸು, ಜೊತೆಸೇರು
ಅಗೋಚರ : ಕಾಣದ
ಅಗ್ಗ : (ಸಂ. ಅರ್ಘ) ಶ್ರೇಷ್ಠ
ಅಗ್ಗಣಿ : ಪೂಜೆಗಾಗಿ ತಂದ ನೀರು
ಅಗ್ಗವಣಿ : ಪವಿತ್ರ ನೀರು
ಅಗ್ಗವಣಿ : ಪೂಜೆಯ ನೀರು
ಅಗ್ಗಿಣಿ : ಅಗ್ಗವಣಿ
ಅಗ್ಗೊಂಬ : ಅಗ್ರಶಾಖೆ
ಅಗ್ಘಣಿ : ಲಿಂಗೋದಕ, ಪವಿತ್ರವಾದ ನೀರು
ಅಗ್ಘಣಿ (ಅಗ್ಘವಣಿ, ಅಗ್ಗಣಿ) : ಕಾಲು ತೊಳೆಯಲು ಕೊಡುವ ನೀರು
ಅಗ್ಘವಣಿ : ಪವಿತ್ರ ಜಲ/ನೀರು
ಅಗ್ನಿ (ಬೆ) : 1.ಹೃದಯದಲ್ಲಿಹುದುಗಿದ ಜ್ಞಾನಾಗ್ನಿ, 2. ಸ್ವಾನುಭಾವ ಪ್ರಭೆ, 3. ತನುಗುಣಸಂಬಂಧಿಯಾದ ದೇಹ, 4. ಆತ್ಮ
ಅಗ್ನಿಮುಖ (ಬೆ) : ಕುಂಡಲಾಗ್ನಿ
ಅಗ್ನಿಯ ಒಡಲು (ಬೆ) : ಅಗ್ನಿಅಂಶವಾದ ದೇಹ
ಅಗ್ನಿಯ ಕಿವಿ ಮೂಗು (ಬೆ) : ಅಗ್ನಿಯ ಅಂಶದಿಂದಾದ ದುರಭಿಮಾನ ಮತ್ತು ಅಹಂಕೃತಿ
ಅಗ್ನಿಸ್ತಂಭ : ಬೆಂಕಿಯನ್ನು ನಂದಿಸುವ ಮಂತ್ರಶಕ್ತಿ
ಅಗ್ನಿಸ್ತಂಭನ : ಬೆಂಕಿ ಸುಡದಂತೆ ಮಾಡುವ ವಿದ್ಯೆ
ಅಗ್ರ : ತುದಿ, ಹಿರಿಯ, ಮೇಲೆ
ಅಗ್ರೋದಕ : ಮೀಸಲುನೀರು, ಮಂತ್ರೋದಕ
ಅಘ : ಪಾಪ
ಅಘಟಿತ ಘಟಿತ : ಉಂಟಾಗದುದನ್ನು ಉಂಟುಮಾಡುವವ
ಅಘಬಂಧ : ಪಾಪದಿಂದ ಕಟ್ಟಲ್ಪಟ್ಟ
ಅಘಭರಿತ : ಪಾಪದಿಂದ ತುಂಬಿದ
ಅಘವಿಧ್ವಂಸನ : ಪಾಪವಿನಾಶನ
ಅಘಹರ : ಪಾಪಹರ, ಶಿವ, ಪಾಪನಾಶಕ
ಅಘಹರನ ದೃಷ್ಟಿ (ಬೆ) : ಸುಜ್ಞಾನಚಕ್ಷು
ಅಘೋರ : ಅತ್ಯಂತ ಭಯಂಕರ
ಅಂಘ್ರಿ : ಪಾದ
ಅಂಘ್ರಿಸಲಿಲ : ಪಾದೋದಕ
ಅಘ್ರ್ಯಪಾದ್ಯ : ಅತಿಥಿಗಳ ಪಾದ ತೊಳೆದು ಸತ್ಕರಿಸುವುದು
ಅಂಚಟಿ : ಹಳೆಯ ಬಟ್ಟೆ, ಹಚ್ಚಡ
ಅಚ್ಚನೆ (ಸಂ, ಅರ್ಚನೆ) : ಪೂಜೆ
ಅಚ್ಚನೆಯಾಡು : ಪೂಜಿಸು
ಅಚ್ಚಿ : ಕಣ್ಣು
ಅಚ್ಚಿಗ : ಶ್ರಮ
ಅಚ್ಚಿಗ : ವ್ಯಥೆ, ಕಳವಳ, ದುಃಖ, ಸಂಕಟ
ಅಚ್ಚಿಗಬಡು : ಆಶ್ಚರ್ಯಪಡು