ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಳಿಕ್ಕಂ ಕೇವಲಂ ಜ್ಞಾನಜಂ ಯೋಗಜಂ ಭೂತಜಂ ಕಾಮದವೆಂದು ಹೃದಯಾಂಗಮೊಂದೆಯೈದು ತೆರನಿವಕ್ಕೆ ವಿವರಂ ಶಿವಾಂಗವಾದ ಹೃದಯವೆ ಕೇವಲಹೃದಯವೆನಿಕುಂ. ಸಾಂತಂ ಯಾಂತದೊಡನೆ ಕೂಡಿ ಆದಿವರ್ಗಾಂತ ಸಂಜ್ಞಿತವಾದೌಕಾರದೊಡನೊಂದಿ ಕಾರ್ಯಕಾರಣದೊಳ್ಬೆರೆಯೆ ಹ್ರೌಂ ಯೆಂದಾಯಿತ್ತಿದೆ ಜ್ಞಾನಜಹೃದಯವೆನಿಕುಂ. ಮತ್ತಂ, ಸಾಂತಮಂಮಾಂತದೊಡಗಲಸಿ ಬಿಂದುವಂ ಬೆರಸೆ ಹ್ಯಂ ಎಂದಾಯಿತ್ತು. ಪುನಸ್ತತ್ವಾಂತಮಂ ಅಕಾರದೊಳ್ಕೂಡಿ ಶಿವಶಕ್ತಿ ಸಂಜ್ಞಿತ ಬಿಂದುವಿನೊಳ್ಮಿಶ್ರಿಸೆ ಹಂ ಎಂದಾಯಿತ್ತೀ ಯುಭಯಂಗೂಡಿ ಯೋಗಜಹೃದಯವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀ ಕಾರಣ ಸೂಕ್ಷ ್ಮ ಷಡಂಗಂಗಳ್ ಸ್ಥೂಲ ಷಡಂಗಕ್ಕೆ ತರದಿಂದೇಕೈಕಮಾಗನುಕೂಲಮಾಗಿರ್ಪವದು- ಮಲ್ಲದೆಯುಂ ಬ್ರಹ್ಮ ವಿಷ್ಣು ರುದ್ರೇಶ್ವರ ಸದಾಶಿವ ಪರಶಿವವರ್ಕಳೆಂಬಿವರಾ ಸ್ಥೂಲಷಡಂಗ ಪರ್ಯಾಯವಯ್ಯಾ, ಪರಮ ಶಿವಲಿಂಗೇಶ್ವರ, ಪಾರ್ವತೀ ಪ್ರಾಣೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕೆಯುಮಗ್ನಿ ಮಂಡಲದೀಶಾನದಿಕ್ಕಿನೇಕದಳದಲ್ಲಿ ಮಕಾರಮ ನದರಾಚೆಯ ಚಂದ್ರಮಂಡಲದಳದ್ವಯದಲ್ಲಿ ಈಶಾನ್ಯ ದಳದೊಳಗೆ ಅಕಾರಮ ನೀಶಾನೇಂದ್ರರಪದಿಕ್ಕಿನ ದಳದಲ್ಲಿ ಅಃಕಾರಮಂ, ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ಈಶಾನ್ಯದಳದೊಳಗೆ ಫಕಾರಮ ನೀಶಾನೇಂದ್ರಪದಿಕ್ಕಿನ ದಳದ್ವಯದಲ್ಲಿ ಬಕಾರಂಗಳನಿಟ್ಟು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ತ್ರಿಭುವನಾಧೀಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾ ಮಂತ್ರಂಗಳ ಪ್ರಕೃತಿಯೆಂತೆನೆಯಾ ಮಂತ್ರಂಗಳ ವಾಸವೆ ಪ್ರಕೃತಿಯೆನಿಕುಮಾ ಮಂತ್ರಂಗಳ ಕೃಹದವೆ ವಿಕೃತಿಯೆನುಕುವೀ- ಯುಭಯಕ್ಕೀ ತೆರದಿಂ ವಿವರಂ- ಪ್ರಕೃತಿಯೆನಲೊಡನಕ್ಷರ ಸ್ವರೂಪಂ. ವಿಕೃತಿಯೆನಲೊಡನಕ್ಷರದ ಭಾವಾಕ್ಷರವದು ಜಿಹ್ವಾವಾಸವೆನಿಕುಮಾ ಜಿಹ್ವಾವಾಸಾಕ್ಷರವೆ ಮುಖವಾಸಾವೆನಿಕುಮಾ ಮುಖವಾಸಾಕ್ಷರವೆ ಬುದ್ಧಿವಾಸವೆನಿಕುಮಾ ಬುದ್ಧಿವಾಸಾಕ್ಷರವೆ ಹೃದಯವಾಸವೆನಿಕುಮಾ ಹೃದಯವಾಸಾಕ್ಷರವೆ ಪಿಂಡವಾಸವೆನಿಕುಮಾ ಪಿಂಡವಾಸಾಕ್ಷರವೆ ನಾಡಿವಾಸವೆನಿಕುಮಾ ನಾಡಿವಾಸಾಕ್ಷರವೆ ಶಕ್ತಿವಾಸವೆನಿಕುಮಾ ಶಕ್ತಿವಾಸಾಕ್ಷರವೆ ಶಿವವಾಸವೆನಿಕುಮಾ ಶಿವನೆ ಸರ್ವಾಕ್ಷರವಾಸವೆನಿಕುಮೀ ಶಿವವಾಸವೆ ಮಂತ್ರಪ್ರಕೃತಿಯೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಭೂತಾಂಗ ನಿರೂಪಣಾನಂತರದಲ್ಲಿ ಕೂಟಾಂಗಮಂ ಪೇಳ್ವೆನೆಂತೆನೆ- ಕೂಟಾಕ್ಷರ ಸಂಜ್ಞಿತವಾದ ಕ್ಷ್ ಎಂಬಕ್ಕರಮಂ ಸ್ವರ ದ್ವಿತೀಯಮಂ ಸ್ವರ ಚತುರ್ಥಮಂ ಸ್ವರ ಷಷ*ಮಂ ಸ್ವರೈಕಾದಶಾಂತಮಂ ಸ್ವರ ತ್ರಯೋದಶಾಂತಮಂ ಸ್ವರ ಪಂಚದಶಾಂತಮಂ ತರದಿಂ ಕೂಡಿಸಿ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಡನೆ ಬೆರಸೆ, ಕ್ಷಾಂ ಕ್ಷೀಂ ಕ್ಷೂಂ ಕ್ಷೆಂ ಕ್ಷೌಂ ಕ್ಷಃ ಎಂದು ಷಡ್ವರ್ಣಯುಕ್ತವಾದ ಕೂಟಾಂಗವಾಯಿತ್ತೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಶಿವಾಸ್ತ್ರಮಂತ್ರಂ, ಕ್ಷುರಿಕಾಸ್ತ್ರಮಂತ್ರಂ ಪಾಶುಪತಾಸ್ತ್ರಮಂತ್ರಂ, ವ್ಯೋಮಾಸ್ತ್ರಮಂತ್ರಂ ಅಘೋರಾಸ್ತ್ರಮಂತ್ರಂ ಇಂತಿವು ಪಂಚಾಸ್ತ್ರಮಂತ್ರಂಗಳಿವಕ್ಕೆ ವಿವರಂ- ಒಂದನೆಯ ಶಿವಾಸ್ತ್ರಮಂತ್ರವೆ ಷಡಕ್ಷರಮೆನಿಕುಂ. ಎರಡನೆಯ ಕ್ಷುರಿಕಾಸ್ತ್ರಮಂತ್ರವೆ ಅಷ್ಟಾಕ್ಷರಮೆನಿಕುಂ. ಮೂರನೆಯ ಪಾಶುಪತಾಸ್ತ್ರಮಂತ್ರವೆ ಪಂಚಾಕ್ಷರಮೆನಿಕುಂ. ನಾಲ್ಕನೆಯ ವ್ಯೋಮಾಸ್ತ್ರವೆ ದಶಾಕ್ಷರಮೆನಿಕುಂ. ಐದನೆಯ ಘೋರಾಸ್ತ್ರವೆ ಚತ್ವಾರಿಂಶದ್ಗಣನೆಯೆನಿಕುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕಮಾ ಲಿಂಗಸ್ಥಲತ್ರಯದಲ್ಲಿ ಇಷ್ಟಲಿಂಗಮೆ ಆಚಾರಲಿಂಗ ಗುರುಲಿಂಗಮೆಂದುಭಯಂ. ಪ್ರಾಣಲಿಂಗಮೆ ಶಿವಲಿಂಗ ಜಂಗಮಲಿಂಗಮೆಂದುಭಯಂ. ಭಾವಲಿಂಗಮೆ ಪ್ರಸಾದಲಿಂಗ ಮಹಾಲಿಂಗಮೆಂದುಭಯಮಿವಂ ಗಣಿಸಲರುವೆಸರಲಿಂಗಮಾಗಲದು ನೀನೆಯಯ್ಯಾ, ನಿಗಮಾಂತ ಭಾಸ್ವರ ನೀಲರುಚಿ ಕಂಧರ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಾಧಾರಶಕ್ತಿ ಸಂಜ್ಞಿತ ಸಕಾರವು ಚತುರ್ದಶ ಸ್ವರದಿಂ ಕೂಡಿ ಕಾರ್ಯ ಕಾರಣಮಂ ಬೆರೆಯೆ ಸೌಂಮೆಂಬೈದನೆಯ ಶಕ್ತಿಬೀಜವಾಯಿತ್ತೆಂದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೆಲರುಗೊಂಟುಗಳ ನಡುವಣ ಮಂಡಲಾಶ್ರಯದ, ತನ್ನಾರು ತನು ಪಸಿರ್ವಣ್ಣದ,[ಕ]ಕಾ[ರಾ]ದಿ ಠಾಂತಾನ್ವಿತದ ಪನ್ನೆರಡೆಸಳ ತಾವರೆಯ ಕರ್ನಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದರೆವೆರೆಯಾದ, ವಕಾರವೆ ಜಂಗಮಲಿಂಗಮದು, ನಿನ್ನ ತತ್ಪುರುಷ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪ್ರಥಿತ ಪ್ರಸಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕೆಯುಮಾ, ಪಿಂಡಬ್ರಹ್ಮಗಳ ಕಳಾಸ್ವರೂಪಮಂ ಪೇಳ್ವೆನೆಂತೆನೆ- ಶಂಖ ಕುಂದ ಚಂದ್ರ ಸ್ಫಟಿಕ ಕ್ಷೀರಗಳೆಂಬೀ ಪಂಚವರ್ಣಾತ್ಮಕವಾದುದೆ ಈಶಾನಮುಖದ ಕಲೆ. ಶೋಣ ಕೃಷ್ಣ ಶ್ವೇತ ಪೀತಂಗಳೆಂಬೀ ಚತುರ್ವ[ರ್ಣೌ]ತ್ಮಕವಾದುದೆ ತತ್ಪುರುಷಮುಖದ ಕಲೆ. ಅಂಜನಾರುಣ ಪೀತ ಶ್ಯಾಮ ನೀಲ ಸಿತಾರುಣ ಕಾಂಚನಂಗಳೆಂಬೀವೆಂಟು ವರ್ಣಾತ್ಮಕವಾದುದೆ ಆಘೋರಮುಖದ ಕಲೆ. ಜಪಾ ಪೀತಾಂಜನ ಶ್ಯಾಮ ಶುಕ್ಲ ಶಾಮಾಂಜನಾರುಣಾಂಜನ ಸ್ಫಟಿಕ ರಕ್ತನೀಲ ಮರಕತಂಗಳೆಂಬೀ ಪದಿಮೂರು ವರ್ಣಾತ್ಮಕವಾದುದೆ ವಾಮದೇವಮುಖದ ಕಲೆ. ರಕ್ತ ಕೃಷ್ಣ ನೀಲ ಕೃಷ್ಣ ಪೀತ ಕುಂಕುಮ ಭಿನ್ನಾಂಜನಾರುಣಂ ಗಳೆಂಬೀಯಷ್ಟಾ ತ್ಮಕವಾದುದೆ ಸದ್ಯೋಜಾತಮುಖದ ಕಲೆ. ಇಂತೀ ಮೂವತ್ತೆಂಟು ಕಲಾಮಯವಾದ ವರ್ನಂಗಳೆ ತ್ರಿನೇತ್ರಂಗಳಿಂ, ಚತುರ್ಭುಜಗಳಿನಭಯ ವರದ ಶೂಲ ಪರಶು ಕರಂಗಳಿಂ, ಸರ್ವಲಕ್ಷಣ ಸಂಯುತಂಗಳಿಂ, ಸರ್ವಾಭರಣಂಗಳಿಂ, ದಿವ್ಯಗಂಧ ಮಾಲ್ಯಂಗಳಿಂದಲಂಕೃತರಾದ ಶಿವಮೂರ್ತಿಗಳೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಡ ವಿರಜೆ, ಢ ಕಾಲೋದರಿ ಣ ಪೂತನೆ, ತ ಭದ್ರಕಾಳಿ ಥ ಯೋಗಿನಿ ದ ಶಂಖಿನಿ ಧ ಗರ್ಜಿನಿ ನ ಕಾಳಾವತಿ ಪ ಕುರ್ದನಿ ಫ ಕಪರ್ದಿನಿ ಇಂತೀ ಮಹಾಲಿಂಗದ ಶಕ್ತಿಯ ಕಂಠಸಂಜ್ಞಿತ ಮಣಿಪೂರಕಚಕ್ರದ ದಶಕೋಷ*ದಳ ನ್ಯಸ್ತ ದಶರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ `ಶುಕ್ಲವರ್ಣವಾದೊಂದನೆಯ ಕೇವಲಹೃದಯವೆ ಈಶಾನವೆನಿಕುಂ. ತಪ್ತಕಾಂಚನವರ್ಣವಾದೆರಡನೆಯ ಜ್ಞಾನಹೃದಯವೆ ಈಶ್ವರನೆನಿಕುಂ. ಪೀತವರ್ಣವಾದ ಮೂರನೆಯ ಯೋಗಜಹೃದಯವೆ ಬ್ರಹ್ಮವೆನಿಕುಂ. ರತ್ನವರ್ಣವಾದ ನಾಲ್ಕನೆಯ ಭೂತಜಹೃದಯವೆ ಮತ್ತೆಯುವಿೂಶ್ವರವೆನಿಕುಂ. ಶುದ್ಧ ಸ್ಫಟಿಕವರ್ಣವಾದ ಕಾಮದಹೃದಯವೆ ಸಾದಾಖ್ಯತತ್ವವೆನಿಕು'ಮೆಂದು, ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೂಧ್ರ್ವಾಬ್ಜವೆಂಬ ಪೆಸರ ಹೃದಯಸ್ಥಾನದೆ ಅನಾಹತಚಕ್ರಮೆನಿಸುಗುಮಲ್ಲಿಯ ದ್ವಾದಶಕೋಷ*ಂಗಳೆ ದ್ವಾದಶದಳಂಗಳವರಲ್ಲಿ ಕ ಖ ಗ ಘ ಙ ಚ ಛ ಜ ರುsು ಞ ಟ ಠ ಎಂಬ ಪನ್ನೆರಡಕ್ಕರಂಗಳ್ನೆಲಸಿರ್ಕುಮೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀಯೂಧ್ರ್ವದ ಶಿವ ಷಟ್ಚಕ್ರಕೋಷ*ದಳ ನ್ಯಸ್ತವಾದೇಕ ಪಂಚಾಶದ್ವರ್ಣಂಗಳೆಲ್ಲವುಂ ರುದ್ರಬೀಜಂಗಳಿವರ ವಾಚ್ಯ ವಾಚಕತ್ವದಲ್ಲಿರ್ಪ ರುದ್ರಮೂರ್ತಿಗಳಂ ಪೇಳ್ವೆನೆಂತೆನೆ- ಯಾ ಮಹಾಲಿಂಗದೂಧ್ರ್ವಪಟ್ಟಿಕೆಯೊಳಿರ್ದ ಷೋಡಶಸ್ವರಾಕ್ಷರ ವಾಚ್ಯರುದ್ರರಂ ತರದಿಂ ನಿರವಿಸುತಿರ್ದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಶಾಂತಿಕಮಂತ್ರ ನಿರೂಪಣಾನಂತರದಲ್ಲಿ ಪೌಷಿ*ಕಮಂತ್ರಮಂ ಪೇಳ್ವೆನೆಂತೆನೆ- ಪರಾತ್ಪರಸಂಜ್ಞಿತವಾದ ಹಕಾರವನುದ್ಧರಿಸಿ, ಇಂದ್ರವರ್ಗ ಸ್ವರತ್ರಯೋದಶಮಂ ಬೆರಸಿ, ಕಾರ್ಯಕಾರಣ ಸಂಜ್ಞಿತವಾದ ಸೊನ್ನೆಯಂ ಕೂಡೆ ಹೌಂ ಎಂಬಕ್ಕರವಾಯ್ತು. ಶಕ್ತಿಬೀಜಸಂಜ್ಞಿತವಾದ ಸ್ ಎಂಬ ವ್ಯಂಜನಮಂ ಜೀವಸಂಜ್ಞಿತವಾದಕಾರದೊಡನೆ ಕೂಡೆ ಸ ಎನಿಸಿತು. ಅವರ ಮುಂದೆ ಮತ್ತೊಂದೀಶವರ್ಗದ ಮೂರನೆಯಕ್ಕರವೆನಿಸುವ ಸ್ ಎಂಬಕ್ಕರಕ್ಕಂ, ಮತ್ತೆಯುಮದೇ ವರ್ಗದೆರಡನೆಯ ಷ್ ಎಂಬುದಕ್ಕೆಯುಂ ಜೀವಸಂಜ್ಞಿತವಾದಕಾರವಂ ಪತ್ತಿಸೆ ಸ ಷ ಎನಿಸಿದ ವೇಳನೆಯ ವರ್ಗದ ಕಡೆಯಕ್ಕರವಾದ ವ್ ಎಂಬಕ್ಕರವ ನದೇ ವರ್ಗದೆರಡನೆಯ ಷಕಾರದೊಳೊಂದಿಸೆ ಷ್ವ ಎನಿಸಿ ತ್ತಾರನೆಯ ಸ್ವರದೊಳ್ಮೇಳಿಸೆ ಮೂ ಎನಿಸಿತು. ಭೂತಾಂತ ಸಂಜ್ಞಿತವಾದ ಹಕಾರವನುದ್ಧರಿಸಿ ಯದರ ಮೇಲೆ ಅಗ್ನಿ ಸಂಜ್ಞಿತವಾದಾಕರಮಂ ಪತ್ತಿಸೆ ಹ್ರೂ ಎನಿಸಿತ್ತು. ಭಕಾರದ ಕಡೆಯ ವ್ಯಂಜನಮಂ ದಶಸ್ವರಾಂತರದೊಳ್ಬೆರಸೆ ಮೆ ಎನಿಸಿತ್ತು. ಪಂಚವರ್ಗಂಗಳೈದನೆಯದಾದ ನ್ ಎಂಬುದನದರಾರನೆಯ ಮ್ ಎಂಬುದಂ ಅದರೇಳನೆಯ ಯ್ ಎಂಬುದು ಸ್ವರಾದಿಯಾದ ಕಾರಣದೊಳ್ಕೂಡಿಸೆ ತರದಿಂ ನ ಮ ಎನಿಸಿದವಿವಂ ಪರತರ ಸಂಜ್ಞಿತವಾದ ಸೊನ್ನೆಯೊಳ್ಬೆರಸಿ ತರದಿಂದೀ ಪತ್ತಕ್ಕರಮಂ ಕೂಡಿ `ಹೌಂ ಸಂ ಸ್ವಂ ಷ್ವಂ ಮೂಂ ಹ್ರೂಂ ಮೇಂ ನಂ ಮಂ ಯಂ' ಯೆಂಬೀ ದಶಾಕ್ಷರ ಮಂತ್ರವೇ ಪೌಷಿ*ಕಮಂತ್ರವೆನಿಸಿತ್ತೀ ಪೂರ್ವೊಕ್ತ ಪಂಚಾಕ್ಷರ ಷಡಕ್ಷರಷ್ಟಾಕ್ಷರ ನವಾಕ್ಷರ ದಶಾಕ್ಷರಂಗಳನುಳ್ಳ ತರದಿಂ ಮೋಕ್ಷದಾಭಿವೃದ್ಧಿ ಕಾಮ್ಮ ಶಾಂತಿಕ ಪೌಷಿ*ಕಂಗಳೆಂದೀ ಐದೆರನಾದುದೆ ಸದಾಶಿವಮಂತ್ರವೆಂದೊರೆದೆಯಯ್ಯಾ, ಪರಮಗುರು ಪರಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕಲುಂ ದ್ವಂಗುಲದ ಬಟುವೆ ಕರ್ಣಿಕೆಯಾ ಕವಯಾರಮನೂರಿದ ನೆಲೆಯೆ ಬ್ರಹ್ಮರಂಧ್ರವೆನಿಪ ಸೂಕ್ಷ ್ಮಕರ್ಣಿಕೆಯಾ ದ್ವ್ಯಂಗುಲ ವೃತ್ತವೆ ಸ ಕೇಸರ ಚತುರ್ದಳಾನ್ವಿತ ಸ್ಥೂಲಕರ್ಣಿಕೆ- ಯದರಾಚೆಯ ಬಟುವೆ ಅಗ್ನಿಮಂಡಲ- ಮದರಾಚೆಯ ಬಟುವೆ ಚಂದ್ರಮಂಡಲ- ಮದರಾಚೆಯ ಬಟುವೆ ಸೂರ್ಯಮಂಡಲಮೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಪಟುತರ ವೃಷತುರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಚತುರ್ಭುಜ, ತ್ರೀನೇತ್ರ, ಜಟಾಮಕುಟ, ಸರ್ವಲಕ್ಷಣಸಂಯುಕ್ತ, ಸರ್ವಾಭರಣಭೂಷಿತ, ತ್ರಿಶೂಲಾಭಯ ಕಪಾಲ ವರದಾನ್ವಿತ, ದಕ್ಷಿಣ ಮಕರವಾ ಚತುಷ್ಟಯ, ಹಾರ ಕೇಯೂರ ಕಟಕ ಕುಂಡಲಾದಿಗಳಿಂದಲಂಕೃತವಾದ ಸರ್ವಾವಯವಂಗಳನುಳ್ಳುದೆ ಸೌಮ್ಯರೂಪ- ಮುಳಿದುದೆಲ್ಲಂ ರುದ್ರರೂಪಮೆಂದು ನಿರವಿಸಿಯಾ ಶಿವಾಂಗಂಗಳಿಂದವೆ ಶಿವಾರ್ಚನೆಯನೆಸಗುವದೆಂದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀ ಮೂಲಪ್ರಸಾದವೆ ಶಿವನೀ ವೈದಿಕ ಪ್ರಸಾದಮಂತ್ರ ಮೂರ್ತಿಯೆಂತೆನೆ, ಹಕಾರವೆ ದೇಹ, ಬಿಂದುವೆ ಮುಖಮೆಂಬಲ್ಲಿ ಆ ಪರಶಿವನ ನಿಷ್ಕಲಶಕ್ತಿಯೆನಿಪ ಷಾಂತವೆ ಬಿಂದು ತದಂಶಗಳಾದ ವ್ಯಂಜನಂಗಳುಮಂತೆಯೆ. ಬಳಿಕಲಾ ಶಾಂತ್ಯತೀತ ಕಳಾಮಯಿಯಾದ ನಿಷ್ಕಳ ಪರಾಶಕ್ತಿಯ ಭೋಗಾಧಿಕಾರಿಗಳಾದ ಶಿವ ಸದಾಶಿವ ಮಾಹೇಶ್ವರನ ವ್ಯಾಪಾರಕ್ಕೆ ಶುದ್ಧ ಮಾರ್ಗೋಪಾಧಿಯಾಗಿ ಪ್ರಕಾಶ ಬ್ರಹ್ಮಾಧಿಷಾ*ನ ರೂಪಿಣಿಯಾದ ಕುಂಡಲಿನಿಯೆನಿಸಲಾ ಕುಂಡಲಿನಿಯೆ ಬಿಂದುವದೆ ಶೂನ್ಯವದೆ ಸೊನ್ನೆಯದೆ ಪರಿಶಿವನ ಲೀಲಾವ್ಯಾಪಾರಂಗಳ್ಗೆ ಮುಖ್ಯ[ವ]ಪ್ಪುದರಿಂ ಬಟ್ಟಿತ್ತಾದ ಸೊನ್ನೆಯದುವೆ ಹಿಂಗೆ ಮೇಲಿರುತಿರ್ದ ಕಾರಣವದೆ ಮೂಲಪ್ರಸಾದಮಂತ್ರ ಮೂರ್ತಿಯ ಮುಖವೆಂದುಪದೇಶಿಸಿದೆಯಯ್ಯಾ, ಪರಶಿವಲಿಂಗೇಶ್ವರ ಚಿದ್ಗಗನ ಪ್ರಭಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ