ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ತೆಯುಂ, ರಕ್ತವರ್ಣದಿಂ ಮೊದಲಂತೆ ಬಾಹ್ಯರೇಖೆಯಂ ಲಿಖಿಪುದು. ಕೃಷ್ಣವರ್ಣದಿಂ ಮಧ್ಯರೇಖೆಯಂ ಬರೆವುದು. ಧವಳವರ್ಣದಿಂ ಕಡೆಯರೇಖೆಯಂ ತಿರ್ದು[ವು] ದು. ಬಾಹ್ಯಮಂಡಲ ದಳಂಗಳಂ ರಕ್ತವರ್ಣದಿಂದವೆ ಬರೆವುದು. ಉಳಿದ ಮಂಡಲದಳಂಗಳ್ಮೊದಲಂತೆಯೆಂದೆಯಯ್ಯಾ, ಪರಮ ಶಿವಲಿಂಗ ಮಾಯಾಕಾರ್ಯ ವಿಭಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮೀ ಷಡಂಗಕೈಶ್ವರ್ಯ ಸಮಗ್ರ ವೀರ್ಯಶ್ರೀ ಯಶೋಜ್ಞಾನ ವೈರಾಗ್ಯಂಗಳೆ ಭಗ ಶಬ್ದವಾಚ್ಯಮಾದ ಷಡ್ಗುಣಂಗಳ್ತರದಿಂದೀ ಷಡಂಗಗುಣಂಗಳಯ್ಯಾ, ಭಗವಚ್ಛಬ್ದ ವಾಚ್ಯ ಭಕ್ತಜನ ಸೂಚ್ಯ ಪರಮ ಶಿವಲಿಂಗ ಪರಿಹೃತ ಷಡ್ಭಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮೀ ಷೋಡಶ ಸ್ವರಮೂರ್ತಿ ವಿವರಮೆಂ[ತೆ]ನೆ- ಅ ಶ್ರೀಕಂಠಂ, ಆ ಅನಂತಂ,[ಇ] ಸೂಕ್ಷ್ಮಂ, ಈ ತ್ರಿಮೂರ್ತಿ, ಉ ಅಮರೇಶ್ವರಂ, ಊ ದಿರ್ಘೇಶಂ, ಋ ಭಾರಭೂತಿ, Iೂ ಅತಿದೇಶಂ ಒ ಸ್ಥಾಣುಕಂ, ಓ ಧರಂ, ಏ ಝಂಡೇಶ, ಐ ಜಾತಕ. ಓ ಸದ್ಯೋಜಾತಂ, ಔ ಅನುಗ್ರಹೇಶ್ವರಂ, ಅಂ ಅಕ್ರೂರಂ, ಅಃ ಮಹಾಸೇನಂ. ಇಂತೀ ಮಹಾಲಿಂಗದೂಧ್ರ್ವಪಟ್ಟಿಕಾಖ್ಯ ವಿಶುದ್ಧಿ ಚಕ್ರಕೋಷ*ದಳ ನ್ಯಸ್ತ ಷೋಡಶಸ್ವರ ವಾಚ್ಯರಾದ ರುದ್ರರಿವರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮೀ ಮಹಾವಾಕ್ಯಾರ್ಥಕ್ಕೆ ವೇದದೊಳ್ ಶಿವ ಜೀವೈಕ್ಯಮೆಂದು ತದನುಸಾರಾಗಮದೊಳ್ ಶಿವ ಶಿವ ಶಕ್ತೈಕ್ಯಮೆಂದು- ಮುಳಿದೆಡೆಯೊಳಾ ಪುರುಷ ಪ್ರಕೃತೈಕ್ಯಮೆಂದು ಪರ್ಯಾಯಮಾಗಿರಲದೆಲ್ಲಮುಂ ನೀನಲ್ಲದನ್ಯಥ ಭಾವಮಿಲ್ಲವಯ್ಯಾ, ಪರಮ ಶಿವಲಿಂಗೇಶ್ವರ, ಭಾಸ್ವರ ಕಲ್ಯಾಣ ಗುಣೋತ್ಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ ಶಿವಷಟ್ಚಕ್ರನಿರೂಪಣಾನಂತರದಲ್ಲಿ ಶಕ್ತಿ ಷಟ್ಚಕ್ರಗಳೆಂತನೆ- ಪಿಂದಣೈವತ್ತೊಂದು ರುದ್ರವಾಚ್ಯಬೀಜಂಗಳೆ ಶಕ್ತಿ ಬೀಜಂಗಳಿವಕ್ಕೆ ವಿವರಂ. ಆ ಪೂರ್ಣೋದರಿ ಆ ರಿಜೆ ಇ ಶಾಲ್ಮಲಿ ಈ ಲೋಲಾಕ್ಷಿ ಉ ವರ್ತುಲಾಕ್ಷಿ ಊ ದೀರ್ಘಘೋಣೆ ಋ ದೀರ್ಘಮುಖಿ Iೂ ಗೋಮುಖಿ ಒ ದೀರ್ಘಜಿಹ್ವಾ ಓ ಕುಂಡೋದರಿ ಏ ಊಧ್ರ್ವಕೇಶಿ ಐ ವಿಕೃತಮುಖಿ ಓ ಜ್ವಾಲಾಮುಖಿ ಔ ಉಲ್ಕಮುಖಿ ಅಂ ಶ್ರೀಮುಖಿ ಅಃ ವಿದ್ಯಾಮುಖಿ ಇಂತೀ ಮಹಾಲಿಂಗದ ಶಕ್ತಿಯೂಧ್ರ್ವಪಟ್ಟಿಕಾಖ್ಯ ವಿಶುದ್ಧಿಚಕ್ರದ ಷೋಡಶಕೋಷ*ದಳ ನ್ಯಸ್ತ ಷೋಡಶರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ, ಕೇವಲಹೃದಯದಿಂ ಯಜನಂ ಜ್ಞಾನಜಹೃದಯದಿಂ ಸ್ಥಾಪನಂ ಯೋಗಜಹೃದಯದಿಂ ಪ್ರೋಕ್ಷಣಂ ಭೂತಜಹೃದಯದಿಂ ದೀಕ್ಷೆ ಕಾಮದಹೃದಯದಿಂ ಸರ್ವಕರ್ಮ ವಿಶೇಷವು ಮಾಡಲ್ಪಡುಗುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆ, ಎರಡನೆಯ ಚಂದ್ರಮಂಡಲದ ಪದಿನಾರೆಸಳ್ಗಳಲ್ಲಿ, ಉಮೇಶ್ವರ ಚಂಡೇಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣೇಶ್ವರ ವೃಷಭೇಶ್ವರ ಷಣ್ಮುಖರೆಂಬಷ್ಟ ಗಣೇಶ್ವರರನುತ್ತರಂ ಮೊದಲಾದಷ್ಟದಳಂಗಳಲ್ಲಿ ಪೂಜಿಪುದುಳಿದಷ್ಟದಳಂಗಳಲ್ಲಿ ಭವ ಶರ್ವ ರುದ್ರ ಮಹಾದೇವ ಸೋಮ ಭೀಮೋಗ್ರ ಪಶುಪತಿಗಳೆಂಬಷ್ಟಮೂರ್ತಿಗಳನಾರಾಧಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ[ಪ್ರ]ತಿಪದಾರ್ಥ ಭಾಸ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಮಾ, ಮಂತ್ರಮೂರ್ತಿಯಂ ಧ್ಯಾನಿಸಿ ಪೂಜನಂಗೆಯ್ವುದಂ ಪೇಳ್ವೆನೆಂತೆನೆ- ಪೂರ್ವೋಕ್ತ ಪಂಚಾಕ್ಷರ ಷಡಕ್ಷರಷ್ಪಾಕ್ಷರ ನವಾಕ್ಷರ ದಶಾಕ್ಷರಂಗಳಿಂ ತರದಿಂದಾ ಮಂತ್ರಮೂರ್ತಿಯಂ ಕರೆವುದು, ಮೂರ್ತಿಗೊಳಿಪುದು, ಪ್ರತ್ಯಕ್ಷೀಕರಿಪುದು, ಮಾನಸಾದ್ಯಂತಃಕರಣಮಂ ನಿವೇದಿಪುದು ಪೂಜಿಪುದಿಂತು ಹೃತ್ಕಮಲ ಕರ್ಣಿಕಾಮಧ್ಯದಲ್ಲಿರ್ದ ಮಂತ್ರಮೂರ್ತಿಗೆ ಬ್ರಹ್ಮಮಂತ್ರಂಗಳಿನಂಗಮಂತ್ರಗಳಿಂದೆಯುಂ ಪಾದ್ಯ ಗಂಧಾದಿಗಳನೀವುದು- ಮಾದಿಶಕ್ತಿಗಳು ಸ್ಥಾಪಿಸುವ ಕಾಲದಲ್ಲಿಯಾಯಾಯ ಶಕ್ತಿ ಬೀಜಂಗಳ- ನಂತಾಯಾಯ ಶಕ್ತಿಗಳ ಹೃದಯಂಗಳಲ್ಲಿ ನ್ಯಾಸಂಗೆಯ್ವುದೆಲ್ಲ ಕ್ರಿಯಾಶರೀರವೆಂದುಪದೇಶಿಸಿದೆಯಯ್ಯಾ, ಪರಾತ್ಪರ ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ ಮಾಹೇಶ್ವರಸ್ಥಲಮೆ, ಮಾಹೇಶ್ವರ ಲಿಂಗನಿಷಾ* ಪೂರ್ವಾಶ್ರಯನಿರಸನ ವಾಗದ್ವೈತನಿರಸನಾಹ್ವಾನನಿರಸನ ಅಷ್ಟ[ತನು]ಮೂರ್ತಿನಿರಸನ ಸರ್ವಗತನಿರಸನ ಶಿವಜಗನ್ಮಯ ಭಕ್ತದೇಹಿಕಲಿಂಗಂಗಳೆಂದೊಂಬತ್ತಯ್ಯಾ ಸ್ಥಲಮೆ ಭವದೀಯಾಂಗಮಯ್ಯ, ಭಕ್ತವತ್ಸಲ ಭವಾನೀವಲ್ಲಭ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಮೂಧ್ರ್ವಪಟ್ಟಿಕೆಯೆಂಬ ಕಂಠವೆ ವಿಶುದ್ಧಿಚಕ್ರಮೆನಿಸುಗು- ಮಲ್ಲಿಯ ಷೋಡಶ ಕೋಷ*ಂಗಳೆ ಷೋಡಶ ದಳಂಗಳೆನಿಕ್ಕು. ಮವರಲ್ಲಿ ಅ ಆ ಇ ಈ ಉ ಊ ಋ Iೂ ಒ ಓ ಏ ಐ ಓ ಔ ಅಂ ಅಃ ಎಂಬ ಪದಿನಾರಕ್ಕರಂಗಳ್ನೆಲಸಿರ್ಕುಮೆಂದು ಬೋಧಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದೇಕಾದಶ ಸಕೀಲ- [ಮಾ]ರಕ್ಕರುವತ್ತಾರಾಯಿತದನೊಂದೊಂದರೊಳೊಂದಂ ಬೆರಸೆ ಯಾರರುವತ್ತಾರಾರಾಗಲೊಟನಮಂ ತರದಿಂ ಗಣಿಸಲವರ ರೂಪ ರುಚಿ ತೃಪ್ತಿಗಳ ಸಹಪರಿವಿಡಿಯಂ ನಾನೂರರುವತ್ತೆಂಟುತೆರದರ್ಪಣಮೊಂದೊಂದರೊಳೆ ಆಯಿತ್ತಿನ್ನು- ಮುಳಿದವನೀ ತೆರದಿಂ ಲೆಕ್ಕಿಸ[ಲಂ]ತೆ ಸ್ತೋಮಂಗೂಡಿ ಎರಡು ಸಾವಿರದೆಂಟುನೂರೆಂಟು ತೆರದರ್ಪಣಮಾದುದೆಲ್ಲ ನಿನ್ನ ನಿಜವಿಲಾಸವಯ್ಯಾ, ಪರಮ ಶಿವಲಿಂಗ ಪ್ರಣವಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ ಭೂತಜಹೃದಯಮಂ ಗ್ರಂಥವಿರ್ದಲ್ಲಿ ನೋಡಿಕೊಂಬುದು. ಬಳಿಕ್ಕಂ, ತತ್ವಾಂತಮಂಮಾಂತದೊಡನೆ ಕೂಡಿ ಸ್ವರ ದಶಮಾಂತ ಸಂಜ್ಞಿತವಾದೈಕಾರದೊಡನೆ ಬೆರಸಿ ಬಿಂದು ನಾದ ಸಂಜ್ಞಿತವಾದ ಸೊನ್ನೆಯನೊಂದಿಸೆ ಹ್ರೈಂ ಎಂದು ಕಾಮದಹೃದಯಮೆನಿಕುಮೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ, ಮೂರನೆಯ ಸೂರ್ಯಮಂಡಲದ ಮೂವತ್ತೆರಡೆಸಳ್ಗಳಲ್ಲಿ,್ಞ ಆನಂತ ಸೂಕ್ಷ್ಮ ಶಿವೋತ್ತಮೈಕ ನೇತ್ರೈಕ ಏಕರುದ್ರ ತ್ರಿಮೂರ್ತಿ ಶ್ರೀಕಂಠ ಶಿಖಂಡಿಗಳೆಂಬಷ್ಟ ವಿದ್ಯೇಶ್ವರರುದ್ರರು ಇಂದ್ರಾಗ್ನಿ ಯಮ ನಿಋತಿ ವರುಣ ವಾಯು ಕುಬೇರೀಶಾನರೆಂಬಷ್ಟ ಲೋಕಪಾಲರಂ ಧವ ಧ್ರುವಂ ಸೋಮ ನಪ[ನ]ನಿಲಂ ಅನಲ ಪ್ರತ್ಯೂಷ ಪ್ರಭಾಸರೆಂಬೀಯಷ್ಟವಸುಗಳ ಇಂದ್ರ ಸತ್ಯ ಭೃಂಗಿಯಂತರ್ಲಕ್ಷಣನೆಂಬೀಯಿಂದ್ರದಿಕ್ಕಿನ ಚೌದಳ ವಾಸ್ತವದೇವತೆಗಳ ನಗ್ನಿ ಪೂಷ ವಿತಿ ದಮರೆಂಬಗ್ನಿದಿಕ್ಕಿನ ಚೌದಳದ ವಾಸ್ತವದೇವತೆಗಳು, ಯಮ ಭಾಸ್ಕರ ಪುಷ್ಷದತ್ತ ಬಲಾಷ್ಮರೆಂಬೀ ಯಮದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ನೈಋತ್ಯ ದೌವಾರಿಕ ಸುಗ್ರೀವಾರುಣರೆಂಬೀ ನೈಋತ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವರುಣೌಸುರ ಗಹ್ವರರ ವೇದರೆಂಬೀ ವರುಣದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವಾಯು ನಾಗ ಮುಖ್ಯ ಸೋಮರೆಂಬೀ ವಾಯುದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ಕುಬೇರಅಗ್ಭರಾದಿತ್ಯದಂತಿಗಳೆಂಬ ಕುಬೇರದಿಕ್ಕಿನ ಚೌದಳದ ವಾಸ್ತವದೇವತೆಗಳನು ಈಶಾನ್ಯ ಪರ್ಜನ್ಯ ಜಯಂತ ಸಂಕ್ರಂದರೆಂಬೀ ಈಶಾನ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಮೀ ಪ್ರಕಾರಮಾದ ಮೂವತ್ತೆರಡು ದಳಂಗಳಲ್ಲಿ ಭಾವಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಚಿದ್‍ವ್ಯೋಮ ಪ್ರಭಾಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ, ಪೃಥ್ವಾ ್ಯದಿಭೂತಂಗಳಂ ಪೆತ್ತ ಸದ್ಯಾದಿ ಪಂಚಬ್ರಹ್ಮಮೂರ್ತಿಗಳ ಲಕ್ಷಣಂಗಳಂ ಬೇರೆ ಬೇರೆ ವಿವರಿಸಿದಪೆನೆಂತೆನೆ- ಗೋಕ್ಷೀರ ಶಂಖವರ್ಣದಿಂದೆ, ಜಟಾಮಕುಟದಿಂದೆ, ಚತುರ್ಮುಖದಿಂದೆ, ಚತುರ್ಭುಜದಿಂದೆ, ದ್ವಾದಶನೇತ್ರದಿಂದೆ, ಸರ್ವಾಭರಣಂಗಳಿಂದೆ, ಸದ್ಯೋಜಾತಬ್ರಹ್ಮ ವಿರಾಜಿಕುಂ. ಜಪಾಕುಸುಮವರ್ಣದಿಂದೆ, ಜಟಾಮಕುಟದಿಂದೆ, ಚತುರ್ಮುಖದಿಂದೆ, ಚತುರ್ಭುಜದಿಂದೆ, ದ್ವಾದಶನೇತ್ರದಿಂದೆ, ಸರ್ವಾವಯ ಸಂಪತ್ತಿಯಿಂದೆ, ರಕ್ತವಸ್ತ್ರದಿಂದೆ, ರಕ್ತ[ವ]ಸ್ರೋತ್ತರೀಯದಿಂದೆ,, ದಕ್ಷಿಣಭುಜದ್ವಯ ವಿಲಸಿತಾಭಯ ಟಂಕಂಗಳಿಂದೆ, ವಾಮಭುಜದ್ವಯ ವಿಲಸಿತ ವರಶೂಲಂಗಳಿಂದೆ, ರಕ್ತಗಂಧಾನುಲೇಪದಿಂದೆ, ರಕ್ತಮಾಲ್ಯಂಗಳಿಂದೆ ಸರ್ವಲಕ್ಷಣದಿಂದೆ, ಸರ್ವಾಭರಣದಿಂದೆ, ಸರ್ವವಶ್ಯಕರಮಾದ ವಾಮದೇವಬ್ರಹ್ಮಂ ವಿರಾಜಿಕುಂ. ಪುಡಿಗರ್ಪಿನ ಕಾಂತಿಯಿಂದೀ, ಚತುರ್ಮುಖದಿಂ, ಚತುರ್ಭುಜದಿಂ, ರೌದ್ರರೂಪದಿಂ, ಜಟಾಮಕುಟದಿಂ, ದ್ವಾದಶನೇತ್ರದಿಂ, ದುಷ್ಟ್ರ ಕರಾಳವದನದಿಂ, ವ್ಯಾಘ್ರಚರ್ಮಾಂಬರದಿಂ, ವ್ಯಾಘ್ರಚರ್ಮೋತ್ತರೀಯದೀ, ನೂಪುರಾಂಚಿತ ಚರಣದಿಂ, ಸರ್ವಾಭರಣದಿಂ, ದಿವ್ಯಗಂಧಮಾಲ್ಯಾದಿಗಳಿಂ, ಟಂಕ ಶೂಲ ವರದಭಯಂಗಳಿಂ, ಸರ್ವಾವಯವ ಸಂಯುಕ್ತದಿಂ, ಸರ್ವಲಕ್ಷಣ ಸಂಪತ್ತಿಯಿಂ ಕೂಡಿ ಸರ್ವ ಶತ್ರು ಜಯಕರವಾದಘೋರಬ್ರಹ್ಮಂ ವಿರಾಜಿಕುಂ. ಕುಂಕುಮವರ್ಣ ಚತುರ್ಮುಖದಿಂ, ಚತುರ್ಭುಜದಿಂ, ಜಟಾಮಕುಟದಿಂ, ದ್ವಾದಶನೇತ್ರದಿಂ, ಸರ್ವಾವಯವ ಸಂಯುಕ್ತದಿಂ, ಪೀತಾಂಬರದಿಂ, ಪೀತವಸ್ತ್ರೋತ್ತರೀಯದಿಂ, ಸರ್ವಾಭರಣದಿಂ, ಟಂಕಾಭಯಯುತ ವಾಮಕರಂಗಳಿಂ, ಶೂಲಭಯಾನ್ವಿತ ದಕ್ಷಿಣಹಸ್ತಂಗಳಿಂ, ದಿವ್ಯಗಂಧಾನುಲಿಪ್ತಾಂಗದಿಂ, ದಿವ್ಯಕುಸುಮಂಗಳಿಂ ಸರ್ವ ಸಿದ್ಧಿಪ್ರದವಾದ ತತ್ಪುರುಷಬ್ರಹ್ಮಂ ವಿರಾಜಿಕುಂ. ಸ್ಫಟಿಕವರ್ಣದಿಂ, ಜಟಾಮಕುಟದಿಂ, ಚತುರ್ಮುಖದಿಂ, ದ್ವಾದಶನೇತ್ರದಿಂ, ಚತುರ್ಭುಜದಿಂ, ಸರ್ವಲಕ್ಷಣದಿಂ, ಶುಕ್ಲಾಂಬರದಿಂ, ಶುಕ್ಲವಸ್ತ್ರೋತ್ತರೀಯದಿಂ, ಟಂಕಾಭಯ ಶೂಲವರಾನ್ವಿತ ಕರಚತುಷ್ಪಯದಿಂ, ಸರ್ವಾವಯವ ಸಂಯುತದಿಂ, ಸರ್ವಾಭರಣದಿಂ, ದಿವ್ಯ ಗಂಧ ಮಾಲ್ಯಾದಿಗಳಿಂ ಕೂಡಿ ಸದ್ಯೋಮುಕ್ತಿಪ್ರದಮಾದೀಶಾನಬ್ರಹ್ಮಂ ವಿರಾಜಿಕುಂ. ಇಂತು, ಪಂಚಬ್ರಹ್ಮಾತ್ಮಕಮಾದುದೆ ಸದಾಶಿವತತ್ವವೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಮೊದಲಂಗ ಷಟ್ಸ ್ಥಲದಲ್ಲಿ ಭಕ್ತಸ್ಥಳವೊಂದೆ ಪಿಂಡ ಪಿಂಡಜ್ಞಾನ ಸಂಸಾರಹೇಯ ಗುರುಕರುಣ ಲಿಂಗಧಾರಣ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಭಕ್ತೋಭಯ ತ್ರಿವಿಧಸಂಪಚ್ಚತುರ್ವಿಧಸಾರಸೋಪಾಧಿ ನಿರುಪಾಧಿ ಸಹಜದಾನಂಗಳೆಂದು ಪದಿನೈದು ತೆರನಲ್ಲಿ ನೀನೆ ಆಚಾರಲಿಂಗಮಾಗಿ ನೆಲಸಿರ್ಪೆಯಯ್ಯಾ, ಚಿದ್ಗಗನಚಂದ್ರ ಚಿರಂತನ ಪ್ರಮಥೇಂದ್ರ ಚಿತ್ತಜಗಜ ಮೃಗೇಂದ್ರ ಚಿರಾಯುರ್ದಾಯಿ ಪರಮ ಶಿವಲಿಂಗೇಂದ್ರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಮೆರಡನೆಯ ಚಂದ್ರಮಂಡಲದಳೋಪದಳ ಷೋಡಶಂಗಳಲ್ಲಿ ಪೂರ್ವಾದಿಶಾನಾಂತ ದಳನ್ಯಸ್ತ ಷೋಡಶ ಸ್ವರಂಗಳೊಳ್ಮೊದಲಕಾರ ನಾಮಂಗಳು ಪೇಳ್ವೆನೆಂತೆನೆ- ಆದಿಬೀಜವೆಂದು ವರ್ನಾದಿಯೆಂದು ವರ್ಗಾದಿಯೆಂದಕಲಾದಿಯೆಂದು ಸ್ವರಾದಿಯೆಂದು ಮಾತ್ರಾದಿಯೆಂದು ಪ್ರಕೃತಿಯೆಂದು ಜೀವಾದಿಯೆಂದು ಕಲೆಯೆಂದು ಮಾತ್ರೆಯೆಂದು ಆದಿಯೆಂದು ಸ್ವರವೆಂದೀ ಯಕಾರ ಪರ್ಯಾಯನಾಮಂಗಳು ಪೇಳ್ದಿನ್ನುಳಿದ ಸ್ವ ಪರ್ಯಾಯ ನಾಮಂಗಳ ಬಾಹುಲ್ಯ ಭಾರದಿಂ ಪೇಳ್ದುದಿಲ್ಲಮಂತೆಯೆ ಸೂರ್ಯಮಂಡಲ ದಳ ಲಿಪಿ ನಾಮ ಪರ್ಯಾಯಂಗಳುಮಂ ನಿರವಿಸಲಿಲ್ಲಮಿವೆಲ್ಲಮಂ ಮಂತ್ರಾಗಮಂಗಳಲ್ಲಿ ನೋಡಿಕೊಂಬುದಿಲ್ಲಿಯದು ಪ್ರಾಪಂಚಿಕವೆಂದುಳಿದತಿ ಸೂಕ್ಷ ್ಮವನೆ ಬೋಧಿಸಿದೆಯಯ್ಯಾ. ಪರಾತ್ಪರ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಂಗ ಲಿಂಗ ಶಕ್ತಿ ಭಕ್ತಿ ಹಸ್ತ ಮುಖ[ಪದಾರ್ಥ] ಪ್ರಸಾದಂಗಳಿವಕ್ಕೆ ವಿವರಮಂ ತರದಿಂದುಸಿರ್ವೆನಂಗಮೆನೆ, ತ್ವಂ ಪದ ವಾಚ್ಯ ಕಾರಣ ಸೂಕ್ಷ ್ಮ ಸ್ಥೂಲಾತ್ಮಕ ಭಕ್ತ ಮಾಹೇಶ್ವರ ಪ್ರಸಾದ ಪ್ರಾಣಲಿಂಗಿ ಶರಣೈಕ್ಯರ್ಲಿಂಗಮೆನೆ, ತತ್ವದ ವಾಚ್ಯಮಾದಾಚಾರಲಿಂಗ ಗುರು[ಲಿಂಗ] ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳ್ ಭಕ್ತಿಯನಲಸಿ ಪದವಾಚ್ಯಮಾದ ಶ್ರದ್ಧೆ ನಿಷೆ* ಸಾವಧಾನಮನುಭಾವಮಾನಂದ ಸಮರಸವಿೂಯುಭಯಂಗೂಡಿ ಅಂಗ ಲಿಂಗ ಸಮರಸಮಾದುದಯ್ಯಾ, ಷಡಧ್ವಾತೀತ ಪರಮ ಶಿವಲಿಂಗೇಶ್ವರ, ಪಟೀರದಳ ಭಾಸ್ಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯು ಪೃಥ್ವ ್ಯಪ್ತೇಜೋ ವಾಯ್ವಾಕಾಶಾತ್ಮಂಗಳೆ ತತ್ವಂ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ ಅಂಗಂ. ಸುಚಿತ್ತ ಸುಬುದ್ದಿ ನಿರಂಹಕಾರ ಸುಮನ ಸುಜ್ಞಾನ ಸದ್ಭಾವಂಗಳೆ ಹಸ್ತಂ. ಕರ್ಮಸಾದಾಖ್ಯ ಕರ್ತೃಸಾದಾಖ್ಯ ಮೂರ್ತಿಸಾದಾಖ್ಯ ಶಿವಸಾದಾಖ್ಯ ಮಹಾಸಾದಾಖ್ಯಂಗಳೆಂಬಿವೆ ಸಾದಾಖ್ಯಂ. ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿಯಾದಿಶಕ್ತಿ ಪರಶಕ್ತಿ ಚಿಚ್ಛಕ್ತಿಗಳೆಂಬಿವೆ ಶಕ್ತಿ. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳೆಂಬಿವೆ ಲಿಂಗ. ನಿವೃತ್ತಿ ಪ್ರತಿಷೆ* ವಿದ್ಯೆ ಶಾಂತಿ ಶಾಂತ್ಯಾತೀತೆ ಶಾಂತ್ಯಾತೀತೋತ್ತರೆಗಳೆಂಬಿವೆ ಕಲೆ. ಸದ್ಯಾದಿ ಪರ್ಯಾಯಮಾದ ಘ್ರಾಣಂ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬಿವೆ ಮುಖಂ. ಗಂಧ ರಸ ರೂಪ ಸ್ಪರ್ಶ ತೃಪ್ತಿಗಳೆಂಬಿವೆ ದ್ರವ್ಯಂ. ಶ್ರದ್ಧೆ ನಿಷೆ* ಸಾವಧಾನಮನುಭಾವಮಾನಂದ ಸಮರಸವೆಂಬಿವೆ ಭಕ್ತಿ. ನಕಾರ ಮಃಕಾರ ಶಿಕಾರ[ವಾಕಾರ] ಯಕಾರೋಕಾರಂಗಳೆಂಬಿವೆ ಮಂತ್ರ ಮಿಂತೇಕಾದಶ ಸಕೀಲಮಿದೆಲ್ಲಂ ತ್ವದೀಯ ವಿಮರ್ಶನ ಸ್ವರೂಪಮಯ್ಯಾ, ಪರಮ ಶಿವಲಿಂಗ ಪರೋಕ್ಷಜ್ಞಾನತಾಲಿಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂತರದಿಂ ಪಂಚಬ್ರಹ್ಮಮೂರ್ತಿ ಧ್ಯಾನದ ನಿರೂಪಣಾನಂತರದಲ್ಲಿ ಪಿಂಡಸಾದಾಖ್ಯಮಂ ಪೇಳ್ವೆನೆಂತೆನೆ- ಸದ್ಯೋಜಾತಮುಖವೆ ಮೂರ್ತಿಸಾದಾಖ್ಯ ಪಿಂಡಬ್ರಹ್ಮಂ. ವಾಮದೇವಮುಖವೆ ಅಮೂರ್ತಿಸಾದಾಖ್ಯ ಪಿಂಡಬ್ರಹ್ಮಂ. ಅಘೋರಮುಖವೆ ಕರ್ತೃಸಾದಾಖ್ಯ ಪಿಂಡಬ್ರಹ್ಮಂ. ತತ್ಪುರುಷಮುಖವೆ ಕರ್ಮಸಾದಾಖ್ಯ ಪಿಂಡಬ್ರಹ್ಮಂ. ಈಶಾನಮುಖವೆ ಶಿವಸಾದಾಖ್ಯ ಪಿಂಡಬ್ರಹ್ಮ- ಮಿಂತನ್ಯೋನ್ಯ ಭೇದದಿಂ ಪಂಚಮುಖವೆ ಪಂಚಸಾದಾಖ್ಯ ಪಿಂಡಬ್ರಹ್ಮವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಗಣಸಂಜ್ಞಿತವಾದ ಗ್ ಎಂಬುದನುದ್ಧರಿಸಿ ವನ್ಹಿ ಸಂಜ್ಞಿತವಾದ ರ್ ಎಂಬುದಂ ಬೆರಸೆ ಗ್ರ ಸಂಜ್ಞಿತವಾದ ರ್ ಎಂಬುದಂ ಬೆರಸೆ ಗ್ರ ಎನಿಸಿತ್ತದಂ ಮಾಯಾ ಸಂಜ್ಞಿತವಾದಿಕಾರದೊಳ್ಮಿಶ್ರಿಸೆ ಗ್ರಿ ಎನಿಸಿ ತ್ತದಂ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಳ್ಬೆರಸೆ ಗ್ರಿಂ ಯೆನಿಸಿ ಗೌರೀ ಬೀಜವಾಯಿತ್ತಿದೆ ಪ್ರಕಾರದಲ್ಲಿ ಮಿಕ್ಕ ಶಕ್ತಿಗಳ್ಗೆಯುಮವರವರ ನಾಮಂಗಳ ಮೊದಲಕ್ಕರಂಗಳಲ್ಲಿ ಬೀಜಮಂತ್ರಗಳನರಿವುದೆಂದು ನಿರೂಪಿಸಿದೆಯಯ್ಯಾ, ಪರಮಗುರು ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಮೀ ಶಿವಬೀಜಂ ಸ್ಥೂಲ ಸೂಕ್ಷ ್ಮಪರಂಗಳೆಂದು ಮೂದೆರನಾಗಿರ್ಪುದಿದಕ್ಕೆ ವಿವರಂ- ಸ್ಥೂಲಮೆನೆಯಕ್ಕರಂ. ಸೂಕ್ಷ ್ಮಮೆನೆಯಾಯಕ್ಷರದ ದನಿ. ಪರಮೆನೆ ಆಕಾರಾದಿ ಕ್ಷಕಾರಾಂತವಾದೈವತ್ತಕ್ಕರಂಗಳೊಳಗೆ ಪತ್ತು ಪತ್ತುಗಳು ವಿಭಾಗಿಸಿ, ಭೂಮ್ಯಾದಿ ಪಂಚಭೂತಂಗಳೊಡನೆ ಕಲಸುವುದೆಂತೆನೆ ತರದಿಂ ಅ ಆ ಇ ಈ ಉ ಊ ಋ Iೂ ಒ ಓ ಈ ಹತ್ತು ಪೃಥ್ವಿ. ಏ ಐ ಓ ಔ ಅಂ ಅಃ ಕ ಖ ಗ ಘ ಈ ಹತ್ತು ಅಪ್ಪು. ಙ ಚ ಛ ಜ ರುsು ಞ ಟ ಠ ಡ ಢ ಈ ಹತ್ತು ತೇಜಸ್ಸು. ಣ ತ ಥ ದ ಧ ನ ಪ ಫ ಬ ಭ ಈ ಹತ್ತು ವಾಯು. ಮ ಯ ರ ಲ ವ ಶ ಷ ಸ ಹ ಳ ಯೀ ಹತ್ತು ಆಕಾಶಂ. ಇಂತೈವತ್ತಕ್ಕರಂಗಳೈದು ಪೃತ್ವ ್ಯಪ್ತೇಜೋವಾಯ್ವಾಕಾಶಂಗಳಲ್ಲಿ ನ್ಯಸ್ತಂಗಳಾದವಿನ್ನುಳಿದೈದನೆಯ ಭೂತಸಂಜ್ಞಿತದಿಂ ಪಂಚಮವೆನಿಸಿದ ಪರಿಪೂರ್ಣವಾದ ಸಾಂತವೆ ಪರಮಿಂತು ಸ್ಥೂಲ ಸೂಕ್ಷ ್ಮ ಪರ ಸಂಜ್ಞೆಯ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗ ಪಾರ್ವತೀ ಸಮುತ್ಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಮಗ್ನಿಮಂಡಲದ ನೈಋತ್ಯದಿಕ್ಕಿನೇಕದಳದಲ್ಲಿ ವಕಾರ ಮನದರಾಚೆಯ ಚಂದ್ರಮಂಡಲದ ನೈರುತ್ಯದಿಕ್ಕಿನ ದಳದ್ವಯದ ನೈಋತ್ಯದಳದಲ್ಲಿ ಋಕಾರಮಂ, ನೈಋತ್ಯ ವರುಣರಪದಿಕ್ಕಿನ ದಳದಲ್ಲಿ Iೂಕಾರಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ನೈಋತ್ಯ ದಳದೊಳಗೆ ಇಕಾರಮಂ ನೈಋತ್ಯ ವರುಣರಪದಿಕ್ಕಿನ ದಳದ್ವಯದಲ್ಲಿ ಟಕಾರ ಠಕಾರಂಗಳಂ ನ್ಯಸ್ತಂಗೆಯ್ದು ಭಾವಿಪುದೆಂದೆಯಯ್ಯಾ, ಪರಿಪೂರ್ಣ ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮೀ ಷಡಂಗಮಂತ್ರಗಳೆ ಬೇರೆ ಬೇರೆಯೊಂದೊಂದರೊಳಾರಾರು ತೆರನುಂಟುವಾವಾವವೆನೆ ಪೇಳ್ವೆಂ- ಹ್ರಾಂ ಎಂಬುದು ಹೃದಯಮಂತ್ರಂ. ಹ್ರೀಂ ಎಂಬುದು ಶಿರೋಮಂತ್ರಂ. ಹ್ರೂಂ ಎಂಬುದು ಶಿಖಾಮಂತ್ರಂ. ಹ್ರೈಂ ಎಂಬುದು ಕವಚಮಂತ್ರಂ. ಹ್ರೌಂ ಎಂಬುದು ನೇತ್ರಮಂತ್ರಂ. ಹ್ರಃ ಎಂಬುದಸ್ತ್ರಮಂತ್ರಂ. ಇವಾರುಂ ಶಿವಾಂಗ ಮಂತ್ರಂ. ಹೃದಯಾದ್ಯಸ್ತ್ರಾಂತಮಾದ ಷಡಂಗಮಂತ್ರಗಳ ಚತುರ್ಥಾಂತಮಾಗಿಯುಂ ನಮಸ್ಕಾರಾದಿ ಷಟ್ಟಲ್ಲವುಚ್ಚರಿಪಂದವೆಂತೆನೆ ನಮಃ ಸ್ವಾಹಾ ವಷಟ್ ಹುಂ ವೌಷಟ್ ಫಟ್ ಎಂಬಿವು ಹುಟ್ಟಿಲ್ಲವಂಗಳ್. ಇವರುದಾಹರಣಂ ಓಂ ಹ ಹ್ರಾಂ ಹೃದಯಾಯ ನಮಃ ಓಂ ಹ್ರೀಂ ಶಿರಸೇ ಸ್ವಾಹಾ, ಓಂ ಹ್ರೊಂ ಶಿಖಾಯೈ ವಷಟ್ ಓಂ ಹ್ರೈಂ ಕವಚಾಯ ಹುಂ, ಓಂ ಹ್ರೌಂ ನೇತ್ರತ್ರಯಾಯ ವೌಷಟ್ ಓಂ ಹ್ರಃ ಅಸ್ತ್ರಾಯ ಫಟ್ ಎಂಬ ಷಟ್ಪಲ್ಲವಂಗೂಡಿದುದೇ ಶಿವಾಂಗಮಂತ್ರವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ ದುಗ್ಧ ದಧಿ ಘೃತೇಕ್ಷುರಸ ನಾರಿಕೇಳ ಸ್ಪಾದೋದಕಂಗಳೆಂಬಿವೆ ಸ್ನಾನಂಗಳು ಮತ್ತೆಬಳಿಕ್ಕಮೋಂ ಹ್ರಾಂ ನಮಃಶ್ಯಿವಾಯೋಂ ಹ್ರೀಂ ನಮಶ್ಯಿವಾಯೋಂ ಹ್ರೂಂ ನಮಶ್ಯಿವಾಯೋಂ ಹ್ರೈಂ ನಮಶ್ಯಿವಾಯೋಂ ಹ್ರೌಂ ನಮಶ್ಯಿವಾಯೋಂ ಹ್ರಂಃ ನಮಶಿವಾಯಂಗಳೆಂಬೀ ಮಂತ್ರಂಗಳ್ತ್ವದೀಯ ಮೂರ್ತಿಲಿಂಗಜಪಂಗಳಯ್ಯಾ, ಪರಮ ಶಿವಲಿಂಗ ಚಿದ್ಗಗನ ಪತಂಗಾ. ಇತ್ಯಂಗಲಿಂಗ ಸ್ಥಲಮುಕ್ತಂ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ, ಪೂರ್ವೋಕ್ತ ಸಕಾರಮಂ ಷಷ*ಸ್ವರದೊಡನೆ ಕೂಡೆ ಪಿಂದೆ ಪೇಳ್ದ ಸೊನ್ನೆಯೊಳ್ಕೂಡೆ ಸೂಂ[ವೆಂ]ಬ ಮೂರನೆಯ ಶಕ್ತಿಬೀಜವಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಇನ್ನಷ್ಟು ...